ರಾಂಚಿ(ಜಾರ್ಖಂಡ್),ಜು.17- ವಿದೇಶದಿಂದ ಚಿನ್ನವನ್ನು ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡುಕೊಂಡು ಬಂದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಅಬಕಾರಿ ಅಧಿಕಾರಿಗಳು, ಒಂದು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಕಳ್ಳಸಾಗಣೆಯ ಚಿನ್ನ ಪತ್ತೆಯಾಗಿದೆ. ಪ್ರಯಾಣಿಕರೊಬ್ಬರ ಸಾಮಾನು ಸರಂಜಾಮುಗಳಲ್ಲಿ ಈ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ ಒಂದು ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಈ ಪ್ರಯಾಣಿಕನು ಶಾಜರ್ದಿಂದ ಏರ್ ಅರೇಬಿಯಾ ಜಿ-9435 ವಿಮಾನದಲ್ಲಿ ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್‍ಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಪ್ರಯಾಣಿಕನೊಬ್ಬನ ಸರಂಜಾಮುಗಳಿದ್ದ ಬ್ಯಾಗ್‍ಗೆ ಎಕ್ಸ್-ರೇ ಯಂತ್ರವು ಕೆಲವು ಗಾಢ ಮತ್ತು ದಟ್ಟವಾದ ಲೋಹದ ತಂತಿಗಳನ್ನು ತೋರಿಸಿದೆ.
ಬಳಿಕ ಆತನ ಬ್ಯಾಗ್ ತೆರೆದು ತಪಾಸಣೆಗೊಳಪಡಿಸಿದಾಗ ಬ್ಯಾಗ್‍ನಿಂದ ಬಿಳಿ ರೋಡಿಯಂನಿಂದ ಪಾಲಿಶ್ ಮಾಡಿದ ಕಬ್ಬಿಣದ ಕವರ್‍ನ ಹಿಂದೆ ಚಿನ್ನದಿಂದ ಮಾಡಿದ ನಾಲ್ಕು ಸುತ್ತಿನ ತಂತಿಗಳು ಪತ್ತೆಯಾಗಿವೆ. ವಿದೇಶದೀಂದ ಕಳ್ಳಸಾಗಣೆ ಮಾಡಿಕೊಂಡು ತಂದಿರುವ ಈ ಚಿನ್ನ ಶೇ.99.50ರಷ್ಟು ಶುದ್ಧವಾಗಿದ್ದು, 2,170.300 ಗ್ರಾಂ ತೂಕವುಳ್ಳದ್ದು, ಅದರ ಮೌಲ್ಯವು ಒಂದು ಕೋಟಿಗೂ ಹೆಚ್ಚಿನದೆಂದು ಅಂದಾಜಿಸಲಾಗಿದೆ. ಕಸ್ಟಮ್ಸ್ ಆಕ್ಟ್, 1962ರ ನಿಬಂಧನೆಗಳಡಿ ಚಿನ್ನವನ್ನು ಮುಟ್ಟುಗೋಲು ಹಾಕಿಕೊಕೊಂಡು ಪ್ರಯಾಣಿಕನನ್ನು ಬಂಸಲಾಗಿದೆ.