ಭಾರತದ ವಿರುದ್ಧ ಜಿಹಾದ್ ಪ್ರಚಾರದಲ್ಲಿ ತೊಡಗಿದ್ದ ಅಬ್ದುಲ್ಲಾ ಬಂಧನ

Social Share

ಹೊಸದಿಲ್ಲಿ, ಜು.21- ಭಾರತದ ವಿರುದ್ಧ ಜಿಹಾದ್ ಪ್ರಚಾರದಲ್ಲಿ ತೊಡಗಿರುವ ಪ್ರಬಲ ಮೂಲಭೂತವಾದಿ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಿಹಾರರಲ್ಲಿ ಬಂಧಿಸಿದೆ. ಬಾಂಗ್ಲಾದೇಶ ನಿಷೇಧಿತ ಜಮಾತ್-ಉಲ್-ಮುಜಾಹಿದೀನ್(ಜೆಎಂಬಿ) ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಸಿಸ್ವಾನಿಯಾ ಗ್ರಾಮದ ನಿವಾಸಿ ಅಲಿ ಅಸ್ಗರ್ ಅಲಿಯಾಸ್ ಅಬ್ದುಲ್ಲಾ ಬಿಹಾರಿಯನ್ನು ಬಂಧಿಸಲಾಗಿದೆ.

ಉಗ್ರ ಚಟುವಟಿಕೆಗಳ ತನಿಖೆಗೆ ಸಂಬಂಧಿಸಿದಂತೆ ಬಂಧಿತರಲ್ಲಿ ಈತ ಏಳನೇ ಆರೋಪಿ ಮಂಗಳವಾರ ಬಿಹಾರದ ಪೂರ್ವ ಚಂಪಾರಣ್ ಪ್ರದೇಶದಲ್ಲಿ ನಡೆಸಿದ ಶೋಧದ ವೇಳೆ ಅಸ್ಗರ್‍ನನ್ನು ಬಂಸಲಾಗಿದೆ ಎಂದು ಎನïಐಎ ವಕ್ತಾರರು ತಿಳಿಸಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‍ನ ಐಶ್ಬಾಗಿನಲ್ಲಿ ಬಾಂಗ್ಲಾದೇಶದ ಮೂವರು ಅಕ್ರಮ ವಲಸಿಗರು ಸೇರಿದಂತೆ ಆರು ಸಕ್ರಿಯ ಜೆಎಂಬಿ ಸದಸ್ಯರನ್ನು ಬಂಧಿಸಲಾಗಿತ್ತು ಇವರೊಂದಿಗೆ ಈತ ಸಂಪರ್ಕ ಹೊಂದಿದ್ದ ಎಂದು ಹೇಳಿದ್ದಾರೆ.

ಇವರು ಜೆಎಂಬಿಯ ಯೋಜನೆಗಳು ಅಥವಾ ಸಿದ್ಧಾಂತವನ್ನು ಪ್ರಚಾರ ಮಾಡುವಲ್ಲಿ ಮತ್ತು ಯುವಕರನ್ನು ಜಿಹಾದ್ ನಡೆಸಲು ಪ್ರೇರೇಪಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಭಾರತದ ವಿರುದ್ಧ ಷಡ್ಯಂತ್ರ ರೊಪಿಸಿದ್ದರು ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಭಂದಿಸಿದಂತೆ ಆರಂಭದಲ್ಲಿ ಮಾರ್ಚ್ 14 ರಂದು ಭೋಪಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಮತ್ತು ಏಪ್ರಿಲ್ 5 ರಂದು ಎನïಐಎ ತನಿಖೆ ವಹಿಸಿಕೊಂಡಿತ್ತು.

ಬಂಧಿತರು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಇತರ ಸಹಚರರೊಂದಿಗೆ ರಹಸ್ಯವಾಗಿ ಸಂವಹನ ನಡೆಸಲು ಸಾಮಾಜಿಕ ಮಾಧ್ಯಮದ ಎನ್ಕ್ರಿಪ್ಟ ಮಾಡಿದ ಅಪ್ಲಿಕೇಶನ್‍ಗಳನ್ನು ಬಳಸುತ್ತಿದ್ದರು ಎಂದು ಎನïಐಎ ಅಧಿಕಾರಿಗಳು ತಿಳಿಸಿದ್ದಾರೆ.

Articles You Might Like

Share This Article