ತಾಯಿ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದವನನ್ನು ಕೊಚ್ಚಿ ಕೊಂದ ಮಗ

Spread the love

ಗುಬ್ಬಿ,ಸೆ.27- ತಾಯಿ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದರೆ ಯಾರೂ ಸಹಿಸಲ್ಲ. ಇನ್ನು ಅಂತಹ ಮಹಾತಾಯಿಯೊಂದಿಗೆ ಅಕ್ರಮ ಸಂಬಂಧಕ್ಕೆ ಸಹಕರಿಸಿ ಎಂದು ಮಗನನ್ನು ಕೇಳಿದರೆ ಆತ ಸುಮ್ಮನಿರತ್ತಾನೆಯೇ ? ಇಲ್ಲಾಗಿದ್ದೂ ಅದೇ. ಕುಟುಂಬ ತೊರೆದಿದ್ದ ವ್ಯಕ್ತಿಯೊಬ್ಬ ನಿನ್ನ ತಾಯಿಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಳ್ಳಲು ಸಹಕರಿಸು ಎಂದವನನ್ನು ಮಗ ಮಚ್ಚಿನಿಂದ ಕೊಚ್ಚಿ ಕೊಂದು ಹಾಕಿರುವ ಘಟನೆ ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯ ಮುದಿಗೆರೆಯಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಕಸಬಾ ಹೋಬಳಿ ಮುದಿಗೆರೆ ಗ್ರಾಮದ ನಿವಾಸಿ ರಾಜಣ್ಣ (55) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಮಹೇಶ (23)ಕೊಲೆ ಮಾಡಿದ ಯುವಕ. ರಾಜಣ್ಣ ಎರಡು ವರ್ಷಗಳಿಂದ ಕುಟುಂಬದೊಂದಿಗೆ ಜಗಳ ಮಾಡಿಕೊಂಡು ಒಬ್ಬಂಟಿಯಾಗಿದ್ದ. ತಂದೆಯ ಖಾಲಿ ನಿವೇಶನದಲ್ಲಿ ಗುಡಿಸಲು ನಿರ್ಮಿಸಿಕೊಂಡು ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದ.

ನಿನ್ನೆ ಮಧ್ಯಾಹ್ನ ಮಹೇಶನ ಮನೆಗೆ ಹೋಗಿ ಕಾಫಿ ಕುಡಿದು ಬಂದಿದ್ದ ರಾಜಣ್ಣ ರಾತ್ರಿ ನನ್ನ ಮನೆಗೆ ಬಾ, ಎಣ್ಣೆ ಹೊಡೆಯೋಣ ಎಂದು ಪುಸಲಾಯಿಸಿ ಬಂದಿದ್ದ. ರಾತ್ರಿ ಮನೆಗೆ ಬಂದ ಮಹೇಶನೊಂದಿಗೆ ರಾಜಣ್ಣ ಕಂಠಪೂರ್ತಿ ಕುಡಿದಿದ್ದ. ಕುಡಿದ ಮತ್ತಿನಲ್ಲಿ ನಾನು ಒಬ್ಬಂಟಿಯಾಗಿದ್ದೇನೆ. ನಿಮ್ಮ ತಾಯಿಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಳ್ಳುತ್ತೇನೆ. ನೀನು ಸಹಕರಿಸು ಎಂದು ಕೇಳಿಕೊಂಡ.

ಇದರಿಂದ ಮಹೇಶ ರೊಚ್ಚಿಗೆದ್ದು ರಾಜಣ್ಣನ ಮೇಲೆ ಮುಗಿಬಿದ್ದು ಪಕ್ಕದಲ್ಲೇ ಇದ್ದ ಮರ ಕಡಿಯುವ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿರುವ ಗುಬ್ಬಿ ಠಾಣೆ ಎಸ್‍ಐ ನಟರಾಜು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Facebook Comments