ಹಾಸನ,ಆ.8-ತಾಲೂಕಿನೆಲ್ಲೆಡೆ ಸುರಿಯುತ್ತಿರುವ ಭಾರೀ ಮಳೆಯಿಂದ ರೈತರು ಸಂಕಷ್ಟಕ್ಕೀಡಾಗಿದರೆ, ಮತ್ತೊಂದೆಡೆ ಕಾಡಾನೆಗಳ ಹಾವಳಿ ಮುಂದುವರೆದಿದೆ. ಕಾಡಾನೆ ದಾಳಿಯಿಂದ ಅಮಾಯಕ ವ್ಯಕ್ತಿಯೋಬ್ಬರು ಇಂದು ಬೆಳಿಗ್ಗೆ ಮೃತಪಟ್ಟಿರುವ ಘಟನೆ ತಾಲೂಕಿನ ಸುಳ್ಳಕ್ಕಿ ಸಮೀಪ ನಡೆದಿದೆ.
ಮಂಜುನಾಥ್ ಆಲಿಯಾಸ್ ಕೆಂಪಣ್ಣ (53) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ. ತಾಲೂಕಿನ ಸುಳ್ಳಕ್ಕಿ ಸಮೀಪದ ಮೇಲಕೆರೆಯಲ್ಲಿ ಮಂಜುನಾಥ್ ಬೆಳಗ್ಗೆ ಗದ್ದೆ ಕೆಲಸಕ್ಕೆ ಹೋಗುವಾಗ ಏಕಾಏಕಿ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.
ಕಾಡಾನೆಗಳು ಮನುಷ್ಯರನ್ನು ಬಲಿ ಪಡೆಯುತ್ತಿದ್ದು, ಕಳೆದ 2 ದಿನಗಳ ಹಿಂದಷ್ಟೆ ಹೆತ್ತೂರು ಹೋಬಳಿ ಕಲ್ಲುತೋಟದಲ್ಲಿ ರಾಮಕೃಷ್ಣ ಎಂಬವರನ್ನು ಕಾಡಾನೆಯೊಂದು ತುಳಿದು ಹಾಕಿತ್ತು.
ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಾಗೂ ಸಂಬಂಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.