ಆರತಕ್ಷತೆ ವೇಳೆ ರಸಗುಲ್ಲಕ್ಕಾಗಿ ಬಿತ್ತು 4 ಜನರ ಹೆಣ..!

Social Share

ಮೈನ್ಪುರಿ,(ಉತ್ತರ ಪ್ರದೇಶ)ಫೆ.19-ವಿವಾಹದ ಆರತಕ್ಷತೆ ವೇಳೆ ರಸಗುಲ್ಲ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನನ್ನು ನಾಲ್ಕು ಜನರು ಹೊಡೆದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೇಯ ಬಿಕಾಪುರ ಗ್ರಾಮದಲ್ಲಿನಡೆದಿದೆ.

ಮೃತನನ್ನು ವಧುವಿನ ಸಂಬಂ ರಣವೀರ್ ಸಿಂಗ್ ಎಂದು ಗುರುತಿಸಲಾಗಿದ್ದು ಆರಂಬದಲ್ಲೇ ರಸಗುಲ್ಲದ ವಿಚಾರವಾಗಿ ವಧು ಹಾಗೂ ವರನ ಕಡೆಯವರ ನಡುವೆ ಜಗಳ ಶುರುವಾಗಿದ್ದು ಬಳಿಕ ಅದು ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಒಂದು ಬಕೆಟ್ ಪೂರ್ತಿ ರಸಗುಲ್ಲವನ್ನು ಕದ್ದುಕೊಂಡು ಹೋಗುತ್ತಿದ್ದರು ಅದನ್ನು ಕಂಡ ವರನ ಕಡೆಯವರು ವಧುವಿನ ಸಂಬಂಧಿಗೆ ಪ್ರಶ್ನಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಗುಂಪುಗಳಾಗಿ ಗಲಾಟೆ ಬೇರೆಯ ಸ್ಥಿತಿಗೆ ತಲುಪಿದ್ದು ಹೊಡೆದಾಡಿಕೊಂಡಿದ್ದಾರೆ.

ಸರಣಿ ಅಪಘಾತ : ಶಾಲಾ ಮಕ್ಕಳು ಸೇರಿ ಹಲವರಿಗೆ ಗಾಯ

ಹರಿಯಾಣದ ಮೂಲದ 50 ವರ್ಷದ ರಣವೀರ್ ಸಿಂಗ್ ಮೇಲೆ ದೊಣ್ಣೆ ಹಾಗೂ ಕಬ್ಬಿಣದ ರಾಡ್‍ನಿಂದ ಹಲ್ಲೇ ಮಾಡಲಾಗಿದೆ. ಇನ್ನೊಂದೆಡೆ ಈತನ ಸಹೋದರ ಸಂಬಂಧಿ ರಾಮ್ ಕಿಶೋರ್ ಮೇಲೆಯೂ ಹಲ್ಲೇ ಮಾಡಲಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದಾರೆ.ಕೆಲವರು ನಾಪತ್ತೆಯಾಗಿದ್ದಾರೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

Man, Killed, Fight, Rasgulla, Wedding, Mainpuri,

Articles You Might Like

Share This Article