ಚಿತ್ರದುರ್ಗ,ಜು.11-ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಹಾಗೂ ಹಣಕಾಸಿನ ವಿಚಾರಕ್ಕೆ ಚಿಕ್ಕಪ್ಪನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹೊಳಲ್ಕೆರೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿತ್ರಲಿಂಗ(21) ಬಂಧಿತ ಆರೋಪಿ. ಹೊಳಲ್ಕೆರೆ ತಾಲ್ಲೂಕು ಚಿತ್ರಹಳ್ಳಿ ಗೊಲ್ಲರಹಟ್ಟಿ ಗ್ರಾಮದ ಈಶ್ವರಪ್ಪ(65) ಕೊಲೆಯಾದ ಮೃತ ದುರ್ದೈವಿ. ಇದೇ ಗ್ರಾಮದ ಈಶ್ವರಪ್ಪನ ಸೋದರ ಸಂಬಂಧಿ ಮಗ ಚಿತ್ರಲಿಂಗ ಕೊಲೆಯಾದ ಈಶ್ವರಪ್ಪನ ಮೊಮ್ಮಗಳನ್ನು ಪ್ರೀತಿಸುತ್ತಿದ್ದ, ಅಲ್ಲದೆ,ಈಶ್ವರಪ್ಪನ ಬಳಿ ಮೊಮ್ಮಗಳನ್ನು ನನಗೆ ಕೊಟ್ಟು ಮದುವೆ ಮಾಡುವಂತೆ ಕೇಳಿದ್ದ.
ಆದರೆ ಇದಕ್ಕೆ ಒಪ್ಪದ ಈಶ್ವರಪ್ಪನನ್ನು ಹನುಮನಕಟ್ಟೆಗೆ ಹೋಗಿ ಬರೋಣವೆಂದು ಕರೆದುಕೊಂಡು ಹೋಗಿದ್ದು, ಅರಸನ ಘಟ್ಟ ಗ್ರಾಮದ ಕಣಿವೆ ಹತ್ತಿರದ ತೋಟದ ಬಳಿ ಸಿಗರೇಟ್ ಸೇದುತ್ತಿದ್ದ ವೇಳೆ ದೊಣ್ಣೆಯಿಂದ ತಲೆಗೆ ಹೊಡೆದು ನಂತರ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ.
ಈ ಸಂಬಂಧ ಈಶ್ವರಪ್ಪನ ಸಂಬಂಕರು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ, ಸಿಪಿಐ ರವೀಶ್ ಪಿಎಸ್‍ಐ ಬಾಹುಬಲಿ ಎಂ. ಪಡನಾಡ, ಚಿತ್ರಹಳ್ಳಿ ಪಿಎಸ್‍ಐ ಆಶಾ ಹಾಗೂ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಿಕೊಡಲು ಒಪ್ಪದೆ ನನ್ನನ್ನು ನಿಂದಿಸಿದ ಕಾರಣ, ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಕೊಲೆ ಆರೋಪಿಯನ್ನು ಬಂಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಕಾಧಿರಿ ಕೆ. ಪರಶುರಾಮ್ ಶ್ಲಾಘಿಸಿದ್ದಾರೆ.