ದೇವಸ್ಥಾನಕ್ಕೆ ತೆರಳಿದ್ದ ಯುವಕನ್ನು ಕೊಂದುಹಾಕಿದ ಚಿರತೆ

Social Share

ತಿ.ನರಸೀಪುರ. ನ.01 -ದೇವಸ್ಥಾನಕ್ಕೆ ತೆರಳಿದ್ದ ಯುವಕನೊಬ್ಬನ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ತಾಲೂಕಿನ ಉಕ್ಕಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಂಭವಿಸಿದೆ.

ತಾಲೂಕಿನ ಎಂ.ಎಲ್ .ಹುಂಡಿ ಗ್ರಾಮದ ಚನ್ನ ಮಲ್ಲದೇವರು ಎಂಬುವರ ಪುತ್ರ ಮಂಜುನಾಥ್ (22)ಎಂಬಾತನೇ ಚಿರತೆ ದಾಳಿಗೆ ಬಲಿಯಾದ ಯುವಕನಾಗಿದ್ದು, ಈತ ಮೈಸೂರಿನ ಕಾಲೇಜೊಂದರಲ್ಲಿ ಬಿ.ಕಾಂ.ವ್ಯಾಸಾಂಗ ಮಾಡುತ್ತಿದ್ದ.

 ಕಾರ್ತಿಕ ಮಾಸದ ಅಂಗವಾಗಿ   ಗ್ರಾಮಕ್ಕೆ ಬಂದಿದ್ದ ಆತ  ನಿನ್ನಚೆನ್ನಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ತಪ್ಪಲಿನ ಮುದ್ದುಮಾರಮ್ಮ ದೇವಸ್ಥಾನಕ್ಕೆ ಪೂಜೆಗೆ ಹೋಗಿದ್ದ ಸಂಧರ್ಭದಲ್ಲಿ ಚಿರತೆ ಈತನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ.

ಯುವಕನ ಮೇಲೆ ಚಿರತೆ ದಾಳಿ ಮಾಡಿರುವುದನ್ನು ಕಂಡು ಓಡಿಸಲು ಪ್ರಯತ್ನಮಾಡಿದರಾದರೂ ರಕ್ಷಿಸಲು ಸಾಧ್ಯವಾಗಲಿಲ್ಲ ಯುವಕನನ್ನು ಹೊತ್ತೊಯ್ದು ಬೆಟ್ಟದ ಮೇಲಿನ ಬಂಡೆ ಕಲ್ಲುಗಳ ಮದ್ಯೆ ಬಿಟ್ಟು ಚಿರತೆ ಪರಾರಿಯಾಗಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-11-2022)

ಘಟನೆಯಿಂದ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ.ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಿದ್ದು ಕೂಡಲೆ ಅವುಗಳನ್ನು ಸೆರೆಹಿಡಿದು ಗ್ರಾಮಸ್ಥರಲ್ಲಿ ಇರುವ ಆತಂಕವನ್ನು ಹೋಗಲಾಡಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಜಿಲ್ಲಾ ಸಂಚಾಲಕ ಕಳ್ಳೀಪುರ ಮಹದೇವಸ್ವಾಮಿ ಹಾಗು ಗ್ರಾಮದ ಮುಖಂಡರು ಅರಣ್ಯ ಇಲಾಖೆಯ ಅಕಾರಿಗಳನ್ನು ಒತ್ತಾಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಶಾಸಕ ಎಂ.ಅಶ್ವಿನ್ ಕುಮಾರ್ ಭೇಟಿ  ನೀಡಿ ಮೃತ ಯುವಕನ ಕುಟುಂಬಕ್ಕೆ ಸಾಂತ್ವನ ಹೇಳಿದರು.ಅಲ್ಲದೇ ಸರ್ಕಾರದಿಂದ ದೊರಕಬಹುದಾದ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದಾರೆ.

ನರಹಂತಕ ಚಿರತೆ ಸೆರೆಹಿಡಿಯಲು ಕೂಡಲೇ ಬೋನು ಇಡುವಂತೆ ಸ್ಥಳದಲ್ಲಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗ್ರಾ.ಪಂ.ಸದಸ್ಯ ಅಡುಗೆ ಕುಮಾರ್ ಇದ್ದರು.

Articles You Might Like

Share This Article