ಕೊಡಿಸಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿ ಕೊಲೆ

Social Share

ಬೆಂಗಳೂರು,ಆ.23-ಬೇರೆಯ ವರಿಂದ ಕೊಡಿಸಿದ್ದ ಸಾಲವನ್ನು ವಾಪಸ್ ಕೊಡುವಂತೆ ಕೇಳಲು ಮನೆ ಬಳಿ ಬಂದಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಮಾರತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವೆಂಕಟೇಶಪ್ಪ(65) ಕೊಲೆಯಾಗಿ ರುವ ವ್ಯಕ್ತಿ. ವೆಂಕಟೇಶಪ್ಪ ಅವರುನಂಜುಂಡರೆಡ್ಡಿ ಮತ್ತು ಪ್ರಕಾಶ್ ಎಂಬುವರಿಂದ 5 ಲಕ್ಷ ಮತ್ತು 6 ಲಕ್ಷ ರೂ.ಗಳಂತೆ ಒಟ್ಟು 11 ಲಕ್ಷ ಹಣವನ್ನು ಮುನಿಕೊಳಲದ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಾಗಿರುವ ಶಿವಪ್ಪನಿಗೆ ಕೊಡಿಸಿದ್ದರು.

ಶಿವಪ್ಪ ಸರಿಯಾಗಿ ಸಾಲ ಹಿಂದಿರುಗಿಸಿರಲಿಲ್ಲ. ವೆಂಕಟೇಶಪ್ಪ ಈ ವಿಷಯ ತಿಳಿದು, ಕಳೆದ ಶನಿವಾರ ನಂಜುಂಡ ರೆಡ್ಡಿ ಮತ್ತು ಪ್ರಕಾಶ್‍ರನ್ನು ಕರೆದುಕೊಂಡು ಆತನ ಮನೆ ಬಳಿಗೆ ಹೋಗಿದ್ದಾರೆ. ಸಾಲ ಕೇಳಲು ಮನೆ ಬಳಿ ಬಂದಿದ್ದರಿಂದ ಕೋಪಗೊಂಡ ಶಿವಪ್ಪ ಅವರೊಂದಿಗೆ ಜಗಳವಾಗಿ ಮಾತಿಗೆ ಮಾತು ಬೆಳೆದಿದೆ. ಆ ಸಂದರ್ಭದಲ್ಲಿ ಕೈಗೆ ಸಿಕ್ಕಿದ ಕ್ರಿಕೆಟ್ ಬ್ಯಾಟ್‍ನಿಂದ ವೆಂಕಟೇಶಪ್ಪನವರಿಗೆ ಶಿವಪ್ಪ ಹೊಡೆದಿದ್ದ.

ಗಂಭೀರ ಗಾಯಗೊಂಡಿದ್ದ ವೆಂಕಟೇಶಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾರೆ. ಈ ಸಂಬಂಧ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿ ಶಿವಪ್ಪನನ್ನು ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article