ಹೆಂಡತಿ-ಮಕ್ಕಳನ್ನು ಕೊಂದು ಹೂತಿಟ್ಟ ಪತಿ, 2 ತಿಂಗಳ ನಂತರ ಪ್ರಕರಣ ಬೆಳಕಿಗೆ

Social Share

ರತ್ಲಾಮ್(ಮದ್ಯಪ್ರದೇಶ), ಜ. 23- ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಮನೆಯಂಗಳದಲ್ಲಿ ಹೂತು ಹಾಕಿರುವ ಘಟನೆ ನಗರದ ವಿಂದ್ಯಾವಾಹಿನಿ ಅಮರಪಾಲಿ ಕಾಲೋನಿಯಲ್ಲಿ ನಡೆದಿದ್ದು, ಎರಡು ತಿಂಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ.

ಮಹಿಳೆ ಹಾಗೂ ಮಕ್ಕಳು ನಾಪತ್ತೆಯಾದ ಘಟನೆ ಸಂಬಂಧ ಸ್ಥಳೀಯರು ನೀಡಿದ್ದ ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಈ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರತ್ಲಾಮ್ ಜಿಲ್ಲೆಯ ನಿವಾಸಿ ಸೋನು ತಲೆವಾಡೆ ರೈಲ್ವೆ ಇಲಾಖೆಯಲ್ಲಿ ಗ್ಯಾಂಗ್ ಮೆನ್ ಆಗಿ ಕೆಲಸ ಮಾಡುತ್ತಿದ್ದ. ಈತ ತನ್ನ ಎರಡನೇ ಪತ್ನಿ ಜೊತೆ ಸಂಸಾರ ಮಾಡುತ್ತಿದ್ದು, ಇವರಿಗೆ ಏಳು ವರ್ಷದ ಮಗ ಹಾಗೂ ನಾಲ್ಕು ವರ್ಷದ ಮಗಳಿದ್ದರು. ಇತ್ತೀಚೆಗೆ ಕುಟುಂಬದಲ್ಲಿ ವಿರಸ ಉಂಟಾಗಿತ್ತು.

ಕೋಪದಲ್ಲಿ ತನ್ನಿಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಕೊಲೆ ಮಾಡಿ ಸ್ನೇಹಿತನ ಸಹಾಯದಿಂದ ಮನೆಯಂಗಳದಲ್ಲಿ ಮೂರು ಶವಗಳನ್ನು ಹೂತು ಹಾಕಿದ್ದಾನೆ. ನಂತರ ದೈನಂದಿನಂತೆ ತನ್ನ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾನೆ.

ಕಾಂಗ್ರೆಸ್ ಹೈಕಮಾಂಡ್‌ಗೆ 1000 ಕೋಟಿ ರೂ.ಕಪ್ಪ ಕೊಟ್ಟ ಸಾಕ್ಷಿಯಿದೆ : ಬಿಜೆಪಿ ಹೊಸ ಬಾಂಬ್

ಈತನ ಪತ್ನಿ ಮತ್ತು ಮಕ್ಕಳು ಎರಡು ತಿಂಗಳಾದರೂ ಕಾಣದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸುತ್ತಮುತ್ತಲಿನ ಜನ ನಾಪತ್ತೆ ದೂರು ದಾಖಲಿಸಿದಾಗ ಪೊಲೀಸರಿಗೆ ಗಂಡನ ಮೇಲೆ ಅನುಮಾನ ಮೂಡಿದೆ.

ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ದುಷ್ಕøತ್ಯ ಬಯಲಾಗಿದೆ. ನಿನ್ನೆ ಸಂಜೆ ಆರೋಪಿಯ ಮನೆಗೆ ತೆರಳಿ ಅಂಗಳದಲ್ಲಿ ಹೂತು ಹಾಕಿದ್ದ ಶವಗಳನ್ನು ಹೊರ ತೆಗೆದಿದ್ದಾರೆ. ಮೃತದೇಹಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

10 ಜನರನ್ನು ಕೊಂದ ಹಂತಕ 72 ವರ್ಷದ ವೃದ್ಧ..!

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ತಿವಾರಿ ಸೇರಿದಂತೆ ಹಿರಿಯ ಅಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ದುಷ್ಕøತ್ಯಕ್ಕೆ ಸಹಕರಿಸಿದ ಆರೋಪಿಯ ಸ್ನೇಹಿತನನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Man, killed, wife, 2 children, buried, bodies, Madhya Pradesh,

Articles You Might Like

Share This Article