ಹೆಂಡತಿ-ಮಗುವನ್ನು ಬರ್ಬರವಾಗಿ ಹತ್ಯೆಗೈದ ಪಾಪಿ ಪತಿ

Social Share

ಚೇಳೂರು,ಅ.19- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹೆಂಡತಿ ಹಾಗೂ ಮಗುವನ್ನು ಬರ್ಬರವಾಗಿ ಪತಿ ಹತ್ಯೆಗೈದಿರುವ ಘಟನೆ ಗುಬ್ಬಿ ತಾಲ್ಲೂಕಿನ ಕೊಂಡ್ಲಿ ಸಮೀಪದ ಮಾವಿನಹಳ್ಳಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಕವಿತ (24) ಹಾಗೂ ಜೀವನ್ (4) ಹತ್ಯೆಯಾದ ತಾಯಿ-ಮಗು. ಸ್ವಾಮಿ ಬಂತ ಆರೋಪಿ.

ಇಂದು ಬೆಳಗಿನ ಜಾವ ಪತಿ ಹಾಗೂ ಮಗುವನ್ನು ಆರೆಯಿಂದ ತಿವಿದು ಪರಾರಿಯಾಗುತ್ತಿದ್ದಾಗ ಗ್ರಾಮಸ್ಥರು ಸ್ವಾಮಿಯನ್ನು ಹಿಡಿದು ಕೈ ಕಾಲು ಕಟ್ಟಿ ಪೆÇಲೀಸರಿಗೆ ಒಪ್ಪಿಸಿದ್ದಾರೆ.ತಾಯಿ ಹಾಗೂ ಮಗುವಿಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.

ಸ್ವಾಮಿ ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೊಗಿ ಬಂದಿದ್ದ. ಸುದ್ದಿ ತಿಳಿಯುತ್ತಿದ್ದಂತೆ ಗುಬ್ಬಿ ಠಾಣೆಯ ಸಿಪಿಐ ನದಾಫ್ ಹಾಗೂ ಚೇಳೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Articles You Might Like

Share This Article