ಮೊಬೈಲ್‍ನಲ್ಲೇ ಕಾಲ ಕಳೆಯುತ್ತಿದ್ದ ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

Social Share

ಚೆನ್ನೈ,ನ.8- ಹೆಂಡತಿ ಸದಾ ಮೊಬೈಲ್‍ನಲ್ಲೇ ಕಾಲ ಕಳೆಯುತ್ತಾಳೆಂದು ಆಕೆಯ ಕತ್ತು ಹಿಸುಕಿ ಪತಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ತಮಿಳು ನಾಡಿನ ತಿರುಪ್ಪೂರ್ ಜಿಲ್ಲೆಯ ದಿಂಡುಗಲ್‍ನಲ್ಲಿ ನಡೆದಿದೆ.

ಚಿತ್ರಾ ಕೊಲೆಯಾದ ಮಹಿಳೆಯಾಗಿದ್ದು ಈಕೆಯ ಪತಿ ಅಮೃತಲಿಂಗಂನನ್ನು ಪೊಲೀಸರು ಬಂಧಿಸಿದ್ದಾರೆ. ರಾತ್ರಿಯಾದರೂ ಮೊಬೈಲ್‍ನಲ್ಲಿ ಸಾಮಾಜಿಕ ತಾಣ ನೋಡುವಾಗ ಪತ್ನಿಗೆ ಮೊದಲು ಬುದ್ದಿ ಹೇಳಿದ್ದಾನೆ ಆಕೆ ಕೇಳದಿದ್ದಾಗ ಕೋಪಗೊಂಡ ಪತಿ ಶಾಲಿನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾನೆ.

ಮುರುಘಾ ಶ್ರೀಗಳಿಗೆ ತಕ್ಕ ಶಿಕ್ಷೆಯಾಗಬೇಕು: ಯಡಿಯೂರಪ್ಪ

ತೆನ್ನಂ ಪಾಳಯಂ ತರಕಾರಿ ಮಾರುಕಟ್ಟೆಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದ ಅಮೃತಲಿಂಗಂ ಮತ್ತು ಚಿತ್ರಾ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ದಂಪತಿ ತಿರುಪುರದ ಸೆಲ್ಲಂ ನಗರದಲ್ಲಿ ವಾಸಿಸುತ್ತಿದ್ದರು.

ಪತ್ನಿ ಚಿತ್ರಾ ಅವರು, ಟಿಕ್‍ಟಾಕ್ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ಚಾಟ್ ವಿಡಿಯೋ ಮಾಡುತ್ತಿದ್ದರು ಇವರಿಗೆ 33ಸಾವಿರ ಪಾಲೋಒವರ್ ಇದ್ದರು ಇಡೀ ದಿನ ಮೊಬೈಲïನಲ್ಲಿ ಮುಳುಗಿರುವುದಕ್ಕೆ ಕೋಪಗೊಂಡಿದ್ದ ಅಮೃತಲಿಂಗಂ ನಡುವೆ ಜಗಳವಾಗುತ್ತಿತ್ತು.

ಹಿರಿಯ ನಾಯಕ ಎಲ್.ಕೆ.ಅಡ್ವಾಣಿಗೆ ಹುಟ್ಟು ಹಬ್ಬದ ಶುಭ ಕೋರಿದ ಪ್ರಧಾನಿ

ಈತೀಚೆಗೆ ಮದುವೆಗೆಂದು ಚೆನ್ನೈಗೆ ಹೋಗಿ ಒಂದು ವಾರ ಬಿಟ್ಟು ಮನೆಗೆ ಬಂದಿದ್ದು ತನ್ನ ಚಾಳಿ ಮುಂದುವರೆಸಿದ ಪರಿಣಾಮ ಪತಿ ತಾಳ್ಮೆ ಕಳೆದುಕೊಂಡು ಕೊಲೆ ಮಾಡಿದ್ದಾನೆ.

Articles You Might Like

Share This Article