ವಂಚನೆ ಮಾಡಿದವನನ್ನು ಕೊಂದು ಶವದ ಜೊತೆ ಪೊಲೀಸರಿಗೆ ಶರಣಾದ

Social Share

ಬೆಂಗಳೂರು, ನ.22- ಲೋನ್ ಕೊಡಿಸುವುದಾಗಿ ಹೇಳಿ ಹಣವನ್ನು ಪಡೆದು ವಂಚಿಸಿದ್ದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿ ಕಾರಿನಲ್ಲಿ ಶವ ಇಟ್ಟುಕೊಂಡು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ನಂಜನಗೂಡು ಮೂಲದ ಮಹೇಶಪ್ಪ(45) ಕೊಲೆಯಾದ ವ್ಯಕ್ತಿ. ಆರೋಪಿ ರಾಮಮೂರ್ತಿ ನಗರ ಜಯಂತಿ ನಗರದ ನಿವಾಸಿ ರಾಜಶೇಖರ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ರಾಜಶೇಖರ ವೃತ್ತಿಯಲ್ಲಿ ಕಾರು ಮೆಕಾನಿಕ್.

ಮಹೇಶಪ್ಪ ಸಂಘ-ಸಂಸ್ಥೆಗಳಿಂದ ಲೋನ್ ಕೊಡಿಸುವುದಾಗಿ ಹೇಳಿ ರಾಜಶೇಖರ ಹಾಗೂ ಆತನ ತಾಯಿಯಿಂದ ಹಣ ಪಡೆದುಕೊಂಡು ಲೋನ್ ಕೊಡಿಸದೇ ಸಬೂಬು ಹೇಳುತ್ತಿದ್ದನು. ನಿನ್ನ ಜೊತೆ ಮಾತನಾಡಬೇಕೆಂದು ನಂಜನಗೂಡಿನಿಂದ ಮಹೇಶನಪ್ಪನನ್ನು ಕಾರಿನಲ್ಲಿ ಕರೆದುಕೊಂಡು ಬೆಂಗಳೂರಿಗೆ ಬರುತ್ತಿದ್ದಾಗ ರಾತ್ರಿ 1 ಗಂಟೆ ಸುಮಾರಿನಲ್ಲಿ ಅವಲಹಳ್ಳಿ ಬಳಿ ಬರುತ್ತಿದ್ದಂತೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಜಗಳವಾಗಿದೆ.

ಮಂಗಳೂರಲ್ಲಿ ಸ್ಪೋಟ ಸಂಭವಿಸಿದ ಸ್ಥಳಕ್ಕೆ ಗೃಹ ಸಚಿವರ ಭೇಟಿ

ಆ ವೇಳೆ ಕಾರಿನಲ್ಲೇ ಇಬ್ಬರು ಕೈ-ಕೈ ಮಿಲಾಯಿಸಿಕೊಂಡಿದ್ದು, ರಾಡಿನಿಂದ ಮಹೇಶಪ್ಪನಿಗೆ ಮನಬಂದಂತೆ ತಲೆ ಹಾಗೂ ಕೈಕಾಲುಗಳಿಗೆ ಹಲ್ಲೆ ನಡೆಸಿದ್ದರಿಂದ ಆತ ಮೃತಪಟ್ಟಿದ್ದಾನೆ. ರಾಜಶೇಖರನಿಗೆ ಮುಂದೇನು ಮಾಡಬೇಕೆಂಬುದು ತಿಳಿಯದೇ ಶವವನ್ನು ಕಾರಿನಲ್ಲಿಟ್ಟುಕೊಂಡೇ ತಡರಾತ್ರಿ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ.

ಪೊಲೀಸರು ಮಹೇಶಪ್ಪನ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಆರೋಪಿ ರಾಜಶೇಖರನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಾಂಬ್ ಸ್ಪೋಟಕ್ಕೆ ಮೊಬೈಲ್ ಬಳಸಲು ಮೈಸೂರಲ್ಲಿ ತರಬೇತಿ ಪಡೆದಿದ್ದ ಕುಕ್ಕರ್ ಕ್ರಿಮಿ

ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿರುವುದರಿಂದ ಪ್ರಕರಣವನ್ನು ಆ ಠಾಣೆಗೆ ವರ್ಗಾಯಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Man, murder, car, surrendered, Bengaluru,

Articles You Might Like

Share This Article