ಬೆಂಗಳೂರು : ಮನೆಯ ಟೆರೆಸ್‍ನಲ್ಲಿ ವ್ಯಕ್ತಿಯ ಭೀಕರ ಹತ್ಯೆ

Social Share

ಬೆಂಗಳೂರು, ಅ.22- ಮನೆಯ ಟೆರೆಸ್‍ನಲ್ಲಿ ವ್ಯಕ್ತಿಯ ತಲೆ ಹಾಗೂ ಮರ್ಮಾಂಗಕ್ಕೆ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಮೂಲತಃ ಆಂಧ್ರ ಪ್ರದೇಶದ ಹಿಂದೂಪುರ ನಿವಾಸಿ ಚಂದ್ರಶೇಖರ್(33) ಕೊಲೆಯಾದ ವ್ಯಕ್ತಿ.

ಹಳೆ ಯಲಹಂಕದ ಕೊಂಡಪ್ಪ ಲೇಔಟ್‍ನಲ್ಲಿ ಮೂರು ಅಂತಸ್ತಿನ ಮನೆಯಿದ್ದು, ಒಂದು ಮನೆಯಲ್ಲಿ ಚಂದ್ರಶೇಖರ್ ದಂಪತಿ ವಾಸವಾಗಿದ್ದು, ಚಂದ್ರಶೇಖರ್ ನೇಯ್ಗೆ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ 8.45ರ ಸುಮಾರಿನಲ್ಲಿ ಮನೆಯ ಟೆರೆಸ್‍ನಲ್ಲಿ ಚಂದ್ರಶೇಖರ್ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿ ತಲೆ ಹಾಗೂ ಮರ್ಮಾಂಗಕ್ಕೆ ಹೊಡೆದು ಪರಾರಿಯಾಗಿದ್ದಾರೆ.

ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‍ಗೆ ಸಂಕಷ್ಟ

ಕುಟುಂಬದವರು ನೋಡಿ ತಕ್ಷಣ ಚಂದ್ರಶೇಖರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಯಲಹಂಕ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.

ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪತ್ನಿಯೇ ಚಂದ್ರಶೇಖರ್ ಅವರನ್ನು ಕೊಲೆ ಮಾಡಿಸಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು ತನಿಖೆ ಮುಂದುವರೆದಿದೆ.

Articles You Might Like

Share This Article