ತಂದೆ-ತಾಯಿಯನ್ನು ಕೊಂದಿದ್ದ ಆರೋಪಿಗೆ ಮರಣ ದಂಡನೆ

Social Share

ದುರ್ಗ್,ಜ.24- ಹೆತ್ತವರನ್ನು ಗುಂಡಿಕ್ಕಿ ಕೊಂದ 47 ವರ್ಷದ ವ್ಯಕ್ತಿಗೆ ಛತ್ತೀಸ್‍ಗಢದ ದುರ್ಗ್ ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಇದು ಅಪರೂಪದ ಅಪರೂಪದ ಘಟನೆ. ಅಪರಾಗೆ ಮರಣದಂಡನೆಯೇ ಸೂಕ್ತ ಶಿಕ್ಷೆ. ತಂದೆ-ತಾಯಿಯನ್ನು ಕೊಲ್ಲುವಂತಹ ಇಂತಹ ಘೋರ ಅಪರಾಧವನ್ನು ಮತ್ತೊಮ್ಮೆ ಮಾಡಲು ಯಾರೂ ಧೈರ್ಯ ಮಾಡಬಾರದು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾೀಧಿಶ ಶೈಲೇಶ್ ಕುಮಾರ್ ತಿವಾರಿ ಅವರು ತಮ್ಮ 310 ಪುಟಗಳ ತೀರ್ಪಿನಲ್ಲಿ ಅಭಿಪ್ರಾಯಿಸಿದ್ದಾರೆ.

ಮಹಾಕಾವ್ಯದ ಮಹಾಭಾರತದ ಕೆಲವು ಪದ್ಯಗಳನ್ನು ಉಲ್ಲೇಖಿಸಿರುವ ನ್ಯಾಯಾೀಧಿಶರು, ಪ್ರಮುಖ ಆರೋಪಿ ಸಂದೀಪ್ ಜೈನ್‍ಗೆ ಮರಣದಂಡನೆ ವಿಧಿಸಿದ್ದು, ಆರೋಪಿಗೆ ಬಂದೂಕು ಪೂರೈಸಿದ ಇತರ ಇಬ್ಬರು ಆರೋಪಿಗಳಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ.

ಮಹಿಳೆಯರ ಮತ ಗೆಲ್ಲಲು ರಾಜಕೀಯ ಪಕ್ಷಗಳಿಂದ ಭರ್ಜರಿ ಘೋಷಣೆ

2018ರ ಜನವರಿ 1ರಂದು ಸಂದೀಪ್ ಜೈನ್ ತನ್ನ ತಂದೆ ರಾವಲ್ಮಲ್ ಜೈನ್ (72), ಮತ್ತು ತಾಯಿ ಸುರ್ಜಿ ದೇವಿ (67) ಅವರನ್ನು ಗುಂಡಿಕ್ಕಿ ಕೊಂದಿದ್ದರು. ರಾವಲ್ಮಲ್ ದುರ್ಗ್‍ನ ಪ್ರಮುಖ ಉದ್ಯಮಿ ಮತ್ತು ಸಮಾಜ ಸೇವಕರಾಗಿದ್ದರು.

ಘಟನೆ ನಡೆದಾಗ ಮನೆಯಲ್ಲಿ ಮೂವರು ಮಾತ್ರ ಉಳಿದಿದ್ದರು. ಅವರಲ್ಲಿ ಇಬ್ಬರು ಹತ್ಯೆಯಾಗಿದ್ದರು. ಉಳಿದ ಸಂದೀಪ್‍ನನ್ನು ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದರು.

ಆಸ್ತಿ ಸೇರಿದಂತೆ ಹಲವು ವಿಚಾರಗಳಲ್ಲಿ ತಂದೆ-ಮಗ ಇಬ್ಬರ ನಡುವೆ ಭಿನ್ನಾಭಿಪ್ರಾಯ ಇರುವುದು ನ್ಯಾಯಾಲಯದಲ್ಲಿ ದೃಢಪಟ್ಟಿತ್ತು. ತಮ್ಮ ಮನೆಯಲ್ಲಿರುವ ದೇವಸ್ಥಾನದಲ್ಲಿ ಪೂಜೆ ಹಾಗೂ ಇತರ ಧಾರ್ಮಿಕ ವಿಧಾನಗಳನ್ನು ನೇರವೇರಿಸಲು ಮನೆಯ ಸಮೀಪ ಇರುವ ಶೇವೋನಾಥ್ ನದಿಯಿಂದ ನೀರು ತರುವಂತೆ ತಂದೆ ತಾಕೀತು ಮಾಡುತ್ತಿದ್ದದ್ದು ಸಂದೀಪ್‍ಗೆ ಇಷ್ಟವಾಗುತ್ತಿರಲಿಲ್ಲ.

ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಇನ್ನೂ ನಿರ್ಧಾರವಾಗಿಲ್ಲ : ಜಿಲ್ಲಾಧಿಕಾರಿ

ಅವರ ಮಾತನ್ನು ಕೇಳದಿದ್ದರೆ ನನ್ನನ್ನು ಬೀದಿಗೆ ತಳ್ಳಬಹುದು ಎಂಬ ಭಯದಿಂದ ಆರೋಪಿ ಕೊಲೆ ಮಾಡಿದ್ದಾನೆ ಎಂದು ವಿಶೇಷ ಅಭಿಯೋಜನ ಸುರೇಶ್ ಪ್ರಸಾದ್ ಶರ್ಮಾ ಹೇಳಿದರು.

ವಾದ-ವಿವಾದಗಳನ್ನು ಆಲಿಸಿ, ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ ನ್ಯಾಯಾಲಯ ಸಂದೀಪನನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಸಂದೀಪ್ ದೋಷಿ ಘೋಷಿಸಿತ್ತು. ಸಂದೀಪ್‍ಗೆ ಪಿಸ್ತೂಲ್ ಪೂರೈಸಿದ ಆರೋಪಿಗಳಾದ ಭಗತ್ ಸಿಂಗ್ ಗುರುದತ್ತ ಮತ್ತು ಶೈಲೇಂದ್ರ ಸಾಗರ್ ಅವರಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ತಲಾ 1,000 ರೂ.ಗಳ ದಂಡವನ್ನು ವಿಧಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

Man, sentenced, death, killing, parents, Chhattisgarh,

Articles You Might Like

Share This Article