ಸಾಲ ಕೊಡದ ಬ್ಯಾಂಕ್‍ಗೆ ಬೆಂಕಿಯಿಟ್ಟ ಭೂಪ..!

Social Share

ಹಾವೇರಿ, ಜ.9- ಸಾಲ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬ್ಯಾಂಕ್‍ಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಹೆಡ್ಡಿಗೊಂಡಿ ಗ್ರಾಮದಲ್ಲಿ ನಡೆದಿದೆ.
ರಟ್ಟೆಹಳ್ಳಿ ನಿವಾಸಿ ವಸೀಂ (33) ಆರೋಪಿ. ಈತ ಬೆಳಗಿನ ಜಾವ ಹೆಡ್ಡಿಗೊಂಡಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್‍ಗೆ ಬೆಂಕಿ ಹಚ್ಚಿ ಪರಾರಿಯಾಗಲು ಯತ್ನಿಸಿದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈ ವೇಳೆ ಗ್ರಾಮಸ್ಥರು ಈತನಿಗೆ ಸರಿಯಾಗಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ತನಗೆ ಬೇಕಾದ ಸಾಲ ನೀಡಲು ಮ್ಯಾನೇಜರ್ ಒಪ್ಪದ ಕಾರಣ ಬ್ಯಾಂಕ್‍ಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿದ್ದ ಎಂದು ತಿಳಿದುಬಂದಿದೆ.
ಬ್ಯಾಂಕ್‍ನಲ್ಲಿದ್ದ ಕಾಗದ ಪತ್ರಗಳು ಹಾಗೂ ನಗದು ಸುಟ್ಟು ಕರಕಲಾಗಿವೆ. ಮಾಹಿತಿ ತಿಳಿದು ಸ್ಥಳಕ್ಕೆ ದಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಸ್ಥಳಕ್ಕೆ ಕಾಗಿನೆಲೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Articles You Might Like

Share This Article