ಬೆಂಗಳೂರಿಗೆ ಬಂದ ಉಗಾಂಡಾ ಪ್ರಜೆಯ ಹೊಟ್ಟೆಯಲ್ಲಿತ್ತು 1 ಕೆಜಿ ಹೆರಾಯಿನ್..!

Social Share

ಬೆಂಗಳೂರು, ಫೆ.24- ವಿದೇಶಿ ಪ್ರಜೆಗಳು ಮಾದಕ ವಸ್ತುಗಳನ್ನು ಎಲ್ಲೇ ಅಡಗಿಸಿಕೊಂಡು ನಗರ ಪ್ರವೇಶಿಸಿದರೂ ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ಹೋಗುವುದು ಅಸಾಧ್ಯ. ಶಾರ್ಜಾದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಗಾಂಡಾ ಮೂಲದ 32 ವರ್ಷದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದಾಗ ಆತನ ಹೊಟ್ಟೆಯಲ್ಲಿ ಬರೋಬ್ಬರಿ 7 ಕೋಟಿ ಮೌಲ್ಯದ ಒಂದು ಕೆಜಿ ಹೆರಾಯಿನ್ ತುಂಬಿದ್ದ ಕ್ಯಾಪ್ಸುಲ್‍ಗಳು ಇರುವುದು ಕಂಡುಬಂದಿದೆ.
ಹೆರಾಯಿನ್ ತುಂಬಿದ್ದ ಕ್ಯಾಪ್ಸುಲ್‍ಗಳನ್ನು ನುಂಗಿ ಮಾದಕ ವಸ್ತು ಸ್ಮಗ್ಲಿಂಗ್ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಸತತ ಮೂರು ದಿನಗಳ ಕಾಲ 79 ಕ್ಯಾಪ್ಸುಲ್‍ಗಳನ್ನು ಹೊರಗೆ ತೆಗೆಯಲಾಗಿದೆ.
ಆರೋಪಿ ವಿರುದ್ಧ ಎಸ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕ್ಯಾಪ್ಸುಲ್‍ಗಳಲ್ಲಿ ಮಾದಕ ವಸ್ತು ತುಂಬಿ ಅದನ್ನು ಸೇವಿಸಿ ಸ್ಮಗ್ಲಿಂಗ್ ಮಾಡುವಾಗ ಸಿಕ್ಕಿಬಿದ್ದ ಮೊದಲ ಪ್ರಕರಣವಾಗಿದೆ.

Articles You Might Like

Share This Article