ರತ್ಲಮ್,ಜ.4- ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿ ನಂತರ ನಿರ್ದೋಷಿ ಎಂದು ಬಿಡುಗಡೆಯಾದ ಆರೋಪಿ, ತನಗಾದ ಮಾನಸಿಕ ಹಿಂಸೆ ಹಾಗೂ ಇತರ ಕಾರಣಗಳಿಗೆ 10 ಸಾವಿರ ಕೋಟಿ ರೂಪಾಯಿ ಪರಿಹಾರ ಪಾವತಿಸಬೇಕು ಎಂದು ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾನೆ.
ಈ ಅರ್ಜಿ ಹಲವು ವಿಶೇಷತೆಗಳಿಂದ ಕೂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಮಧ್ಯ ಪ್ರದೇಶದ ರತ್ಲಮ್ ಜಿಲ್ಲೆಯ ಕಂತು ಅಲಿಯಾಸ್ ಕಾಂತಿಲಾಲ್ ಭೀಲ್ (35) ವಿರುದ್ಧ 2018ರ ಜುಲೈ 20ರಂದು ಮಹಿಳೆಯೊಬ್ಬರು ಮಾನಸ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದರು.
ಕಾಂತಿಲಾಲ್ ತಮ್ಮನ್ನು ಸಹೋದರನ ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ಅತ್ಯಾಚಾರ ನಡೆಸಿದ್ದಾನೆ. ನಂತರ ಮತ್ತೊಬ್ಬ ವ್ಯಕ್ತಿಗೆ ನನ್ನನ್ನು ಹಸ್ತಾಂತರಿಸಿದ್ದು ಆತ ತನ್ನ ಮೇಲೆ ಆರು ತಿಂಗಳ ಕಾಲ ಅತ್ಯಾಚಾರ ನಡೆಸಿದ್ದಾನೆ. ನಂತರ ಮನೆಗೆ ಹೋಗಲು ಬಿಟ್ಟಿದ್ದಾನೆ ಎಮದು ಆರೋಪಿಸಿದ್ದಳು.
ರಾಹುಲ್ ಗಾಂಧಿ ಸ್ಪರ್ಧಿಸುವ ಕ್ಷೇತ್ರದ ಚರ್ಚೆ ಹುಟ್ಟು ಹಾಕಿದ ಭಾರತ್ ಜೋಡೋ ಯಾತ್ರೆ
ಪೊಲೀಸರು ಆರೋಪಿಯನ್ನು 2020ರ ಡಿಸೆಂಬರ್ 23ರಂದು ಬಂಧಿಸಿದ್ದರು, ಸುಮಾರು ಎರಡು ವರ್ಷ ಕಾಲ ಆತ ಸೆರೆವಾಸ ಅನುಭವಿಸಿದ್ದ. ಕಳೆದ ವರ್ಷ ಅಕ್ಟೋಬರ್ 20ರಂದು ಕಾಂತಿಲಾಲ್ ಮೇಲೆ ದೂಷಿಸಲಾಗಿದ್ದ ಆರೋಪವನ್ನು ನ್ಯಾಯಾಲಯ ಕೈ ಬಿಟ್ಟಿತ್ತು.
ಅದರ ಬೆನ್ನಲ್ಲೆ ಕಾಂತಿಲಾಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾನೆ. ತಮ್ಮ ಕುಟುಂಬದಲ್ಲಿ ನಾನೊಬ್ಬನೆ ದುಡಿಯುವ ವ್ಯಕ್ತಿ. ನಾನು ಜೈಲಿನಲ್ಲಿದ್ದ ವೇಳೆ ಕುಟುಂಬದಲ್ಲಿನ ವಯಸ್ಸಾದ ತಾಯಿ, ಪತ್ನಿ ಮತ್ತು ಮೂವರು ಮಕ್ಕಳು ಹಸಿವಿನಿಂದ ನರಳಿದ್ದಾರೆ. ಇದು ನನ್ನ ಮನಸ್ಸಿಗೆ ನೋವುಂಟು ಮಾಡಿದೆ.
ಮಾನಸಿಕ ದುಗುಡ ಉಂಟು ಮಾಡಿದೆ. ಬಂಧನದಿಂದಾಗಿ ನಾನು ಲೈಂಗಿಕ ಸುಖ ಅನುಭವಿಸುವುದು ಸೇರಿದಂತೆ ದೇವರು ಕೊಟ್ಟ ಅಮೂಲ್ಯ ಕೊಡುಗೆಗಳನ್ನು ಕಳೆದುಕೊಂಡಿದ್ದೇನೆ. ಇದಕ್ಕಾಗಿ ಎರಡು ಲಕ್ಷ ಪರಿಹಾರ ನೀಡಬೇಕು. ಹಲವು ಕಾರಣಗಳಿಂದ ಒಟ್ಟು 10,006.02 ಕೋಟಿ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಸರ್ಕಾರದ ವಿರುದ್ಧ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೊರೆ ಹೋಗಿದ್ದಾನೆ.
ಚಿನ್ನದ ಇಂಕ್ನಲ್ಲಿ ಬರೆದ ಕುರಾನ್ ಹಸ್ತಪ್ರತಿ ಲಭ್ಯ
ಕಾಂತಿಲಾಲ್ ಪರ ವಕೀಲವಾಗಿ ವಕೀಲ ವಿಜಯ್ ಸಿಂಗ್ ವಾದಿಸುತ್ತಿದ್ದಾರೆ. ಜನವರಿ 10ರಂದು ಅರ್ಜಿಯ ವಿಚಾರಣೆ ನಡೆಯಲಿದೆ.
Man spent, 2 years, jail, rape, files, Rs 10k crore, defamation,