ಉತ್ತರಪ್ರದೇಶದ ವ್ಯಕ್ತಿಗೆ ಸ್ವೈನ್ ವೈರಸ್ ಪತ್ತೆ

Social Share

ಲಖ್ನೋ,ಜು.22- ಉತ್ತರ ಪ್ರದೇಶದ ಫತೇಪುರ್ ನಿವಾಸಿಯೊಬ್ಬರಲ್ಲಿ ಹಂದಿಜ್ವರ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.
ಕಳೆದ 10 ದಿನಗಳಿಂದ ಜ್ವರ, ನೆಗಡಿ, ಕೆಮ್ಮು, ಬೆನ್ನು ನೋವಿನಿಂದ ಬಳಲುತ್ತಿದ್ದ ರಾಂಬಾಬು ಎಂಬುವರನ್ನು ಪರೀಕ್ಷೆಗೊಳಪಡಿಸಿದಾಗ ಅವರಲ್ಲಿ ಸ್ವೈನ್ ವೈರಸ್ ತಗುಲಿರುವುದು ದೃಢವಾಗಿದೆ.

ಸದ್ಯ ಅವರನ್ನು ಕಾನ್ಪುರದ ರೀಜೆನ್ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮಬಾಬು ಅವರನ್ನು ಕುಟುಂಬದಿಂದ ಪ್ರತ್ಯೇಕವಾಗಿರಲು ವೈದ್ಯರು ಸೂಚನೆ ನೀಡಿದ್ದು, ಎಲ್ಲರೂ ಮಾಸ್ಕ್ ಧರಿಸುವಂತೆ ಮತ್ತು ಜನಸಂದಣಿ ಇರುವ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸುವಂತೆ ಸಿಎಂಒ ಅಲೋಕ್ ರಂಜನ್ ವಿನಂತಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಸತ್ತ ಹಂದಿಗಳ ಸಂಖ್ಯೆ ತೀವ್ರಗೊಂಡಿದೆ. ಮುನ್ಸಿಪಲ್ ಕಾಪೆರ್ರೇಷನ್‍ನ ಪಶುವೈದ್ಯಾಧಿಕಾರಿ ಸತ್ತ ಹಂದಿಯ ಮಲವಿಸರ್ಜನೆಯ ಮಾದರಿಯನ್ನು ಪರೀಕ್ಷೆಗಾಗಿ ಭೋಪಾಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಪ್ರಾರಂಭಿಕ ಹಂತದಲ್ಲಿ, ಈ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರವಿದೆ ಎಂದು ಶಂಕಿಸಲಾಗಿದೆ. ಇದನ್ನು ಖಚಿತಪಡಿಸಲು, ಸತ್ತ ಐದು ಹಂದಿಗಳ ಒಳಾಂಗಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಶಂಕಿತ ಹಂದಿಗಳ ಮಾದರಿಗಳನ್ನು ಪರಿಶೀಲಿಸಲು ಪಶುವೈದ್ಯಾಕಾರಿ ನಾಲ್ವರು ಸದಸ್ಯರ ಸಮಿತಿಯನ್ನು ಸಹ ರಚಿಚಿಸಲಾಗಿದೆ.

ಸಮಿತಿ ಸದಸ್ಯ ಕೌನ್ಸಿಲರ್ ಗಿರೀಶ್ ಚಂದ್ರ ಮಾತನಾಡಿ, 4-5 ದಿನಗಳಿಂದ ಸಮೀಪದ ಪ್ರದೇಶಗಳಲ್ಲಿ ಹಲವರು ಮಂದಿ ಮರಣ ಹೊಂದುತ್ತಿದ್ದರೆ. ಈ ರೋಗವು ಮನುಷ್ಯರಿಗೂ ಹರಡಿರುವ ಸಾಧ್ಯತೆ ಇರಬಹುದು ಎಂಬ ಆತಂಕವಿದೆ ಎಂದಿದ್ದಾರೆ.

Articles You Might Like

Share This Article