8 ಬಾರಿ ಮತ ಚಲಾಯಿಸಿ ವಿಡಿಯೋ ಮಾಡಿದ್ದ ಯುವಕನ ಬಂಧನ

ಲಖ್ನೋ,ಮೇ20- ಉತ್ತರಪ್ರದೇಶದ ಇಟಾಹ್‌ ಜಿಲ್ಲೆಯ ನಯಾಗಾಂವ್‌ ಪಟ್ಟಣದಲ್ಲಿ ಬಿಜೆಪಿಗೆ ಎಂಟು ಬಾರಿ ಮತ ಚಲಾಯಿಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಇಟಾಹ್‌ ಜಿಲ್ಲೆಯ ಖಿರಿಯಾ ಪಮರನ್‌ ಗ್ರಾಮದ ನಿವಾಸಿ ರಾಜನ್‌ ಸಿಂಗ್‌ ಬಂಧಿತ ಯುವಕ. ಎಂಟು ಬಾರಿ ಮತ ಚಲಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಲಾದ ನಂತರ ಪೊಲೀಸರು ಆತನನ್ನು ಬಂಧಿಸಿ ಈತನ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಹುಡುಗ ಪ್ರತಿ ಬಾರಿ ಇವಿಎಂ ಬಟನ್‌ ಒತ್ತಿ ಎಣಿಕೆ ಮಾಡುತ್ತಿರುವುದು ಕಂಡುಬಂದಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು … Continue reading 8 ಬಾರಿ ಮತ ಚಲಾಯಿಸಿ ವಿಡಿಯೋ ಮಾಡಿದ್ದ ಯುವಕನ ಬಂಧನ