ಮಣಪ್ಪುರಂ ಫೈನಾನ್ಸ್ ನಲ್ಲಿ ಕಳ್ಳತನಕ್ಕೆ ಯತ್ನ; ಸೈರನ್ ಸದ್ದಿಗೆ ಕಳ್ಳರು ಪರಾರಿ

Spread the love

ಬೆಂಗಳೂರು, ಮೇ 26- ಮಣಪುರಂ ಫೈನಾನ್ಸ್ ಸಂಸ್ಥೆಯ ರೋಲಿಂಗ್ ಷಟರ್ ಮುರಿದು ಒಳ ನುಗ್ಗಿದ ಕಳ್ಳರು ಸ್ಟ್ರಾಂಗ್ ರೂಮ್ ಒಡೆಯಲು ಯತ್ನಿಸಿದಾಗ ಕೂಗಿದ ಸೈರನ್‍ನಿಂದ ಅಲ್ಲಿಂದ ಓಡಿ ಹೋಗಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ರಾತ್ರಿ ರಾಜಗೋಪಾಲನಗರ ಮುಖ್ಯ ರಸ್ತೆಯಲ್ಲಿರುವ ಮಣಪುರಂ ಫೈನಾನ್ಸ್ ಶಾಖೆ ಬಳಿ ಬಂದ ಕಳ್ಳರು ಗ್ಯಾಸ್‍ಕಟರ್‍ನಿಂದ ಷಟರ್ ಮುರಿದು ಒಳ ಹೋಗಿ ಸ್ಟ್ರಾಂಗ್ ರೂಮ್‍ನ ಬಾಗಿಲು ಒಡೆಯಲು ಯತ್ನಿಸಿದಾಗ ಸೈರನ್ ಮೊಳಗಿ ಅಲ್ಲಿಂದ ಕಳ್ಳರು ಕಾಲ್ಕಿತ್ತಿದ್ದಾರೆ.

ಸುದ್ದಿ ತಿಳಿದ ರಾಜಗೋಪಾಲನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು , ಪ್ರಕರಣ ದಾಖಲಿಸಿಕೊಂಡು ಕಳ್ಳರ ಶೋಧ ನಡೆಸುತ್ತಿದ್ದಾರೆ.

Facebook Comments