ಶಬರಿ ಮಲೈಗೆ ಹರಿದು ಬಂದ ಭಕ್ತ ಸಾಗರ, 225 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ

Social Share

ಬೆಂಗಳೂರು,ಡಿ.28- ಕಳೆದ ಎರಡು ವರ್ಷದಿಂದ ಕೊರೊನಾ ಕಾರಣದಿಂದಾಗಿ ಪ್ರಸಿದ್ದ ಯಾತ್ರ ಸ್ಥಳ ಶಬರಿಮಲೆಗೆ ವಿರಳವಾಗಿದ್ದ ಜನ ಈ ವರ್ಷ ಅಪಾರ ಸಂಖ್ಯೆಯಲ್ಲಿ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇದರಿಂದ ಕೇವಲ ಒಂದು ತಿಂಗಳ ಸಮಯದಲ್ಲಿ ಸುಮಾರು 225 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಕಳೆದ ಸುಮಾರು 39 ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭಕ್ತರು ಶಬರಿಮಲೆಗೆ ಭೇಟಿ ನೀಡುತ್ತಿದ್ದಾರೆ. ಡಿಸೆಂಬರ್ 25ರವರೆಗೆ ಶಬರಿಮಲೆಗೆ ಯಾತ್ರೆ ಕೈಗೊಂಡಿರುವವರ ಜೊತೆ ಹಾಗೆಯೇ ಭೇಟಿ ನೀಡಿದ ಭಕ್ತರ ಸಂಖ್ಯೆ ಸುಮಾರು 30 ಲಕ್ಷ ದಾಟಿದ್ದು, ಈ 39 ದಿನಗಳಲ್ಲಿ ಬಂದ ಆದಾಯದಲ್ಲಿ ಸುಮಾರು 70.10 ಕೋಟಿ ದೇಣಿಗೆ ರೂಪದಲ್ಲಿ ಬಂದಿದೆ ಎಂದು ದೇವಾಲಯ ತಿಳಿಸಿದೆ.

ಈ ಬಾರಿ ಜನ ಹೆಚ್ಚಿರುವ ಕಾರಣ ಸಹ ದೇವರರ ದರ್ಶನಕ್ಕೆ ಸಮಯದ ಅವಯನ್ನು ಹೆಚ್ಚಿಸಬೇಕಾಗಿದ್ದು, ಬರುವ ಪ್ರತಿಯೊಬ್ಬ ಭಕ್ತರಿಗೂ ಸ್ವಾಮಿಯ ದರ್ಶನ ಸಿಗಬೇಕು ಎಂಬ ಉದ್ದೇಶದಿಂದ ದಿನವೊಂದಕ್ಕೆ 90 ಸಾವಿರ ಭಕ್ತರಿಗೆ ಮಿತಿಗೊಳಿಸಲಾಗಿದೆ. ಅಲ್ಲದೇ ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ದೇವಸ್ವಂ ಬೋರ್ಡ್ ಸಕಲ ಸಿದ್ಧತೆ ಮಾಡಿಕೊಂಡಿದೆ.

2 ದಿನ ದೇವಾಲಯ ಬಂದ್:
ನಿನ್ನೆ ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿ ಅಯ್ಯಪ್ಪ ದೇವರ ಮಂಡಲ ಪೂಜೆ ನಡೆಸಲಾಗಿದೆ. ನಿನ್ನೆ ಮಧ್ಯಾಹ್ನ ಗುಡ್ಡದ ದೇಗುಲದಲ್ಲಿ ಮಂಡಲ ಪೂಜೆ ನಡೆದಿದ್ದು, ಸೋಮವಾರ ಸಂಜೆ ದೇವಸ್ಥಾನ ಸಂಕೀರ್ಣದಿಂದ ತಂದಿದ್ದ ಥಂಕ ಅಂಗಿಯಿಂದ (ಚಿನ್ನದ ಆಭರಣಗಳು) ಅಲಂಕರಿಸಿದ ನಂತರ ಪ್ರಧಾನ ಅರ್ಚಕ ಕಂದರಾರು ರಾಜೀವ ಅವರ ನೇತೃತ್ವದಲ್ಲಿ ಪೂಜೆಯನ್ನು ನೆರವೇರಿಸಲಾಗಿದೆ.

ಆನ್‌ಲೈನ್‌ನಲ್ಲಿ ಆಸ್ತಿ ವಿವರಗಳ ವ್ಯವಸ್ಥೆ, ನಕಲಿ ದಾಖಲೆಗೆ ಕಡಿವಾಣ

ನಿನ್ನೆ 2.30 ಗಂಟೆಯಿಂದ 1 ಗಂಟೆಯ ನಡುವೆ ಮಂಡಲ ಪೂಜೆ ನಡೆದಿದ್ದು, ಸಂಜೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ವಾರ್ಷಿಕ ಸಂಪ್ರಾಯದಂತೆ ಇನ್ನೆರಡು ದಿನ ದೇವಾಲಯವನ್ನು ಮುಚ್ಚಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

ಕಲಭಾಭಿಷೇಕದ ನಿಮಿತ್ತ ಬೆಳಗ್ಗೆ 9.30ಕ್ಕೆ ಮಂಟಪದಲ್ಲಿ ತಂತ್ರಿ ಬ್ರಹ್ಮಕಲಶ ಪೂಜೆ ನೆರವೇರಿಸಲಾಗಿದ್ದು, ರಾತ್ರಿ 10 ಗಂಟೆಗೆ ಅತ್ತಳ ಪೂಜೆ ಮತ್ತು ಹರಿವರಾಸನದ ನಡೆಸಿ ದೇವಾಲಯವನ್ನು ಮುಚ್ಚಲಾಗಿದೆ. ಇನ್ನು ಕಳೆದ ತಿಂಗಳಷ್ಟೇ ದೇವಸ್ಥಾನದ ಆಡಳಿತ ಮಂಡಳಿಯು ಮಂಡಲ ಪೂಜೆಗೆ ಮುಂಚಿತವಾಗಿ ಬುಕ್ ಮಾಡಲು ಅವಕಾಶ ನೀಡಿತ್ತು.

ಪಶ್ಚಿಮ ಘಟ್ಟಗಳ ಭಾಗ ಹಾಗೂ ಸೊಂಪಾದ ಕಾಡುಗಳು ಮತ್ತು 18 ಬೆಟ್ಟಗಳಿಂದ ಆವೃತವಾಗಿರುವ ದೇವಾಲಯದಲ್ಲಿ ವಾರ್ಷಿಕ ಮಂಡಲ-ಮಕರವಿಳಕ್ಕು ತೀರ್ಥಯಾತ್ರೆಯು ನವೆಂಬರ್ 17 ಅಥವಾ ಮಲಯಾಳಂ ಯುಗದ ವೃಶ್ಚಿಕಂ 1ರಂದು ಪ್ರಾರಂಭವಾಗುತ್ತದೆ. 41 ದಿನಗಳ ಮಂಡಲ ಪೂಜೆ ಮಹೋತ್ಸವ ಡಿ.27ರಂದು ಮುಕ್ತಾಯಗೊಂಡಿದೆ.

ಇದು ಶಬರಿಮಲೆ ತೀರ್ಥಯಾತ್ರೆಯ ಮೊದಲ ಹಂತವಾಗಿದ್ದು ಇನ್ನು ಎರಡನೇ ಹಂತವಾದ ಮಕರವಿಳಕ್ಕು ಸಮಾರಂಭಕ್ಕಾಗಿ ದೇಗುಲವನ್ನು ಎರಡು ದಿನಗಳ ಕಾಲ ಮುಚ್ಚಲಾಗುತ್ತದೆ ಮತ್ತು ಡಿಸೆಂಬರ್ 30ರಂದು ಸಂಜೆ 5 ಗಂಟೆಗೆ ಮತ್ತೆ ತೆರೆಯಲಾಗುತ್ತದೆ.

ತುಮಕೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ

ಕೇರಳದ ಪಥನಂತಿಟ್ಟ ಜಿಲ್ಲೆಯ ಅಯ್ಯಪ್ಪ ದೇವರಿಗೆ ಸಮರ್ಪಿತವಾಗಿರುವ ಶಬರಿಮಲೆ ದೇವಾಲಯಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಸಮುದ್ರ ಮಟ್ಟದಿಂದ 4000 ಅಡಿ ಎತ್ತರದಲ್ಲಿರುವ ಈ ದೇವಾಲಯಕ್ಕೆ ನಾಲ್ಕು ಕಿಲೋಮೀಟರ್‍ಗಳಿಗಿಂತ ಹೆಚ್ಚು ದೂರದ ಹಾಗೂ ಕಷ್ಟಕರವಾದ ಟ್ರೆಕ್ಕಿಂಗ್ ಮೂಲಕ ಭಕ್ತರು ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ಇನ್ನು ಕಾಡಿನ ಮೂಲಕ, ಪಂಬಾ ನದಿಯನ್ನು ದಾಟಿ ಈ ದೇವಾಲಯಕ್ಕೆ ಹೋಗಬೇಕು. ಈ ಬಾರಿ ಜನವರಿ 20ರ ತನಕ ಯಾತ್ರಿಗಳಿಗೆ ಅವಕಾಶ ನೀಡಲಾಗಿದೆ. ಜನವರಿ 20ರಂದು ದೇವಾಲಯ ಮುಚ್ಚಲಾಗಿರುತ್ತದೆ.

Mandala Pooja, Sabarimala, Revenue, reaches, Rs 225 crore,

Articles You Might Like

Share This Article