ಮಂಡ್ಯ,ಮಾ.6- ಟಿಪ್ಪು ಮೈಸೂರು ಹುಲಿ ಅಲ್ಲ, ಆತ ಸಂಚುಕೋರ, ಮೋಸಗಾರನ ಮಗ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕುರಿತು ಪತ್ರಿಕಾಗೋಷ್ಠಿ ಮಾತನಾಡಿರುವ ಅವರು ಟಿಪ್ಪು ಸುಲ್ತಾನ್ ತಂದೆ ಹೈದರಾಲಿ ಒಬ್ಬ ಮೋಸಗಾರ.
ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿಯವರನ್ನು ಮೋಸದಿಂದ ಹೈದರಾಲಿ ಸೆರೆ ಮನೆಯಲ್ಲಿಟ್ಟಿದ್ದ. ಟಿಪ್ಪು ಒಬ್ಬ ಸಂಚುಕೋರನ ಪುತ್ರನೆಂದು ಇತಿಹಾಸದಲ್ಲಿ ಹೇಳಬೇಕಿತ್ತು ಎಂದು ಹರಿಹಾಯ್ದಿದ್ದಾರೆ. ಟಿಪ್ಪುವಿನ ಬಗ್ಗೆ ಇತಿಹಾಸದಲ್ಲಿ ಗಾಳಿ ಪಾಠ ಮಾಡಲಾಗಿದೆ. ಟಿಪ್ಪು ಸುಲ್ತಾನ್ ತಂದೆ ಹೈದರಾಲಿ ಒಬ್ಬ ಮೋಸ ಘಟನೆಗಳನ್ನು ಸತ್ಯವನ್ನ ಇತಿಹಾಸದಲ್ಲಿ ಹೇಳಲೇ ಇಲ್ಲ ಎಂದರು.
ವೀರರಾಗಿದ್ದ ಉರಿಗೌಡ, ದೊಡ್ಡ ನಂಜೇಗೌಡ ಟಿಪ್ಪುವನ್ನು ಸದೆಬಡಿದರು ಎಂಬ ಅನೇಕ ದಾಖಲೆಗಳಿವೆ. ಇದು ಒಕ್ಕಲಿಗರ ಶೌರ್ಯ, ಆದ್ರೆ ಈ ಶೌರ್ಯವನ್ನ ಅದುಮಿಡುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದರು.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಬಗ್ಗೆಯೂ ಸರ್ವೆ ಮಾಡಿಸಲಿ.
ಬಿಜೆಪಿ ಸದಸ್ಯತ್ವದಿಂದಲೇ ಮಾಡಾಳ್ ವಿರೂಪಾಕ್ಷಪ್ಪ ಉಚ್ಛಾಟನೆ..?
ಒಂದು ವೇಳೆ ಅದು ಮಂದಿರ ಅನ್ನೋದಾದ್ರೆ ಟಿಪ್ಪು ಮತಾಂಧ ಅನ್ನೋದನ್ನ ಒಪ್ಪಿಕೊಳ್ಳಬೇಕು, ಅಥವಾ ಇದು ಮಸೀದಿ ಅಂದ್ರೆ ನಾನು ಬೇಷರತ್ ಕ್ಷಮೆ ಕೇಳುತ್ತೇನೆ ಎಂದು ಸವಾಲು ಹಾಕಿದರು.
ಟಿಪ್ಪು ಪಾರ್ಸಿ ಭಾಷೆ ಹೇರಿದ ಆದ್ರೆ ನಮಗೆಲ್ಲ ಕನ್ನಡ ಪ್ರೇಮಿ ಟಿಪ್ಪು ಅಂತ ಪಾಠ ಮಾಡಿದ್ರು. ಸುಳ್ಳಿನ ಪಾಠ ಮಾಡುವ ಮೂಲಕ ನಮಗೆಲ್ಲ ಸುಳ್ಳಿನ ಇತಿಹಾಸ ತಿಳಿಸಲಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ವಿರುದ್ದವೂ ಹರಿಹಾಯ್ದ ಅವರು ಕಾಂಗ್ರೆಸ್ ನವರು ನೀಡುತ್ತಿರುವುದು ಸುಳ್ಳಿನ ಕಾರ್ಡ ಕಾಂಗ್ರೆಸ್ ಅಧಿಕಾರವಿರುವ ರಾಜ್ಯಗಳಲ್ಲಿ ಏಕೆ 2 ಸಾವಿರ ಹಣ ನೀಡಿಲ್ಲ. ಕುಕ್ಕರ್ ಬಾಂಬ್ ಸ್ಪೋಟ ಮಾಡಿದವರ ಪರ, ಪಿಎಫ್‍ಐ ಪರ, ಶಾದಿ ಭಾಗ್ಯ ನೀಡುವುದರ ಮೂಲಕ ಒಂದು ಕೋಮು ಪರ ನಿಲ್ಲುವುದು ಕಾಂಗ್ರೆಸ್ ನವರ ಚಾಳಿ ಎಂದು ವಾಗ್ದಾಳಿ ನಡೆಸಿದರು.
ನಿಷ್ಕ್ರಿಯಗೊಂಡ ಉಪಗ್ರಹದ ಮರು ಪ್ರಯೋಗಕ್ಕೆ ಇಸ್ರೋ ಸಿದ್ಧತೆ
ಮಾಜಿ ಸಚಿವ ಕೆ.ಎಸ್ ಈಪ್ವರಪ್ಪ, ಸಚಿವ ಗೋಪಾಲಯ್ಯ, ಕೇಂದ್ರ ಸಚಿವ ಕ್ರಿಷನ್ ಪಾಲ್ ಗುರ್ಜರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
Mandya, CT Ravi, tipu sultan,