ಮಂಡ್ಯದಲ್ಲಿ ಭೀಕರ ಕೊಲೆ, ಬೆಚ್ಚಿಬಿದ್ದ ಜನ

Social Share

ಮಂಡ್ಯ,ಫೆ.23- ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಹಂತಕರು ದೇಹವನ್ನು ಹಲವು ಭಾಗಗಳಾಗಿ ಕತ್ತರಿಸಿ ಕೆರೆಗೂಡು ಪೊಲೀಸ್ ಠಾಣೆ ವ್ಯಾಪ್ತಿಯ ವಿ.ಸಿ.ನಾಲೆಗೆ ಎಸೆದಿರುವ ಘಟನೆ ನಡೆದಿದೆ.

ತಾಲ್ಲೂಕಿನ ವಡಘಟ್ಟ, ಶಿವಾರ, ಡಣಾಯಕನಪುರ ಹಾಗೂ ಮದ್ದೂರು ತಾಲ್ಲೂಕಿನ ಗೂಳೂರಿನ ನಾಲೆಗಳಲ್ಲಿ ಶವದ ಕೈ-ಕಾಲುಗಳು, ರುಂಡ, ಮುಂಡ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

7ನೇ ವೇತನ ಆಯೋಗ ಮಧ್ಯಂತರ ವರದಿ ಅನುಷ್ಠಾನ

ದುಷ್ಕರ್ಮಿಗಳು ಬೇರೆಡೆ ಕೊಲೆ ಮಾಡಿ ಯಾವುದೇ ಗುರುತು ಸಿಗಬಾರದೆಂದು ದೇಹದ ವಿವಿಧ ಭಾಗಗಳನ್ನು ಕತ್ತರಿಸಿ ನಾಲೆಗೆ ಎಸೆದು ಪರಾರಿಯಾಗಿದ್ದಾರೆ. ಕೊಲೆಯಾದ ವ್ಯಕ್ತಿಯ ವಯಸ್ಸು 40 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ.

ಹಿಂಡೆನ್‍ಬರ್ಗ್ ವರದಿಯಿಂದ ಅದಾನಿ ಸಮೂಹದಲ್ಲಿ ಮೂಡಲಿದೆಯಂತೆ ಆರ್ಥಿಕ ಶಿಸ್ತು

ಶವದ ಎಡಗೈನಲ್ಲಿ ಕಾವ್ಯ ರಘು ಎಂಬ ಹೆಸರಿನ ಅಚ್ಚೆ ಇದ್ದು, ಬಲ ಮುಂಬೈನಲ್ಲಿ ಕಪ್ಪುದಾರ ಇದೆ. ಈ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಕೆರೆಗೂಡು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

Mandya, murder, body, parts, canals,

Articles You Might Like

Share This Article