ಮಂಡ್ಯದತ್ತ ಮೂರು ಪಕ್ಷಗಳ ಚಿತ್ತ, ಬಿಜೆಪಿಯತ್ತ ಸುಮಲತಾ ಒಲವು ..?

Social Share

ಬೆಂಗಳೂರು,ಫೆ.13- ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ರಾಜಕೀಯದ ಪಡಸಾಲೆಗಳಲ್ಲಿ ಹೊಸ, ಹೊಸ ವಿಚಾರಗಳು, ಕುತೂಹಲಗಳು ಗಿರಕಿ ಹೊಡೆಯಲು ಆರಂಭಿಸಿವೆ.
ಕೇಂದ್ರ ರಾಜಕಾರಣಕ್ಕಿಂತ ರಾಜ್ಯ ರಾಜಕೀಯದಲ್ಲಿ ಕೆಲವು ನಾಯಕರಿಗೆ ಹೆಚ್ಚಿನ ಆಸಕ್ತಿ ಬಂದಂತೆ ಕಾಣಿಸುತ್ತಿದೆ. ಇದರ ಜೊತೆ ಮಂಡ್ಯದತ್ತ ಎಲ್ಲರ ದೃಷ್ಟಿ ನೆಟ್ಟಿದ್ದು, ಸಂಸದೆ ಸುಮಲತಾ ಅಂಬರೀಶ್ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ದಳಪತಿಗಳ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಅಸ್ತಿತ್ವ ಸಾಸಲು ಕಾಂಗ್ರೆಸ್ ಮತ್ತು ಬಿಜೆಪಿ ಹವಣಿಸುತ್ತಿದ್ದರೆ, ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಬೇಕಾದ ಕಸರತ್ತನ್ನು ಜೆಡಿಎಸ್ ಮಾಡಿಕೊಳ್ಳುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಜೆಡಿಎಸ್ ಗೆಲುವು ಸಾಸಿತ್ತು. ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಖಾತೆ ತೆರೆದಿದೆ. ಜತೆಗೆ ದಳಪತಿಗಳನ್ನು ಮಣಿಸಲು ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (13-02-2023)

ಈ ನಡುವೆ ಎಲ್ಲರೂ ಸುಮಲತಾ ಅಂಬರೀಶ್ ಅವರತ್ತ ಕುತೂಹಲದ ನೋಟ ಬೀರುತ್ತಿದ್ದಾರೆ. ಈಗಾಗಲೇ ಸುಮಲತಾ ಆಪ್ತ ಬಣಗಳು ಸದ್ದಿಲ್ಲದೆ ಬಿಜೆಪಿ ಕಡೆಗೆ ಒಲವು ತೋರುತ್ತಿದ್ದು, ಸುಮಲತಾ ಅವರು ಬಿಜೆಪಿಯತ್ತ ಮುಖ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದೆ ಸುಮಲತಾ ಎಲ್ಲಿಯೂ ಮಾತನಾಡಿಲ್ಲ. ಆದರೆ ಅವರ ಸುತ್ತಲಿನ ರಾಜಕೀಯದ ಬೆಳವಣಿಗೆಯನ್ನು ಗಮನಿಸಿಕೊಂಡು ಜನ ಮಾತನಾಡಿಕೊಳ್ಳುತ್ತಿದ್ದಾರೆ.ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಹಳೇ ಮೈಸೂರು ಭಾಗವನ್ನು ಟಾರ್ಗೆಟ್ ಮಾಡಿಕೊಂಡಿತ್ತಲ್ಲದೆ, ಈ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಚಾರಗಳನ್ನು ನಡೆಸಿತ್ತು.

ಆದರೆ ಈ ಬಾರಿ ಜೆಡಿಎಸ್ ಇಡೀ ರಾಜ್ಯದತ್ತ ಗಮನಹರಿಸಿದ್ದು, ಜಲಯಾತ್ರೆ, ಪಂಚರಥಯಾತ್ರೆಗಳ ಮೂಲಕ ರಾಜ್ಯದಾದ್ಯಂತ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಕೆಲವು ನಾಯಕರು ಪ್ರವಾಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಜೊತೆಗೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದೆಲ್ಲ ಕಾರಣದಿಂದ ಕೇವಲ ಹಳೇ ಮೈಸೂರಿತ್ತ ಅದರಲ್ಲೂ ಮಂಡ್ಯದತ್ತ ಹೆಚ್ಚಿನ ನಿಗಾವಹಿಸಲು ದಳಪತಿಗಳಿಗೆ ಸಾಧ್ಯವಾಗದಂತಾಗಿದೆ. ಹೀಗಾಗಿ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣಾ ತಂತ್ರಗಳನ್ನು ಅನುಸರಿಸುತ್ತಿವೆ. ಬಿಜೆಪಿಗೆ ಮಂಡ್ಯ ಜಿಲ್ಲೆಯಲ್ಲಿ ಪ್ರಭಾವಿ ನಾಯಕರ ಕೊರತೆ ಎದುರಾಗಿದ್ದು, ಸಂಸದೆ ಸುಮಲತಾ ಮತ್ತು ಅವರ ಪುತ್ರ ಅಭಿಷೇಕ್ ಗೌಡರನ್ನು ರಾಜ್ಯ ರಾಜಕೀಯಕ್ಕೆ ಕರೆತಂದರೆ ಲಾಭ ಪಡೆದುಕೊಳ್ಳಬಹುದೇನೋ ಎಂಬ ಉದ್ದೇಶವೂ ಅವರದ್ದಾಗಿದೆ.

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಪರೋಕ್ಷವಾಗಿ ಜೆಡಿಎಸ್, ಕಾಂಗ್ರೆಸ್ ಮತ್ತು ಪ್ರತ್ಯಕ್ಷವಾಗಿ ಬಿಜೆಪಿಯ ಸಹಕಾರದಿಂದ ಲೋಕಸಭಾ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ರ್ಪಸಿ ಗೆಲುವು ಪಡೆದ ಸುಮಲತಾ ಅಂಬರೀಶ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ರ್ಪಸಿ ಗೆಲ್ಲುವುದು ಸುಲಭವಲ್ಲ. ಅವತ್ತಿದ್ದಂತೆ ಇವತ್ತು ಇಲ್ಲ. ಅಂದಿನ ಅನುಕಂಪ ಇಲ್ಲಿ ತನಕ ಉಳಿದಿಲ್ಲ, ಜತೆಗೆ ಈಗ ಅವರನ್ನು ಒಬ್ಬ ರಾಜಕಾರಣಿಯಂತೆಯೇ ಜನ ನೋಡುತ್ತಿರುವುದರಿಂದ ಯಾವುದಾದರೊಂದು ಪಕ್ಷದತ್ತ ಮುಖ ಮಾಡಲೇಬೇಕಾಗಿದೆ.

ಒಂದು ವೇಳೆ ಸುಮಲತಾ ಅವರು ರಾಜ್ಯ ರಾಜಕೀಯದತ್ತ ಆಸಕ್ತಿ ವಹಿಸದೆ ಮುಂದಿನ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಸ್ರ್ಪಸುವ ಆಲೋಚನೆ ಮಾಡಿದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವ ಸಾಧ್ಯತೆಯಿದೆ.

ವಿಧಾಸಭಾ ಚುನಾಣೆಯ ಫಲಿತಾಂಶಗಳನ್ನು ನೋಡಿಕೊಂಡು ಅವರು ಮುಂದಿನ ತೀರ್ಮಾಣನ ಕೈಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ರಾಜ್ಯ ರಾಜಕೀಯಕ್ಕೆ ಬರುವುದಾದರೆ ಯಾವುದಾದರೊಂದು ಪಕ್ಷದತ್ತ ವಾಲುವುದು ಅನಿವಾರ್ಯವಾಗಲಿದೆ.

ಕಳೆದ ಲೋಕಸಭಾ ಚುನಾವಣೆ ನಂತರ ನಡೆದ ಚುನಾವಣೆಗಳಲ್ಲಿ ಯಾವ ಪಕ್ಷಕ್ಕೂ ಬೆಂಬಲ ಸೂಚಿಸದೆ ಸುಮಲತಾ ತಟಸ್ಥರಾಗಿದ್ದರು. ಆದರೆ ಇತ್ತೀಚೆಗಿನ ಬೆಳವಣಿಗೆಯಲ್ಲಿ ಅವರ ಬೆಂಬಲಿಗರು ಬಿಜೆಪಿಯನ್ನು ಸೇರುತ್ತಿರುವುದನ್ನು ಗಮನಿಸಿದರೆ ಸುಮಲತಾ ಅವರು ತಮ್ಮ ರಾಜಕೀಯ ನಡೆ ಏನು ಎಂಬುದನ್ನು ತಿಳಿಸಲು ಹೆಚ್ಚು ಸಮಯ ಕಾಯಬೇಕಾಗಿಲ್ಲ ಎಂದೆನಿಸುತ್ತದೆ. ಆದರೂ ಅವರ ನಿರ್ಧಾರ ಏನಿರರಬಹುದು ಎಂಬ ಪ್ರಶ್ನೆಗೆ ಅವರೇ ಉತ್ತರ ಹೇಳಬೇಕಾಗಿದೆ.

#Mandya. #KarnatakaPolitics, #SumalathaAmbareesh,

Articles You Might Like

Share This Article