ಗಣರಾಜ್ಯೋತ್ಸವಕ್ಕೆ ಸಕಲ ಸಿದ್ದತೆ

Social Share

ಬೆಂಗಳೂರು,ಜ.24- ಈ ಬಾರಿಯ ಗಣರಾಜ್ಯೋತ್ಸವಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍ಗಿರಿನಾಥ್ ಇಂದಿಲ್ಲ ತಿಳಿಸಿದರು. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಗರ ಜಿಲ್ಲಾಧಿಕಾರಿ ದಯಾನಂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಕಾರ್ಯಕ್ರಮದ ವಿವರಗಳನ್ನು ನೀಡಿದರು.

26 ರಂದು ಬೆಳಿಗ್ಗೆ 8.58ಕ್ಕೆ ರಾಜ್ಯಪಾಲರು ಆಗಮಿಸಿ 9 ಗಂಟೆಗೆ ಸರಿಯಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುತ್ತಾರೆ. ನಂತರ ಅವರು ಗೌರವರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ.

ಕಳೆದ ಮೂರು ದಿನಗಳಿಂದ ಗೌರವ ರಕ್ಷೆ ತಾಲೀಮು ನಡೆಸಲಾಗಿದೆ. ಈ ಬಾರಿಯ ಪಥಸಂಚಲನದಲ್ಲಿ ರಾಜ್ಯ ಪೊಲೀಸ್, ಕೇರಳ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್‍ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳನ್ನೊಳಗೊಂಡಂತೆ ಕವಾಯತು ಮತ್ತು ಬ್ಯಾಂಡ್‍ನ 38 ತುಕಡಿಗಳಲ್ಲಿ 1520 ಮಂದಿ ಭಾಗವಹಿಸುತ್ತಿದ್ದಾರೆ.

2 ಸಾವಿರಕ್ಕೂ ಹೆಚ್ಚು ಶಾಲಾ ಮಕ್ಕಳು ಮೂರು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಾಂಸ್ಕøತಿಕ ಕಾರ್ಯಕ್ರಮಗಳ ನಂತರ ರಾಜ್ಯಪಾಲರು ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ.

ಬಜೆಟ್ ಅನುದಾನ ಬಳಸುವಲ್ಲಿ ಮುಗ್ಗರಿಸಿದ ಬೊಮ್ಮಾಯಿ ಸರ್ಕಾರ

ಮೊದಲಿಗೆ ಸುನೀತ ಮತ್ತು ತಂಡದವರಿಂದ ನಾಡಗೀತೆ ಮತ್ತು ರೈತಗೀತೆ ಹಾಡಲಾಗುವುದು ನಂತರ ಉತ್ತರಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ 750 ಮಕ್ಕಳು ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್, ಮಾಗಡಿರಸ್ತೆ ಮತ್ತು ವಿಜಯನಗರ ಬಿಬಿಎಂಪಿ ಶಾಲೆಯ 650 ಮಕ್ಕಳಿಂದ ನಮ್ಮ ಭಾರತ ಭಾಗ್ಯವಿಧಾತ ರೈತ ಹಾಗೂ ಲಗ್ಗೆರೆಯ ವಿಷ್ಣು ಇಂಟರ್‍ನ್ಯಾಷನಲ್ ಶಾಲೆಯ 600 ಮಕ್ಕಳು ಭಾರತಾಂಬೆ ನಿನ್ನ ಜನ್ಮ ದಿನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಎಂಇಜಿ ಸೆಂಟರ್‍ನವರ ಕಲರಿ ಪೈಟು, ದಿ ಆರ್ಮಿ ಸರ್ವೀಸ್ ಕಾಪ್ರ್ಸ್‍ನವರ ಮೊಟರ್ ಸೈಕಲ್ ಡಿಸ್ಪ್ಲೇ ಗಮನ ಸೆಳೆಯಲಿದೆ.

ಅಗತ್ಯ ಸಿದ್ದತೆ: ಕಾರ್ಯಕ್ರಮದಲ್ಲಿ ಯಾವುದೇ ವಿಪತ್ತು ಸಂಭವಿಸಿದ್ದಲ್ಲಿ ತಕ್ಷಣ ಪ್ರತಿಕ್ರಿಯಿಸಲು ಅಗತ್ಯವಿರುವಷ್ಟು ಅಂಬ್ಯುಲೆನ್ಸ್‍ಗಳನ್ನು, ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ಗಾಯಾಳುಗಳ ಚಿಕಿತ್ಸೆಗಾಗಿ ನಗರದ ಹಲವು ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು ಸಾಕಷ್ಟು ಸಂಖ್ಯೆಯ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಆಕಸ್ಮಿಕ ಬೆಂಕಿ ಅವಘಡಗಳನ್ನು ನಿಬಾಯಿಸಲು ಸಾಕಷ್ಟು ಅಗ್ನಿಶಾಮಕ ದಳದ ವಾಹನಗಳುನ್ನು ನಿಯೋಜಿಸಲಾಗಿದೆ.

ಈಡೇರದ ಬೇಡಿಕೆ, ಮತ್ತೆ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು

ಪ್ರತ್ಯೇಕ ಆಸನ ವ್ಯವಸ್ಥೆ: ಅತಿಗಣ್ಯ ವ್ಯಕ್ತಿಗಳು ಜಿ2 ಪ್ರವೇಶದ್ವಾರದ ಮೂಲಕ ಪ್ರವೇಶ ಪಡೆದುಕೊಂಡು ಅವರಿಗೆ ಮೀಸಲಿಡಲಾಗಿರುವ 200 ಆಸನಗಳಲ್ಲಿ ಆಸೀನರಾಗಬೇಕು. ಸರ್ಕಾರಿ ಅಕಾರಿಗಳು, ನಿವೃತ್ತ ಸೇನಾಧಿಕಾರಿಗಳು ಹಾಗೂ ಬಿಎಸ್‍ಎಫ್ ಯೋಧರಿಗೂ 2000 ಆಸನಗಳನ್ನು ಮೀಸಲಿರಿಸಲಾಗಿದ್ದು ಅವರುಗಳು ಜಿ3 ಪ್ರವೇಶದ್ವಾರದ ಮೂಲಕ ಆಗಮಿಸಬೇಕಿದ್ದು, ಸಾರ್ವಜನಿಕರಿಗಾಗಿ 3000 ಆಸನಗಳನ್ನು ಮೀಸಲಿರಿಸಲಾಗಿದ್ದು ಜಿ4 ಪ್ರವೇಶದ್ವಾರದ ಮೂಲಕ ಬರಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳಿಗೆ ವೇದಿಕೆಯ ಬಲಭಾಗದಲ್ಲಿ ಹಾಗೂ ಮಾಧ್ಯಮದವರಿಗೆ ವೇದಿಕೆಯ ಎಡಭಾಗದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಆಹ್ವಾನಿತರು ಕಡ್ಡಾಯವಾಗಿ ಮುಖಗವಸು ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದೆ.

Manekshaw Parade Ground, Republic Day, BBMP, tushar girinath,

Articles You Might Like

Share This Article