ಬೆಂಗಳೂರು,ಡಿ.21- ಕುಕ್ಕರ್ ಬಾಂಬ್ ಪ್ರಕರಣದಲ್ಲಿ ರಾಜಕೀಯ ಲಾಭದ ಲೆಕ್ಕಾಚಾರ ಹಾಕುತ್ತಾಕುಳಿತಿರುವ ಸರ್ಕಾರ ಸಂತ್ರಸ್ಥರನ್ನು ಮರೆತು ರಾಜಕಾರಣದಲ್ಲಿ ಕಾಲ ಕಳೆಯುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ನವೆಂಬರ್ 19ರಂದು ನಡೆದಿದ್ದ ಸ್ಪೋಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡ ಆಟೋ ಚಾಲಕನಿಗೆ 5 ಲಕ್ಷ ಪರಿಹಾರ ಕೊಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದೆ.
ಮಂಗಳೂರು ಸ್ಪೋಟದಿಂದ ಕಾನೂನು ಸುವ್ಯವಸ್ಥೆ ಹಾಗೂ ಗುಪ್ತಚರ ವೈಫಲ್ಯ ಬಯಲಾಗಿದೆ. ಈಗ ಸಂತ್ರಸ್ಥರೊಂದಿಗಿನ ಸರ್ಕಾರದ ನಿರ್ಲಕ್ಷ್ಯವೂ ಬಯಲಾಗಿದೆ. ಗೃಹ ಸಚಿವ ಅರಗಜ್ಞಾನೇಂದ್ರ ಅವರು ಎಲ್ಲವನ್ನೂ ರಾಜಕೀಯ ಲಾಭದಿಂದಲೇ ನೋಡುತ್ತಿದ್ದಾರೆ ಎಂದು ಕಿಡಿಕಾರಿದೆ.
ನಿಯಮ ಪಾಲಿಸಿ, ಇಲ್ಲವೆ ಯಾತ್ರೆ ನಿಲ್ಲಿಸಿ : ಕೇಂದ್ರ ಸರ್ಕಾರ ಎಚ್ಚರಿಕೆ
ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ 95 ದಲಿತ ಸ್ವಚ್ಛತಾ ಕಾರ್ಮಿಕರನ್ನು ಕೆಲಸದಿಂದ ತೆಗೆದಿರುವ ಕುರಿತು ಪ್ರಧಾನಿಗೆ ರಕ್ತ ಪತ್ರ ಬರೆದಿದ್ದಾರೆ. ಫೋಟೋಶೂಟ್ಗಾಗಿ ಪೌರ ಕಾರ್ಮಿಕರ ಪಾದ ತೊಳೆಯುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಫಾಯಿ ಕರ್ಮಾಚಾರಿಗಳ ಬಗ್ಗೆ ನೈಜ್ಯ ಕಾಳಜಿ ಇದ್ದರೆ ಕೆಲಸ ಕಳೆದುಕೊಂಡ ಹುಬ್ಬಳ್ಳಿಯ ಕಾರ್ಮಿಕರಿಗೆ ಮರಳಿ ಉದ್ಯೋಗ ಕೊಡಿಸಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಕಾಯಿಲೇ ತೀವ್ರ ಹಂತದಲ್ಲಿ ಇರುವವರ ನೋವು ಉಪಶಮನಕ್ಕೆ ವಿಶೇಷ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುತ್ತೇವೆ ಎಂದಿತ್ತು
“ನನ್ನ ಕೈಗೆ ಶಾರೂಕ್ ಸಿಕ್ಕರೆ ಜೀವಂತ ಸುಡುತ್ತೇನೆ” . ಆದರೆ ಈಗ ಇರುವ ಆರೋಗ್ಯ ಕೇಂದ್ರಗಳಿಗೆ ಸಿಬ್ಬಂದಿ ಇಲ್ಲ, ಆಂಬುಲೆನ್ಸ್ ಅವ್ಯವಸ್ಥೆ ಬಗೆಹರಿದಿಲ್ಲ,
ಔಷಧ ಪೂರೈಕೆದಾರರ ಬಿಲ್ ಬಾಕಿ ನೀಡಲಿಲ್ಲ, ಆಸ್ಪತ್ರೆಗಳ ಅವ್ಯವಸ್ಥೆ ಸರಿಪಡಿಸಲಿಲ್ಲ. ಭರವಸೆ ನೀಡಿದಂತೆ ಆರೋಗ್ಯ ಕೇಂದ್ರಗಳ ಸ್ಥಾಪನೆಯೂ ಆಗಿಲ್ಲ ಎಂದಿರುವ ಕಾಂಗ್ರೆಸ್ ಬಿಜೆಪಿ ಬಳಿ ಉತ್ತರ ಇದೆಯಾ ಎಂದು ಪ್ರಶ್ನಿಸಿದೆ.
Mangalore, cooker bomb, victims, Congress,