ಮಂಗಳೂರಿನಲ್ಲಿ ಆಟೋರಿಕ್ಷಾ ಸ್ಪೋಟ ಕುರಿತು ಗೃಹಸಚಿವರ ಪ್ರತಿಕ್ರಿಯೆ

Social Share

ಬೆಂಗಳೂರು,ನ.20 -ಮಂಗಳೂರಿನಲ್ಲಿ ನಿನ್ನೆ ಮಧ್ಯಾಹ್ನ ಆಟೋರಿಕ್ಷಾದಲ್ಲಿ ನಡೆದ ಸ್ಪೋಟ ಪ್ರಕರಣದ ಬಗ್ಗೆ ಕೇಂದ್ರ ಭದ್ರತಾಪಡೆ ಮತ್ತು ರಾಜ್ಯ ಪೊಲೀಸರು ಜಂಟಿಯಾಗಿ ಕಾರ್ಯಾರಣೆ ನಡೆಸುತ್ತಿದ್ದು, ತನಿಖೆ ತೀವ್ರಗೊಳಿಸಲಾಗಿದೆ ಎಂದು ಗೃಹ ಸಚಿವ ಆರಗಜ್ಞಾನೇಂದ್ರ ತಿಳಿಸಿದ್ದಾರೆ.

ಆಟೋರಿಕ್ಷಾದಲ್ಲಿ ಹೋಗುವಾಗ ಸ್ಪೋಟ ಸಂಭವಿಸಿ ಗಾಯಗೊಂಡಿರುವ ವ್ಯಕ್ತಿಗೆ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆ ವ್ಯಕ್ತಿ ಈಗ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಪೋಟ ಪ್ರಕರಣದ ಹಿನ್ನೆಲೆ ಬಹಳ ದೊಡ್ಡದಿದ್ದು, ಮಂಗಳೂರು ಪೊಲೀಸರು ಬೇಧಿಸುತ್ತಿದ್ದಾರೆ. ಭಯೋತ್ಪಾದನಾ ಸಂಘಟನೆಯ ಕೈವಾಡವಿರುವ ಶಂಕೆ ಕಂಡುಬರುತ್ತಿದೆ. ಈ ಬಗ್ಗೆ ಕೇಂದ್ರ ಭದ್ರತಾಪಡೆಯವರೊಂದಿಗೆ ಮಾತನಾಡಲಾಗಿದೆ.

ಅರುಣಾಚಲದ ಮೊದಲ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ

ಮಂಗಳೂರಿಗೆ ಕೇಂದ್ರ ಭದ್ರತಾಪಡೆಯವರು ಬಂದಿದ್ದು, ಕಾರ್ಯಾಚರಣೆಗೆ ಇಳಿದಿದ್ದಾರೆ. ಒಂದೆರಡು ದಿನಗಳಲ್ಲಿ ಈ ಘಟನೆಯ ಸಂಪೂರ್ಣ ವಿಚಾರ ಹೊರಬರಲಿದೆ ಎಂದು ಹೇಳಿದ್ದಾರೆ.

Mangaluru, Auto, Explosion, Terror, Home Minister, Araga Jnanendra,

Articles You Might Like

Share This Article