ಮಂಗಳೂರು ಆಟೋ ಸ್ಪೋಟ ಆಕಸ್ಮಿಕವಲ್ಲ, ಭಯೋತ್ಪಾದನಾ ಕೃತ್ಯ

Social Share

ಬೆಂಗಳೂರು,ನ.20- ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಆಟೋದಲ್ಲಿ ಕುಕ್ಕರ್ ಆಕಸ್ಮಿಕವಾಗಿ ಸ್ಪೋಟಗೊಂಡಿಲ್ಲ. ಇದು ಭಯೋತ್ಪಾದನೆಯ ಕೃತ್ಯ ಎಂಬುದು ಸಾಬೀತಾಗಿದೆ. ಭಯೋತ್ಪಾದನೆ ಸಂಘಟನೆಗೆ ಸೇರಿದ ಕೆಲವು ಭಯೋತ್ಪಾದಕರು ನಗರದ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಸ್ಪೋಟಿಸಲು ಸಂಚು ರೂಪಿಸಿದ್ದರು.

ಆಟೋದಲ್ಲಿ ಕುಕ್ಕರ್ ಆಕಸ್ಮಿಕವಾಗಿ ಸ್ಪೋಟಗೊಂಡಿಲ್ಲ. ಉಗ್ರರ ದುಷ್ಕøತ್ಯ ವಿಫಲವಾಗಿದ್ದಕ್ಕೆ ಇದು ನಿದರ್ಶನ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್‍ಸೂದ್ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಆರಗ ಜ್ಞಾನೇಂದ್ರ ಅವರ ಜೊತೆ ಆಗಮಿಸಿದ ಪ್ರವೀಣ್ ಸೂದ್, ಮಂಗಳೂರು ಘಟನೆ ಕುರಿತು ಸಂಪೂರ್ಣವಾದ ವಿವರವನ್ನು ನೀಡಿದ್ದಾರೆ.

ಉಗ್ರರು ಮಂಗಳೂರಿನ ಕೆಲವು ಕಡೆ ಭಾರೀ ಪ್ರಮಾಣದಲ್ಲಿ ಸ್ಪೋಟಿಸಿ ದುಷ್ಕøತ್ಯ ನಡೆಸಲು ಹೊಂಚು ಹಾಕಿದ್ದರು. ಆದರೆ ಅವರ ಯೋಜನೆ ತಲೆಕೆಳಗಾಗಿದ್ದು, ಇದು ಉಗ್ರರ ಕೃತ್ಯವೇ ಹೊರತು ಬೇರೇನಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ಎನ್‌ಕೌಂಟರ್‌ನಲ್ಲಿ ಎಲ್‍ಇಟಿ ಭಯೋತ್ಪಾದಕನ ಹತ್ಯೆ

ಪರಿಶೀಲನೆ ವೇಳೆ ನೆಟ್, ಬೋಲ್ಟ್ , ಬ್ಯಾಟರಿ, ಸರ್ಕೀಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಪತ್ತೆಯಾಗಿವೆ. ಇದು ಸ್ಪೋಟಕ್ಕೆ ಬಳಸುವ ದುಷ್ಕøತ್ಯ ಎಂದು ಹೇಳಲಾಗಿದೆ. ಸದ್ಯ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್‍ರಾಜ್ ಎಂಬಾತ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾನೆ.

ಒಂದು ಬಾರಿ ತಾನು ಮೈಸೂರಿನಿಂದ ಬಂದಿದ್ದಾಗಿ ಹೇಳುತ್ತಿದ್ದಾನೆ. ಮತ್ತೊಂದು ಬಾರಿ ಹಿಂದಿಯಲ್ಲಿ ಹೇಳಿಕೆ ನೀಡುತ್ತಿದ್ದಾನೆ. ಹೀಗೆ ಗೊಂದಲದ ಹೇಳಿಕೆ ನೀಡಿ ತನಿಖೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾನೆ. ಆದರೂ ಆತನಿಂದ ಕೆಲವು ಮಾಹಿತಿ ಪಡೆದಿರುವುದಾಗಿ ಹೇಳಿದ್ದಾರೆ.

ಈ ಹಿಂದೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೆಲವು ಭಯೋತ್ಪಾದಕರು ಕುಕ್ಕರ್‍ನಲ್ಲಿ ಬಾಂಬ್ ಇಟ್ಟು ಸ್ಪೋಟಿಸಲು ಸಂಚು ರೂಪಿಸಿದ್ದರು. ಇದೇ ಮಾದರಿಯಲ್ಲಿ ಮಂಗಳೂರಿನಲ್ಲೂ ಸಹ ಯೋಜನೆ ರೂಪಿಸಲಾಗಿತ್ತು ಎಂದು ಪ್ರವೀಣ್‍ಸೂದ್ ಸಿಎಂ ಮತ್ತು ಗೃಹ ಸಚಿವರಿಗೆ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ತನಗೂ, ಘಟನೆಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾನೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ವಿವರಿಸಿದ್ದಾರೆ.

ಕೊಯಮತ್ತೂರು, ಹೈದರಾಬಾದ್, ದೆಹಲಿ ಮತ್ತಿತರ ಕಡೆ ಈ ಹಿಂದೆ ಇದೇ ರೀತಿ ಬಾಂಬ್ ಸ್ಪೋಟಿಸಲು ಯೋಜನೆ ಹಾಕಲಾಗಿತ್ತು. ಇದು ಸುಧಾರಿತ ಲಘು ಬಾಂಬ್ ಆಗಿದ್ದು, ಯಾವ ಸ್ಥಳದಲ್ಲಿ ಸ್ಪೋಟಿಸಬೇಕೆಂದು ಯೋಜನೆ ಹಾಕಲಾಗಿತ್ತೋ ಅದಕ್ಕೂ ಮುನ್ನವೇ ಕುಕ್ಕರ್ ಸ್ಪೋಟಗೊಂಡಿದೆ. ಹೀಗಾಗಿ ಉಗ್ರರ ಕೃತ್ಯ ವಿಫಲವಾಗಿದೆ ಎಂದು ವಿವರಿಸಿದ್ದಾರೆ.

ಇದು ಐಇಡಿ ಬಾಂಬ್ ಆಗಿದ್ದು, ಒಂದು ವೇಳೆ ಸ್ಪೋಟಗೊಂಡಿದ್ದರೆ ಎಂತಹ ಅನಾಹುತವಾಗುತ್ತಿತ್ತು. ನಿನ್ನೆ 4.30ರಿಂದ 5 ಗಂಟೆಯೊಳಗೆ ಇದನ್ನು ಸ್ಪೋಟಿಸಲು ಸಂಚು ರೂಪಿಸಲಾಗಿತ್ತು.

ದುರ್ಗ ಪರಮೇಶ್ವರಿ ಎಂಬ ಆಟೋದಲ್ಲಿ ಸ್ಪೋಟಿಸಲು ಯೋಜಿಸಲಾಗಿದೆ. ಚಾಲಕನ ಬಳಿ ನಕಲಿ ಗುರುತಿನ ಚೀಟಿ ಇದೆ. ಮೈಸೂರಿನಲ್ಲಿ ಮನೆ ಪಡೆಯಲು ಆತ ಹುಬ್ಬಳ್ಳಿಯ ನಿವೇಶ ನೀಡಿದ್ದ. ಸದ್ಯಕ್ಕೆ ಅದು ನಕಲಿ ಗುರುತಿನ ಚೀಟಿ ಎಂಬುದು ಕಂಡುಬಂದಿದೆ. ನಾವು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ವಿವರಣೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅರುಣಾಚಲದ ಮೊದಲ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ

ತನಿಖೆಯನ್ನು ಚುರುಕುಗೊಳಿಸಿ:
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಯನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಇದು ಅತ್ಯಂತ ಗಂಭೀರವಾದ ಪ್ರಕರಣ. ಕರಾವಳಿಯಲ್ಲಿ ಉಗ್ರರು ದುಷ್ಕøತ್ಯ ನಡೆಸಲು ಸಂಚು ರೂಪಿಸಿರುವುದು ಈ ಘಟನೆಯಿಂದ ಸಾಬೀತಾಗಿದೆ.

ಕೇರಳಕ್ಕೆ ಹೊಂದಿಕೊಂಡಿರುವ ಗಡಿಪ್ರದೇಶಗಳು, ಚೆಕ್‍ಪೋಸ್ಟ್, ಬಂದರು, ವಿಮಾನ ನಿಲ್ದಾಣ, ಬಸ್ ನಿಲ್ದಾಣ, ಪ್ರಮುಖ ದೇವಾಲಯಗಳು ಸೇರಿದಂತೆ ಮತ್ತಿತರ ಕಡೆ ಹದ್ದಿನ ಕಣ್ಣಿಡಬೇಕೆಂದು ಸಿಎಂ ಪ್ರವೀಣ್ ಸೂದ್‍ಗೆ ಸೂಚನೆ ನೀಡಿದ್ದಾರೆ.

ಕೇರಳದಿಂದ ಬರುವ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸಬೇಕು, ಅದೇ ರೀತಿ ವಿಮಾನ ನಿಲ್ದಾಣದಿಂದ ಬರುವವರು ಮತ್ತು ಹೋಗುವವರ ಮೇಲೆ ಹದ್ದಿನ ಕಣ್ಣಿಡಬೇಕು. ಚುನಾವಣಾ ವರ್ಷ ಆಗಿರುವುದರಿಂದ ಕೆಲವು ಸಮಾಜಘಾತುಕ ಶಕ್ತಿಗಳು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಈ ರೀತಿಯ ದುಷ್ಕøತ್ಯ ನಡೆಸಲು ಹೊಂಚು ಹಾಕುತ್ತಾರೆ. ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸುವಂತೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ.

ಪ್ರಕರಣ ಕುರಿತು ಕೇಂದ್ರ ಗೃಹ ಇಲಾಖೆಗೆ ತಕ್ಷಣವೇ ವರದಿ ನೀಡಬೇಕೆಂದು ಸಿಎಂ ಪ್ರವೀಣದ್ ಸೂದರಿಗೆ ನಿರ್ದೇಶನ ನೀಡಿದ್ದಾರೆ ಎಂದು ಗೊತ್ತಾಗಿದೆ.

ಎನ್‍ಐಎ ಆಗಮನ: ಮೂಲಗಳ ಪ್ರಕಾರ ಈಗಾಗಲೇ ಕಳೆದ ರಾತ್ರಿಯೇ ಕೇಂದ್ರದಿಮದ ಎನ್‍ಐಎ ತಂಡ ಆಗಮಿಸಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದೆ. ಮೂವರು ಅಕಾರಿಗಳ ನೇತೃತ್ವದ ತಂಡ ನಗರಕ್ಕೆ ಆಗಮಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದೆ.

Mangaluru, Auto-Rickshaw, blast, ‘Act of Terror,’ confirms, Karnataka,Police,

Articles You Might Like

Share This Article