ಹಿಂದೂ ದೇವಾಲಯಗಳನ್ನೇ ಟಾರ್ಗೆಟ್ ಮಾಡಿದ್ದ ಕುಕ್ಕರ್ ಕ್ರಿಮಿ ಶಾರೀಕ್

Social Share

ಮಂಗಳೂರು,ನ.24- ಪ್ರೆಜರ್ ಕುಕ್ಕರ್ ಮೂಲಕ ಬಾಂಬ್ ಸ್ಪೋಟಿಸಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಶಂಕಿತ ಉಗ್ರ ಶಾರೀಕ್ ಮೊಹಮ್ಮದ್ ಹಿಂದೂ ದೇವಾಲಯಗಳನ್ನುಗ ಗುರಿಯಾಗಿಟ್ಟುಕೊಂಡು ಸ್ಪೋಟಿಸಲು ಸಂಚು ರೂಪಿಸಿದ್ದು ಬೆಳಕಿಗೆ ಬಂದಿದೆ.

ಮಂಗಳೂರಿನ ಪ್ರಮುಖ ಹಿಂದೂ ದೇವಾಲಯಗಳಾದ ಕದ್ರಿಯಲ್ಲಿರುವ ಮಂಜುನಾಥಸ್ವಾಮಿ, ಕುದ್ರೋಳಿ ಗೋಕರ್ಣನಾಥಸ್ವಾವಿ ಹಾಗೂ ಮಂಗಳಾದೇವಿ ದೇವಾಲಯಗಳೇ ಈತನ ಟಾರ್ಗೆಟ್ ಆಗಿತ್ತು ಎಂದು ಎನ್‍ಐಎ ಮೂಲಗಳು ತಿಳಿಸಿವೆ.

ಲಕ್ಷದೀಪೋತ್ಸವ ಸಂದರ್ಭದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ನಡೆಸಲು ಶಾರೀಕ್ ಮೊಹಮ್ಮದ್ ಹೊಂಚು ಹಾಕಿದ್ದ. ಜೊತೆಗೆ ಮಂಗಳೂರಿನ ಪಡಿಲು ಬಳಿ ಇರುವ ರೈಲ್ವೆ ನಿಲ್ದಾಣ, ಬಸ್ ಮತ್ತು ವಿಮಾನ ನಿಲ್ದಾಣಗಳನ್ನು ಕೂಡ ಈತ ಟಾರ್ಗೆಟ್ ಮಾಡಿದ್ದ.

ಬೆಂಗಳೂರು ಸೇರಿ ರಾಜ್ಯದಾದ್ಯಂತ ಇನ್ನೂ 2 ದಿನ ಜಿಟಿಜಿಟಿ ಮಳೆ

ತನ್ನ ಮೊಬೈಲ್ ಡಿಪಿಗೆ ಆತ ಶಿವ ಮೂರ್ತಿಯನ್ನು ಹಾಕಿಕೊಂಡಿದ್ದೇ ಇದೇ ಕಾರಣಕ್ಕಾಗಿ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಕಾರ್ತಿಕ ಮಾಸದ ಪ್ರಯುಕ್ತ ಕರಾವಳಿಯ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ.

ಈ ಸಂದರ್ಭದಲ್ಲಿ ದೇಶ, ವಿದೇಶಗಳಲ್ಲಿ ನೆಲೆಸಿರುವ ಮೂಲ ನಿವಾಸಿಗಳು ಪೂಜೆ ನೆರವೇರಿಸಲು ಜಿಲ್ಲೆಯ ಪ್ರಮುಖ ದೇವಾಲಯಗಳಿಗೆ ಸಾವಿರಾರು ಭಕ್ತರು ಬಂದು ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಾರೆ.

ಭಾರೀ ಜನಜಂಗುಳಿ ಇರುವಾಗಲೇ ಮೂರು ದೇವಾಲಯಗಳನ್ನು ಗುರಿಯಾಗಿಟ್ಟುಕೊಂಡು ಬಾಂಬ್ ಸ್ಪೋಟಿಸಿದರೆ ದೊಡ್ಡ ಅನಾಹುತ ಸಂಭವಿಸಲಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂಬುದು ಶಾರೀಕ್‍ನ ಲೆಕ್ಕಾಚಾರವಾಗಿತ್ತು.

ಬೆಂಗಳೂರು ಸೇರಿ ರಾಜ್ಯದಾದ್ಯಂತ ಇನ್ನೂ 2 ದಿನ ಜಿಟಿಜಿಟಿ ಮಳೆ

ಬಾಂಬ್ ಸ್ಪೋಟ ಮಾಡುವುದರಲ್ಲಿ ಅಷ್ಟೇನೂ ಪರಿಣಿತನಲ್ಲದ ಈತ ಬಾಂಬ್ ಹೇಗೆ ತಯಾರಿಸಬೇಕು ಮತ್ತು ಸ್ಪೋಟಿಸುವ ಕುರಿತಂತೆ ಯುಟೂಬ್ ಮೊರೆ ಹೋಗಿದ್ದ.

ಹೀಗಾಗಿಯೇ ಸರಿಯಾದ ಪೂರ್ವ ಸಿದ್ದತೆ ಇಲ್ಲದೆ ಪ್ರೆಜರ್ ಕುಕ್ಕರ್‍ನಲ್ಲಿ ಬಾಂಬ್ ಇಟ್ಟುಕೊಂಡು ನಗರದ ಪಂಪ್‍ವೆಲ್ ಬಳಿ ಸ್ಪೋಟಿಸಿ ನಂತರ ದೇಗುಲಗಳಲ್ಲಿ ಸ್ಪೋಟಿಸುವ ಹೊಂಚು ಹಾಕಿದ್ದ. ಆದರೆ ಆತನ ತಂತ್ರ ಕೈಕೊಟ್ಟಿದ್ದರಿಂದ ಪಂಪ್‍ವೆಲ್‍ಗೆ ತೆರಳುವ ಮುನ್ನವೇ ನಾಗೋರಿ ಬಳಿಯೇ ಸ್ಪೋಟಗೊಂಡು ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು.

ಸದ್ಯ ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಗುಣಮುಖವಾದ ನಂತರ ಎನ್‍ಐಎ ತನಿಖಾ ತಂಡ ವಶಕ್ಕೆ ಪಡೆಯಲಿದ್ದು, ಮತ್ತಷ್ಟು ಸತ್ಯಾಂಶ ಹೊರಬರುವ ಸಂಭವವಿದೆ.

Mangaluru, auto, rickshaw, blast, Mohammed Shariq, target, Hindu, temples,

Articles You Might Like

Share This Article