ಬೆಂಗಳೂರು,ಡಿ.17- ಕುಕ್ಕರ್ ಬಾಂಬ್ ಪ್ರಕರಣದ ಆರೋಪಿ ಶಾರಿಕ್ ಮಂಗಳೂರಿನ ಜನನೀಬಿಢ ಸ್ಥಳದಲ್ಲಿ ಸ್ಫೋಟ ನಡೆಸಿ, ಅಪಾರ ಪ್ರಮಾಣದ ಸಾವು ನೋವಿಗೆ ಕಾರಣವಾಗಬೇಕು ಹಾಗೂ ಜನ ಸಾಮಾನ್ಯರಲ್ಲಿ ಭಯ ಹುಟ್ಟಿಸಬೇಕು ಎಂಬ ಉದ್ದೇಶ ಹೊಂದಿದ್ದ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ನವೆಂಬರ್ 19ರಂದು ಸಂಜೆ 4.30ರಲ್ಲಿ ಮಂಗಳೂರಿನ ನಾಗೋರಿಯಲ್ಲಿ ಸಂಭವಿಸಿದ ಬಾಂಬ್ ಸೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳಿಗೆ ಹಲವು ಸೋಟಕ ಮಾಹಿತಿಗಳು ತಿಳಿದು ಬಂದಿವೆ. ಸೋಟದಲ್ಲಿ ಶೇ.40ರಷ್ಟು ಸುಟ್ಟ ಗಾಯಗಳಿಂದ ಅಸ್ವಸ್ತಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಶಾರಿಕ್, ಬಹುತೇಕ ಗುಣಮುಖನಾಗಿದ್ದಾನೆ.
ನಡೆದಾಡುವುದು, ಮಾತನಾಡುವುದರಲ್ಲಿ ಸಫಲನಾಗಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಇಂದು ಮಂಗಳೂರಿನಿಂದ ಬೆಂಗಳೂರಿಗೆ ಕರೆ ತರಲಾಗುತ್ತಿದೆ. ಇಲ್ಲಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುವುದು.
ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳಿಗೆ ಆತ ನೀಡಿರುವ ಹೇಳಿಕೆಗಳಲ್ಲಿ ಹಲವು ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ. ಮೊದಲು ಜನನೀಬಿಡ ಪ್ರದೇಶಗಳಲ್ಲಿ ಬಾಂಬ್ ಸೋಟಿಸುವುದು, ನಂತರ ಕದ್ರಿ ಸೇರಿದಂತೆ ಇತರ ದೇವಸ್ಥಾನಗಳನ್ನು ಗುರಿಯಾಗಿಸಿ ಬಾಂಬ್ ಸ್ಫೋಟಿಸುವ ಉದ್ದೇಶ ಹೊಂದಿದ್ದ ಎಂದು ತನಿಖೆಯಿಂದ ಗೋತ್ತಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೂಲ ನಿವಾಸಿಯಾಗಿದ್ದ ಶಾರಿಕ್ ದಾರಿ ತಪ್ಪಿದ ಬಳಿಕ ತಮಿಳುನಾಡು, ಕೇರಳ ಹಾಗೂ ಇತರ ರಾಜ್ಯಗಳಲ್ಲಿ ಸಂಚರಿಸಿದ್ದ. ಸೋಟಕ್ಕೂ ಕೆಲವು ತಿಂಗಳ ಮೊದಲು ಮೈಸೂರಿಗೆ ಬಂದು ನೆಲೆಸಿದ್ದ. ಇದಕ್ಕಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿದ್ದ.
ನಕಲಿ ದಾಖಲೆಗಳನ್ನು ಬಳಸಿಯೇ ಮೊಬೈಲ್ ಸಿಮ್ ಕಾರ್ಡ್ಗಳನ್ನು ಖರೀದಿಸಿದ್ದ. ಸೋಟದ ದಿನ ಮೈಸೂರಿನಿಂದ ಮಡಕೇರಿ ಮೂಲಕ ಮಂಗಳೂರಿಗೆ ಬಸ್ನಲ್ಲಿ ಪ್ರಯಾಣಿಸಿದ್ದ. ದಾರಿ ಮಧ್ಯೆ ಬಸ್ ಅನ್ನು ಊಟಕ್ಕಾಗಿ ನಿಲ್ಲಿಸಲಾಗಿತ್ತು. ಅಲ್ಲಿ ಕುಕ್ಕರ್ ಬಾಂಬ್ ಅನ್ನು ತನ್ನೊಂದಿಗೆ ಹೋಟೆಲ್ಗೆ ತೆಗೆದುಕೊಂಡು ಹೋಗಿದ್ದ. ಅದೃಷ್ಟವಶಾತ್ ಎಲ್ಲಿಯೂ ಅದು ಸೋಟವಾಗಿರಲಿಲ್ಲ.
ಮಧ್ಯರಾತ್ರಿ ಧಗಧಗಿಸಿದ ಮನೆ, ಒಂದೇ ಕುಟುಂಬದ 6 ಮಂದಿ ಸಜೀವ ದಹನ
ಮಂಗಳೂರಿನಲ್ಲಿ ಬಸ್ ಇಳಿದ ಆರೋಪಿ ಪಂಪ್ವೇಲ್ಗೆ ತೆರಳಲು ಆಟೋ ಹತ್ತಿದ್ದ, ಹಾದಿ ಮಧ್ಯೆ ನಾಗೋರಿಯಲ್ಲಿ ಬಾಂಬ್ ಆಕಸ್ಮಿಕವಾಗಿ ಸ್ಪೋಟಗೊಂಡಿತ್ತು. ಕುಕ್ಕರ್ ಬಾಂಬ್ಗೆ ಅಳವಡಿಸಿದ್ದ ಟೈಮರ್ನಲ್ಲಿನ ವ್ಯತ್ಯಾಸದಿಂದ ಅನಿರೀಕ್ಷಿತ ಸೋಟ ಸಂಭವಿಸಿದೆ ಎಂದು ಎನ್ಐಎ ಅಕಾರಿಗಳ ಮುಂದೆ ಶಾರಿಕ್ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಹಣಕಾಸು ನೆರವು: ಕಟ್ಟಾ ಹಿಂದು ವಿರೋ ನಿಲುವುಗಳನ್ನು ಹೊಂದಿದ್ದ ಶಾರಿಕ್ 2020ರಲ್ಲಿ ಗೋಡೆ ಮೇಲೆ ಆಕ್ಷೇಪಾರ್ಹ ಬರವಣಿಗೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಬಳಿಕ ತುಂಗಾ ನದಿ ತೀರದಲ್ಲಿ ಕಚ್ಚಾ ಮಾದರಿಯಲ್ಲಿ ತಯಾರಿಸಲಾದ ಬಾಂಬ್ ಅನ್ನು ಸೋಟಿಸಿ ಶಂಕಾಸ್ಪದ ವ್ಯಕ್ತಿಯ ಪಟ್ಟಿಗೆ ಸೇರ್ಪಡೆಯಾಗಿದ್ದ ಎಂಬುದು ಪೊಲೀಸರ ತನಿಖೆಯಿಂದ ಗೋತ್ತಾಗಿದೆ.
ಅಂತಾರಾಷ್ಟ್ರೀಯ ಸಂಘಟನೆಗಳ ಸಂಪರ್ಕ ಹೊಂದಿರುವ ಅಬ್ದುಲ್ ಮತೀನ್ ಅಹಮದ್ ತಹ ಮತ್ತು ಶಾರಿಕ್ ಹೆಸರುಗಳು ಪ್ರಕರಣವೊಂದರಲ್ಲಿ ಕೇಳಿ ಬಂದಿದ್ದವು. ಮತೀನ್ ವಿದೇಶಕ್ಕೆ ತೆರಳಿದ್ದು ಅಲ್ಲಿಯೇ ತಲೆ ಮರೆಸಿಕೊಂಡಿದ್ದಾನೆ. ಅಂದಲೇ ಶಾರೀಕ್ಗೆ ಹಣಕಾಸು ನೆರವು ನೀಡುತ್ತಿದ್ದ ಎನ್ನಲಾಗಿದೆ.
ಬಿಟ್ಕಾಯಿನ್ ಅಥವಾ ಇತರೆ ಡಿಜಿಟಲ್ ಸ್ವರೂಪದಲ್ಲಿ ಶಾರಿಕ್ಗೆ ಕಾಲ ಕಾಲಕ್ಕೆ ಹಣಕಾಸು ನೆರವು ನೀಡುತ್ತಿದ್ದ. ಈ ಮೂಲಕ ಆತನ ಉಗ್ರ ಚಟುವಟಿಕೆಗಳಿಗೆ ಬೆಂಬಲವಾಗಿದ್ದ ಎನ್ನಲಾಗಿದೆ. ತನಿಖೆ ನಡೆಸುತ್ತಿರುವ ಎನ್ಐಎ ಅಕಾರಿಗಳು ಮತ್ತಷ್ಟು ಮಾಹಿತಿ ಕಲೆ ಹಾಕಲು ಆಧುನಿಕ ವಿಧಾನಗಳನ್ನು ಬಳಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
#MangaluruBlast, #MangaluruAutoBlast, #rickshawblast, #Bomber, #MohammedShari, #TerrorAccused,