ತುಂಬಾ ಭಯಾನಕವಾಗಿದೆ ಕುಕ್ಕರ್ ಕಿರಾತಕ ಶಾರೀಕ್ ಹಿನ್ನೆಲೆ

Social Share

ಮಂಗಳೂರು,ನ.21- ಮಂಗಳೂರಿನ ಕಂಕನಾಡಿ ಚಲಿಸುತ್ತಿದ್ದ ಆಟೋದಲ್ಲಿ ಬಾಂಬ್ ಸ್ಪೋಟಿಸಲು ಸಂಚು ರೂಪಿಸಿದ್ದು, ಈ ಹಿಂದೆ ತಲೆಮರೆಸಿ ಕೊಂಡಿದ್ದ ಶಂಕಿತ ಉಗ್ರ ಶಾರೀಕ್ ಮೊಹಮ್ಮದ್ ಎಂಬುದು ದೃಢಪಟ್ಟಿದೆ.

ಈ ಹಿಂದೆಯೂ ಆತ ಭಯೋತ್ಪಾದನೆ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ಎಂದು ತಿಳಿದುಬಂದಿದೆ.
ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸೊಂಡೆಕೊಪ್ಪ ಗ್ರಾಮದ ನಿವಾಸಿಯಾದ ಈತ ಕೆಲ ತಿಂಗಳ ಹಿಂದೆ ಪೊಲೀಸರ ಬಂಧನದಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದ.

ಮಂಗಳೂರಿನ ಜನನಿಬಿಡ ಪ್ರದೇಶ, ವಿಮಾನನಿಲ್ದಾಣ, ಮಾರುಕಟ್ಟೆ ಹಾಗೂ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ಸ್ಪೋಟಿಸಲು ಸಂಚು ರೂಪಿಸಿದವನೇ ಈತ ಎಂದು ಎನ್‍ಐಎ ಮೂಲಗಳು ತಿಳಿಸಿವೆ.

ಪ್ರಸ್ತುತ ಮಂಗಳೂರಿನ ಫಾದರ್‍ಮುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈತನನ್ನು ತೀರ್ಥಹಳ್ಳಿಯಲ್ಲಿರುವ ಚಿಕ್ಕಪ್ಪ, ಚಿಕ್ಕಮ್ಮ ಹಾಗೂ ಆತನ ಸಹೋದರಿ ಗುರುತು ಪತ್ತೆಹಚ್ಚಿ ಈತನೇ ಶಾರೀಕ್ ಮೊಹಮ್ಮದ್ ಎಂಬುದನ್ನು ದೃಢಪಡಿಸಿದ್ದಾರೆ.

ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ಟ್ರಕ್ ಹರಿದು 12 ಮಂದಿ ಸಾವು

ಕಳೆದ ಆರೇಳು ತಿಂಗಳಿನಿಂದ ಕುಟುಂಬದವರ ಸಂಪರ್ಕವನ್ನೇ ಕಳೆದುಕೊಂಡಿದ್ದ ಶಾರೀಕ್ ಪರಿಸ್ಥಿತಿಯನ್ನು ಕಂಡು ಆತನ ಕುಟುಂಬಸ್ಥರು ತನಿಖಾಧಿಕಾರಿಗಳ ಮುಂದೆ ಕಣ್ಣೀರು ಹಾಕಿದರು ಎಂದು ಮೂಲಗಳು ಖಚಿತಪಡಿಸಿವೆ.
ಶೇ.45ರಷ್ಟು ದೇಹದ ಭಾಗ ಸುಟ್ಟು ಹೋಗಿದ್ದು, ಕೈಕಾಲು, ಕುತ್ತಿಗೆ ಸೇರಿದಂತೆ ದೇಹದ ಅನೇಕ ಭಾಗಗಳು ಸುಟ್ಟು ಗಾಯಗಳಾಗಿವೆ.

ಐಸಿಯು ಘಟಕದಲ್ಲಿ ಆತನ ಪರಿಸ್ಥಿತಿಯನ್ನು ಕಂಡು ಕುಟುಂಬದ ಸದಸ್ಯರು ತಿಂಡಿಯನ್ನು ಕೊಟ್ಟು ಕಣ್ಣೀರು ಹಾಕುತ್ತಲೇ ಹಿಂತಿರುಗಿದ್ದಾರೆ. ಗೋಡೆಯ ಮೇಲೆ ಭಯೋತ್ಪಾದಕ ಬರಹ ಬರೆದಿದ್ದ ಪ್ರಕರಣದಲ್ಲಿ ಶಾರೀಕ್‍ನನ್ನು 2020ರ ನವೆಂಬರ್‍ನಲ್ಲಿ ಬಂಧಿಸಲಾಗಿತ್ತು. ಆತ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದ.

ತೀರ್ಥಹಳ್ಳಿಯವನಾದ ಶಾರೀಕ್ ಪ್ರೇಮ್ ರಾಜ್ ಎಂಬ ಹೆಸರಿನಲ್ಲಿ ತನಗೆ ನಕಲಿ ಗುರುತಿನ ಚೀಟಿ ಮಾಡಿಸಿಕೊಂಡು ಆಟೋದಲ್ಲಿ ಕುಕ್ಕರ್ ಐಇಡಿಯೊಂದಿಗೆ ತೆರಳುತ್ತಿದ್ದ. ಈ ವೇಳೆ ಸ್ಪೋಟ ಸಂಭವಿಸಿದ್ದು, ಆಟೋ ಚಾಲಕ ಪುರುಷೋತ್ತಮ್‍ಗೂ ತೀವ್ರ ಗಾಯಗಳಾಗಿದೆ.

ಪ್ಲಾಟ್‍ಫಾರ್ಮ್‍ಗೆ ಗೂಡ್ಸ್ ರೈಲು ಡಿಕ್ಕಿ : ಇಬ್ಬರು ಸಾವು

ಪ್ರಾಥಮಿಕ ವರದಿಗಳ ಪ್ರಕಾರ ಆರೋಪಿ ಶಾರೀಕ್ ಐಇಡಿಯನ್ನು ನಿರ್ದಿಷ್ಟ ಗುರಿಯೊಂದಿಗೆ ಅಳವಡಿಸಲು ಉದ್ದೇಶಿಸಿದ್ದ. ಆದರೆ ಆಟೋ ರಿಕ್ಷಾದಲ್ಲೇ ಸ್ಪೋಟಗೊಂಡಿದೆ. ವಿಧಿವಿಜ್ಞಾನ ತಂಡ ತನಿಖೆ ಪ್ರಾರಂಭಿಸಿದ್ದು, ಪ್ರೆಷರ್ ಕುಕ್ಕರ್‍ನ ಒಳಗೆ ಸಕ್ರ್ಯೂಟ್ ಮತ್ತು ಟೈಮರ್ ಪತ್ತೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇನ್ನು ಶಾರೀಕ್ ಸಿಮ್ ಕಾರ್ಡ್ ಖರೀದಿಸಲು ಆಧಾರ್ ವಿವರಗಳನ್ನು ಬಳಸಿದ್ದ ಎನ್ನಲಾದ ಉದಗಮಂಡಲಂನ ತುಮ್ಮನಟ್ಟಿಯ ಸುರೇಂದ್ರನ್ (28) ಎಂಬಾತನನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುರೇಂದ್ರನ್ ಸಿಂಗಾನಲ್ಲೂರು ಬಳಿಯ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಶಾರೀಕ್‍ನೊಂದಿಗೆ ವಸತಿ ನಿಲಯದಲ್ಲಿ ಕೊಠಡಿ ಹಂಚಿಕೊಂಡಿದ್ದರು.

ಶಾರೀಕ್ ಸೆಪ್ಟೆಂಬರ್‍ನಲ್ಲಿ ಕೊಯಮತ್ತೂರ್‍ಗೆ ಭೇಟಿ ನೀಡಿದ್ದ. ಸುರೇಂದ್ರನ್ ಎಂಬ ವ್ಯಕ್ತಿಯೊಂದಿಗೆ ಕೆಲವು ದಿನಗಳ ಕಾಲ ವಸತಿ ನಿಲಯದಲ್ಲಿ ತಂಗಿದ್ದ ಎಂದು ಮೂಲಗಳು ತಿಳಿಸಿವೆ. ಪ್ರಕರಣವೊಂದರಲ್ಲಿ ಜಾಮೀನು ಪಡೆದುಕೊಂಡಿದ್ದ ತನ್ನನ್ನು ಶಿವಮೊಗ್ಗ ಪೊಲೀಸರು ಹುಟುಕುತ್ತಿದ್ದಾರೆಂದು ತಿಳಿದ ಶಾರೀಕ್ ತಮಿಳುನಾಡಿಗೆ ಬಂದಿರಬಹುದು ಎಂದು ಶಂಕಿಸಲಾಗಿದೆ.

ಭಾರತ-ಅಮೇರಿಕ ನಡುವೆ ಅತ್ಯುತ್ತಮ ಸಂಬಂಧವಿದೆ : ಶ್ವೇತಭವನದ ಉನ್ನತಾಧಿಕಾರಿ

ಸಂಘಿಗಳೊಂದಿಗೆ ವ್ಯವಹರಿಸಲು ಲಷ್ಕರ್-ಇ-ತೊಯ್ಬಾ ಮತ್ತು ತಾಲಿಬಾನ್‍ಗಳನ್ನು ಆಹ್ವಾನಿಸುವಂತೆ ಮಾಡದಿರಿ. ಲಷ್ಕರ್ ಜಿಂದಾಬಾದ್ ಎಂದು ಅಪಾರ್ಟ್‍ಮೆಂಟ್ ಕಾಂಪ್ಲೆಕ್ಸ್‍ನ ಕಾಂಪೌಂಡ್ ಗೋಡೆಯ ಮೇಲೆ ಕಪ್ಪು ಸ್ಪ್ರೇ ಪೇಂಟ್ ಬಳಸಿ ಬರೆದಿದ್ದ ಹಿನ್ನೆಲೆಯಲ್ಲಿ ಮಂಗಳೂರು ಪೂರ್ವ ಪೊಲೀಸರು ಶಾರಿಕ್ ಮತ್ತು ಯು ಸಾದತ್ ಹುಸೇನ್ (50) ಅವರನ್ನು ಡಿಸೆಂಬರ್ 3, 2020ರಂದು ಯುಎಪಿಎ ಅಡಿಯಲ್ಲಿ ಬಂಧನಕ್ಕೊಳಪಡಿಸಿದ್ದರು.

Mangaluru, auto, rickshaw, blast, terrorist, Mohammed Shariq,

Articles You Might Like

Share This Article