ಭಾರೀ ಸ್ಪೋಟಕ್ಕೆ ನಡೆದಿತ್ತಾ ಸಂಚು..?

Social Share

ನವದೆಹಲಿ,ನ.23- ಮಂಗಳೂರು ನಾಗೋರಿಯಲ್ಲಿ ಸಂಭವಿಸಿರುವ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಮತ್ತು ತಮಿಳುನಾಡಿನ ಕೊಯಮತ್ತೂರು ಸ್ಪೋಟದ ಆರೋಪಿ ಸೇರಿ ಇಬ್ಬರು ಏಕಕಾಲಕ್ಕೆ ಕೇರಳದಲ್ಲಿ ತಂಗಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಪ್ರಕರಣ ಮತ್ತಷ್ಟು ಆತಂಕಕಾರಿಯಾಗಲಾರಂಭಿಸಿದೆ.

ಅಕ್ಟೋಬರ್ 23ರಂದು ಕೊಯಮತ್ತೂರಿನಲ್ಲಿ ಬಾಂಬ್ ಸ್ಪೋಟವಾಗಿತ್ತು. ಅದರ ಪ್ರಮುಖ ಆರೋಪಿ ಜಮೇಸ್ಮೊಬಿನ್ ಚಿಕಿತ್ಸೆ ನೆಪದಲ್ಲಿ ಸೆಪ್ಟಂಬರ್ ಎರಡನೇ ವಾರದಲ್ಲಿ ಕೇರಳಕ್ಕೆ ಭೇಟಿ ನೀಡಿದ್ದ ದಾಖಲೆಗಳು ಪತ್ತೆಯಾಗಿವೆ.

ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಶಾರಿಕ್ ಕೂಡ ಸೆಪ್ಟಂಬರ್ 13ರಿಂದ 18ರವರೆಗೂ ಐದು ದಿನಗಳ ಕಾಲ ಕೇರಳದಲ್ಲಿ ಉಳಿದುಕೊಂಡಿರುವ ಬಗ್ಗೆ ದಾಖಲೆಗಳು ಪತ್ತೆಯಾಗಿವೆ. ಶಾರಿಕ್ ಕೇರಳದ ಆಲುವಾ ರೈಲ್ವೆ ನಿಲ್ದಾಣ ಬಳಿಯ ಜೈತೋನ್ರೂಮ್ ಎಂಬ ಲಾಡ್ಜ್ನಲ್ಲಿ ತಂಗಿದ್ದ. ಸೆಪ್ಟಂಬರ್ 13ರಂದು ಸಂಜೆ 4.30ಕ್ಕೆ ಹೋಟೆಲ್ಗೆ ಆಗಮಿಸಿ ಹಿಂದೂ ವ್ಯಕ್ತಿಯ ಹೆಸರಿನ ದಾಖಲೆ ಸಲ್ಲಿಸಿ ಹೋಟೆಲ್ ರೂಮ್ನ್ನು ಬಾಡಿಗೆ ಪಡೆದಿದ್ದು, ಆತ ಉಳಿದುಕೊಂಡಿದ್ದ ಅವಧಿಯಲ್ಲಿ ಆನ್ಲೈನ್ ಮೂಲಕ ಕೆಲ ವಸ್ತುಗಳನ್ನು ತರಿಸಿಕೊಂಡಿದ್ದನ್ನು ನೋಡಿರುವುದಾಗಿ ಸಿಬ್ಬಂದಿಗಳು ತಿಳಿಸಿದ್ದಾರೆ.

ಎಸ್‍ಐ ನೇಮಕಾತಿ ಅಕ್ರಮ : ಆರೋಪಿಗಳಿಂದ 3.11 ಕೋಟಿ ರೂ. ಜಪ್ತಿ

ಈ ಹೋಟೆಲ್ ಹೊಸದಾಗಿ ನಿರ್ಮಾಣವಾಗಿದ್ದರಿಂದ ಆರಂಭದಲ್ಲಿ ದಾಖಲಾತಿಗಳ ನಿರ್ವಹಣೆ ಹಾಗೂ ಗ್ರಾಹಕರ ವಿಳಾಸಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತಿರಲಿಲ್ಲ ಎಂದು ಹೇಳಲಾಗಿದೆ.

ಇದೇ ಸಂದರ್ಭದ ಲಾಭ ಪಡೆದ ಆರೋಪಿ ನಕಲಿ ದಾಖಲಾತಿಗಳನ್ನು ನೀಡಿ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾನೆ.
ಐದು ದಿನಗಳ ಅವಧಿಯಲ್ಲಿ ಹೋಟೆಲ್ನಲ್ಲಿ ಯಾರೂ ಆತನನ್ನು ಭೇಟಿ ಮಾಡಲು ಬಂದಿರಲಿಲ್ಲ ಎಂದು ಸಿಬ್ಬಂದಿಗಳು ಖಚಿತ ಪಡಿಸಿದ್ದಾರೆ.

ನೆಲಮಂಗಲದಲ್ಲಿ ಘರ್ಜಿಸಿದ ಪೊಲೀಸ್ ಪಿಸ್ತೂಲ್ : ದರೋಡೆಕೋರನಿಗೆ ಗುಂಡೇಟು

ದಾಖಲೆಗಳು ಮತ್ತು ಸ್ಪಷ್ಟ ಪುರಾವೆಗಳ ಪ್ರಕಾರ ಶಾರಿಕ್ ಹಾಗೂ ಮೊಬಿನ್ ಕೇರಳಕ್ಕೆ ಭೇಟಿ ನೀಡಿದ್ದು ಖಚಿತವಾಗಿದೆ. ಈ ಇಬ್ಬರು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಹಿನ್ನೆಲೆಯವರಾಗಿದ್ದು, ಕೇರಳ ಸೇರಿದಂತೆ ಹಲವು ಕಡೆ ಸಂಚರಿಸಲು ಹಾಗೂ ಹೋಟೆಲ್ನಲ್ಲಿ ಉಳಿದುಕೊಳ್ಳಲು ಹಣಕಾಸಿನ ನೆರವು ಎಲ್ಲಿಂದ ಬರುತ್ತಿತ್ತು ಎಂಬ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ.

ಕೇರಳದಲ್ಲಿ ಕೆಲವು ಮೂಲಭೂತವಾದಿ ಸಂಘಟನೆಗಳು ಅಮಾಯಕ ಹುಡುಗರನ್ನು ಸೆಳೆದು ಧರ್ಮಾಂಧತೆಯನ್ನು ತಲೆಗೆ ತುಂಬಿ ವಿದ್ವಂಸಕತೆಗೆ ಪ್ರೇರೆಪಿಸುತ್ತಿರುವುದು ಹೊಸ ವಿಷಯವೇನಲ್ಲ. ಈ ಇಬ್ಬರು ಆರೋಪಿಗಳು ಏಕಕಾಲಕ್ಕೆ ಕೇರಳಕ್ಕೆ ಭೇಟಿ ನೀಡಿರುವುದರ ಹಿಂದೆ ದೊಡ್ಡ ಸಂಚೊಂದರ ವ್ಯೂಹ ರಚನೆಯಾಗಿತ್ತೆ ಎಂಬ ಅನುಮಾನಗಳು ಕಾಡಲಾರಂಭಿಸಿವೆ.

ನಾಳೆ ಕುಮುಟಾದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ

ಮಂಗಳೂರಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೇರಳ ಪೊಲೀಸರು ಎಚ್ಚೆತ್ತುಕೊಂಡಿದ್ದು, ಶಾರಿಕ್ ತಂಗಿದ್ದ ಹೋಟೆಲ್ ಪರಿಶೀಲನೆ ನಡೆಸಿದ್ದು, ಕೆಲ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ.

Mangaluru, blast, accused, influenced, global, terror,

Articles You Might Like

Share This Article