ಮಂಗಳೂರು ಆಟೋ ಸ್ಫೋಟ : ಶಕಿತನನ್ನು ವಶಕ್ಕೆ ಪಡೆದ ಪೊಲೀಸ್

Social Share

ಬೆಂಗಳೂರು,ನ.20- ಮಂಗಳೂರಿನ ಗರೋಡಿ ಬಳಿ ನಡೆದಿರುವ ಆಟೋದಲ್ಲಿ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಒಬ್ಬನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸ್ಫೋಟಕವನ್ನು ಬ್ಯಾಗ್‍ನಲ್ಲಿಟ್ಟುಕೊಂಡು ಮಂಗಳೂರಿನ ಜನನಿಬಿಡ ಪ್ರದೇಶವೊಂದರಲ್ಲಿ ಅದನ್ನು ಸ್ಪೋಟಿಸಲು ಸಂಚು ರೂಪಿಸಲಾಗಿತ್ತು. ಆದರೆ ಮಾರ್ಗಮಧ್ಯೆಯೇ ಅದು ಆಟೋದಲ್ಲಿ ಸ್ಫೋಟಗೊಂಡಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಅದೃಷ್ಟವಶಾತ್ ಯಾವುದೇ ದುರಂತ ನಡೆದಿಲ್ಲವಾದರೂ ಕರಾವಳಿಯಲ್ಲಿ ಮತ್ತೆ ಉಗ್ರರ ಕರಿನೆರಳು ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಈಗಾಗಲೇ ಆಟೋದಲ್ಲಿ ಪ್ರಯತ್ನಿಸುತ್ತಿದ್ದವನನ್ನು ಪ್ರೇಮ್‍ಕುಮಾರ್ ಕನೋಗಿ ಎಂದು ಗುರುತಿಸಲಾಗಿದೆ. ಆತನ ಬಳಿಯಿದ್ದ ಹಲವು ದಾಖಲೆಗಳು ಕೂಡ ನಕಲಿ ಎಂದು ಪರಿಶೀಲನೆಯಿಂದ ಗೊತ್ತಾಗಿದೆ.

ಮಂಗಳೂರು ಆಟೋ ಸ್ಪೋಟಕ್ಕೆ ತುಮಕೂರು ರೈಲ್ವೆ ಸಿಬ್ಬಂದಿ ಹೆಸರು ಲಿಂಕ್..!

ಇದರ ಬಗ್ಗೆ ಉತ್ತರಪ್ರದೇಶದ ವ್ಯಕ್ತಿಯೊಬ್ಬರು ನನ್ನ ಪುತ್ರನ ಆಧಾರ್ ಹಾಗೂ ಇತರೆ ದಾಖಲೆಗಳು ಕಳವಾಗಿದೆ ಎಂದು ತಿಳಿಸಿದ್ದಾರೆ. ಇದೇ ದಾಖಲೆಗಳನ್ನು ಬಳಸಿಕೊಂಡು ಭಾವಚಿತ್ರವನ್ನು ಬದಲಿಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

ಪ್ರಸ್ತುತ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರ ಬಳಿ ವಿಚಾರಣೆ ಸಂದರ್ಭದಲ್ಲಿ ಗೊಂದಲದ ಹೇಳಿಕೆಯನ್ನು ನೀಡುತ್ತಿದ್ದಾನೆ. ಆಟೋದಲ್ಲಿ ಎಲ್ಲಿಗೆ ಹೋಗುತ್ತಿದ್ದೆ ಎಂದು ಕೇಳಿದಾಗ, ನೀಡಿದ ವಿಳಾಸದಲ್ಲಿ ಆ ಹೆಸರಿನವರು ಯಾರೂ ಇಲ್ಲದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಮೋದಿ ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿ ಇಲ್ಲ : ಭಾಗವತ್

ಹಿಂದಿ ಭಾಷೆಯಲ್ಲಿ ಮಾತನಾಡುವ ಈತ ಉತ್ತರ ಭಾರತದವನಾಗಿರಬಹುದು ಎಂದು ಶಂಕಿಸಲಾಗಿದೆ. ರಸ್ತೆಯಲ್ಲಿ ಚಲಿಸುವಾಗ ಆಟೋ ಕುಲುಕಿದಾಗ ಬ್ಯಾಗ್‍ನಲ್ಲಿದ್ದ ಸ್ಫೋಟಕ ವೈಯರ್‍ಗಳು ಪರಸ್ಪರ ಸಂಪರ್ಕಕ್ಕೆ ಬಂದು ಸ್ಫೋಟಗೊಂಡಿದೆ. ನಂತರ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿದೆ.

ಇದರಿಂದಾಗಿ ಆಟೋ ಚಾಲಕ ಹಾಗೂ ಪ್ರಯಾಣಿಕ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈಗಾಗಲೇ ಮಂಗಳೂರು ಪೊಲೀಸರು ಕೇಂದ್ರ ಗುಪ್ತಚರ ಹಾಗೂ ಎನ್‍ಐಎ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಪ್ರಕರಣವನ್ನು ಬೇಸಲು ಮುಂದಾಗಿದ್ದಾರೆ.

ಖಾಸಗಿ ಬಸ್ ಪಲ್ಟಿ : 40 ಮಂದಿಗೆ ಗಾಯ, 6 ಮಂದಿ ಸ್ಥಿತಿ ಗಂಭೀರ

ಸ್ಫೋಟಗೊಂಡ ನಂತರ ಆಟೋವನ್ನು ಪರಿಶೀಲಿಸಿದಾಗ ಅದರಲ್ಲಿ ಬೋಲ್ಟ್ ನೆಟ್‍ಗಳು, ವೈಯರ್‍ಗಳು ಮತ್ತು ವಿದ್ಯುನ್ಮಾನ ಉಪಕರಣಗಳು ಪತ್ತೆಯಾಗಿವೆ. ಇವುಗಳನ್ನು ಪರಿಶೀಲನೆಗಾಗಿ ವಿವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದಾರೆ.

Articles You Might Like

Share This Article