ಕುಕ್ಕರ್ ಕಿರಾತಕ ಶಾರಿಕ್ ಬೆಂಗಳೂರಿಗೆ

Social Share

ಬೆಂಗಳೂರು,ಡಿ.9- ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ರೂವಾರಿ ಶಾರೀಕ್‍ನನ್ನು ಶೀಘ್ರ ಬೆಂಗಳೂರಿಗೆ ಕರೆ ತರುವ ಸಾಧ್ಯತೆಗಳಿವೆ. ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ವರ್ಗಾ ಯಿಸಿರುವ ಹಿನ್ನಲೆಯಲ್ಲಿ ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‍ನನ್ನು ಶೀಘ್ರ ಬೆಂಗಳೂರಿಗೆ ಕರೆತರಲು ಎನ್‍ಐಎ ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.

ಸ್ಪೋಟದಲ್ಲಿ ಶಾರೀಕ್‍ನ ಚರ್ಮ ಬಹುತೇಕ ಸುಟ್ಟಿ ಹೋಗಿರುವುದರಿಂದ ಆತನ ಆರೋಗ್ಯ ಸರಿಪಡಿಸಲು ವೈದ್ಯರು ಇನ್ನಿಲ್ಲದ ಹರಸಾಹಸ ನಡೆಸುತ್ತಿದ್ದಾರೆ. ಶಾರೀಕ್‍ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಾರದ ಹಿನ್ನಲೆಯಲ್ಲಿ ವೈದ್ಯರು ಆತನಿಗೆ ಪ್ರೋಟಿನ್ ಪೌಡರ್ ಕುಡಿಸುತ್ತಿದ್ದು, ಆತನ ಆರೋಗ್ಯ ಚೇತರಿಕೆಯತ್ತ ಗಮನ ಹರಿಸಿದ್ದಾರೆ.

ಶ್ರದ್ಧಾ ಕೊಲೆ ಆರೋಪಿ ಅಫ್ತಾಬ್ ನ್ಯಾಯಾಲಯದ ಮುಂದೆ ಹಾಜರ್

ವೈದ್ಯರ ಸತತ ಪರಿಶ್ರಮದಿಂದಾಗಿ ಶಾರೀಕ್‍ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಆತನ ಸಂಪೂರ್ಣ ಗುಣಮುಖರಾಗುವ ಲಕ್ಷಣಗಳು ಕಂಡು ಬಂದಿರುವುದರಿಂದ ಆತನನ್ನು ಶೀಘ್ರ ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸಲಾಗುವುದು ಎಂದು ಎನ್‍ಐಎ ಮೂಲಗಳು ತಿಳಿಸಿವೆ.

ಹಿಮಾಚಲ ಗೆದ್ದ ಕಾಂಗ್ರೆಸ್ : ಸಿಎಂ ಆಯ್ಕೆ ಗೊಂದಲದ ನಡುವೆ ಆಪರೇಷನ್ ಭಯ

Mangaluru, Cooker bomb, blast, Shariq, Bangalore,

Articles You Might Like

Share This Article