ಮಂಗೋಲ್‍ಪುರಿ ಕೊಲೆ ಪ್ರಕರಣ ಕ್ರೈಂ ಬ್ರಾಂಚ್‍ಗೆ ವರ್ಗಾವಣೆ

ನವದೆಹಲಿ, ಫೆ.13 (ಪಿಟಿಐ)- ದೆಹಲಿ ಹೊರವಲಯದ ಮಂಗೋಲ್‍ಪುರಿ ಪ್ರದೇಶದಲ್ಲಿ ಇತ್ತೀಚೆಗೆ ಗುಂಪೊಂದು 25 ವರ್ಷದ ಯುವಕನನ್ನು ಅಮಾನುಷವಾಗಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಪಟ್ಟ ಐದನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಕೇಸನ್ನು ಶನಿವಾರ ಅಪರಾಧ ವಿಭಾಗಕ್ಕೆ ವರ್ಗಾಯಿಸಿದ್ದಾಗಿ ತಿಳಿದುಬಂದಿದೆ.

ಕಳೆದ ಬುಧವಾರ ರಾತ್ರಿ ಘಟನೆ ನಡೆದಿದ್ದು, ಮೃತ ರಿಂಕು ಶರ್ಮ ಮತ್ತು ಕೊಲೆ ಆರೋಪಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ತಾವು ರೋಹಿಣಿ ಪ್ರದೇಶದಲ್ಲಿರುವ ನಡೆಸುವ ತಮ್ಮ ಫುಡ್ ಜಾಯಿಂಟ್ಸ್ ಬಗ್ಗೆ ಪ್ರಸ್ತಾಪ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳವುಂಟಾಗಿ ಕೈಕೈ ಮಿಲಾಯಿಸಿದ್ದಾರೆ. ಈ ಹಿಂದೆಯೂ ಇದೇ ವಿಷಯಕ್ಕೆ ಇವರಿಬ್ಬರಲ್ಲಿ ಜಗಳ ಉಂಟಾಗಿತ್ತು.

ನಂತರ ನಾಲ್ಕು ಮಂದಿ ಶರ್ಮ ಮನೆಗೆ ತೆರಳಿ, ಸಂತ್ರಸ್ತ ಮತ್ತು ಆತನ ಸಹೋದರ ದಾಳಿ ಮಾಡಿದ್ದಾರೆ. ಹೊಡೆದಾಟದಲ್ಲಿ ಆರೋಪಿ ಶರ್ಮನ ಹೊಟ್ಟೆಗೆ ಚಾಕುವಿನಿಂದ ತಿವಿದು ಪರಾರಿಯಾಗಿದ್ದಾನೆ. ಸ್ಥಳದಲ್ಲೇ ಶರ್ಮ ಮೃತಪಟ್ಟಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಕೊಲೆಯಾದ ರಿಂಕು ಶರ್ಮ, ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಾ ಫುಡ್ ಜಾಯಿಂಟ್ ನಡೆಸುತ್ತಿದ್ದ. ಕೊಲೆ ಘಟನೆ ನಂತರ ಯಾವುದೇ ಅಹಿತಕರ ಪ್ರಕರಣಗಳು ನಡೆಯದಂತೆ ಈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಹಾಗೂ ಹೆಚ್ಚಿನ ತನಿಖೆಗಾಗಿ ಕೇಸನ್ನು ಕ್ರೈಂ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ದೆಹಲಿ ಪೊಲೀಸ್ ಹೆಚ್ಚುವರಿ ಪಿಆರ್‍ಒ ಅನಿಲ್ ಮಿಟ್ಟಲ್ ತಿಳಿಸಿದ್ದಾರೆ.

ಶರ್ಮ ಸಹೋದರ ಮನ್ನು (19) ಪೊಲೀಸ್ ಹೇಳಿಕೆಯಲ್ಲಿ ಸಂತ್ರಸ್ತ ರಿಂಕು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಹಣ ಸಂಗ್ರಹ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಕಾರಣ ಕೊಲೆಯಾಗಿದ್ದಾನೆ ಎಂದಿದ್ದಾನೆ. ಪೊಲೀಸರು ಇದನ್ನು ಅಲ್ಲಗೆಳೆದಿದ್ದು, ಹುಟ್ಟುಹಬ್ಬ ಸಂದರ್ಭದಲ್ಲಿ ಇಬ್ಬರ ನಡುವಿನ ವ್ಯಾಪಾರ ಪೈಪೋಟಿ ಮಾತುಗಳಿಂದ ಉಂಟಾದ ಜಗಳ ಹಿನ್ನೆಲೆಯಲ್ಲಿ ಕೊಲೆಯಾಗಿರಬಹುದು ಎಂದು ಸಂದೇಹ ವ್ಯಕ್ತಪಡಿಸಿದ್ದರು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೆ, ತಜುದ್ದೀನ್, ಜಾಹಿದ್, ಮೆಹ್ತಾಬ್, ಡ್ಯಾನಿಷ್ ಹಾಗೂ ಇಸ್ಲಾಂ ಎಂಬುನನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.