ನಿರ್ದೇಶಕ ಮಣಿರತ್ನಂ, ನಟ ವಿಕ್ರಂಗೆ ಕೋರ್ಟ್ ನೋಟಿಸ್

Social Share

ಚೆನ್ನೈ, ಜು. 18- ಐತಿಹಾಸಿಕ ಸಿನಿಮಾ ಗಳನ್ನು ನಿರ್ಮಿಸುವಾಗ ವಿವಾದಗಳು ಮೂಡುವುದು ಸಾಮಾನ್ಯ, ಈಗ ಅಂತಹದ್ದೇ ವಿವಾದಕ್ಕೆ ಸಿಲುಕಿರುವ ಸಿನಿಮಾ ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಸಿನಿಮಾ.

ಚೋಳರ ಉಗಮ ಹಾಗೂ ವೈಭವದ ಬಗ್ಗೆ ಚಿತ್ರಿತಗೊಂಡಿರುವ ಈ ಸಿನಿಮಾದಲ್ಲಿ ಚೋಳರನ್ನು ಇತಿಹಾಸಕ್ಕೆ ವಿರುದ್ಧವಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ನಿರ್ದೇಶಕ ಮಣಿರತ್ನಂ ಹಾಗೂ ನಟ ಚಿಯಾನ್ ವಿಕ್ರಂಗೆ ಕೋರ್ಟ್ ನೋಟಿಸ್ ನೀಡಲಾಗಿದೆ.

ಈ ವಿವಾದಕ್ಕೆ ಕಾರಣ ಇತ್ತೀಚೆಗೆ ಬಿಡುಗಡೆಗೊಂಡ ಪೊನ್ನಿಯನ್ ಸೆಲ್ವನ್ ಸಿನಿಮಾದ ಟೀಸರ್. ಸಾಮಾಜಿಕ ಜಾಲತಾಣ ಗಳಲ್ಲಿ ಈ ಟೀಸರ್‍ಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆಯಾದರೂ ಪೋಸ್ಟರ್‍ನಲ್ಲಿ ಚಿಯಾನ್ ವಿಕ್ರಮ್ ಅವರ ಹಣೆಗೆ ಇಟ್ಟಿದ್ದ ತಿಲಕ ಟೀಸರ್‍ನಲ್ಲಿ ಮಾಯವಾಗಿದೆ ಇದರಿಂದ ಚೋಳ ರಾಜರಿಗೆ ಅವಮಾನ ಮಾಡಲಾಗಿದೆ ಎಂದು ವಕೀಲ ಸೆಲ್ವನ್ ಕೋರ್ಟ್ ಮೆಟ್ಟಿಲೇರಿದ್ದು ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಮಣಿರತ್ನಂ ಉತ್ತರ ನೀಡಬೇಕೆಂದು ಕೋರ್ಟ್ ಆದೇಶಿಸಿದೆ.

ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಚಿಯಾನ್ ವಿಕ್ರಂ ಅದಿತ್ಯ ಕರಿಕಾಲನ್ ಎಂಬ ಪಾತ್ರದಲ್ಲಿ ನಟಿಸು ತ್ತಿದ್ದು ಪೋಸ್ಟರ್‍ನಲ್ಲಿ ಕರಿಕಾಲನ್ ಹಣೆಗೆ ತಿಲಕ ವಿಟ್ಟಿದ್ದರೆ ಟೀಸರ್‍ನಲ್ಲಿ ತಿಲಕ ಮಾಯವಾಗಿದೆ. ವಿವಾದದ ಬಗ್ಗೆ ಉತ್ತರ ನೀಡಿದರಷ್ಟೇ ಸಾಲದು, ವಿಶೇಷ ಚಿತ್ರ ಪ್ರದರ್ಶನವನ್ನು ಏರ್ಪಡಿಸಬೇಕೆಂದು ವಕೀಲ ಸೆಲ್ವನ್ ಒತ್ತಡ ಹಾಕಿದ್ದಾರೆ. ಆದರೆ ಈ ವಿವಾದದ ಬಗ್ಗೆ ನಿರ್ದೇಶಕ ಮಣಿರತ್ನಂ ಆಗಲಿ, ನಟ ಚಿಯಾನ್ ವಿಕ್ರಂ ಆಗಲಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

`ಪೊನ್ನಿಯನ್ ಸೆಲ್ವನ್’ ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿದ್ದು ಸೆಪ್ಟೆಂಬರ್ 30 ರಂದು ಚಿತ್ರವನ್ನು ವಿಶ್ವವ್ಯಾಪಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

ಪ್ಯಾನ್ ಇಂಡಿಯಾ ವಾಗಿರುವ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ವಿಶ್ವ ಸುಂದರಿ ಐಶ್ವರ್ಯರೈ, ತ್ರಿಷಾ, ಚಿಯಾನ್ ವಿಕ್ರಮ್, ಕಾರ್ತಿ, ಜಯಂರವಿ, ಶರತ್‍ಕುಮಾರ್, ಪ್ರಕಾಶ್‍ರಾಜ್, ಲಕ್ಷ್ಮಿ ಮುಂತಾದವರ ಬಹುತಾರಾಗಣವೇ ಇದ್ದು ಎ.ಆರ್.ರೆಹಮಾನ್ ಸಂಗೀತ ನಿರ್ದೇಶನವಿದೆ.

Articles You Might Like

Share This Article