ಮಣಿಪುರ ವಿಧಾನಸಭೆ ಮೊದಲ ಹಂತದ ಚುನಾವಣೆಯಲ್ಲಿ ಹಿಂಸಾಚಾರ

Social Share

ಇಂಫಾಲ, ಫೆ.28- ಮಣಿಪುರ ವಿಧಾನಸಭಾಗೆ ಸೋಮವಾರ ನಡೆದ ಮೊದಲ ಹಂತದ ಮತದಾನದಲ್ಲಿ ಹಿಂಸಾಚಾರ ನಡೆದಿದೆ.
ಮೊದಲ ಹಂತದ ಮತದಾನದಲ್ಲಿ 38 ವಿಧಾನಸಭಾ ಕ್ಷೇತ್ರಗಳಿಂದ 12.09 ಲಕ್ಷ ಮತದಾರರಿದ್ದು, ಬೆಳಗ್ಗೆ 12 ಗಂಟೆಯ ವೇಳೆಗೆ ಶೇ.35ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಬಿಗಿ ಭದ್ರತೆ ಮತ್ತು ಕೋವಿಡ್ ನಿಯಮಾವಳಿಗಳ ಕಟ್ಟುನಿಟ್ಟಾದ ಅನುಸರಣೆಯ ನಡುವೆ ಐದು ಜಿಲ್ಲೆಗಳ 1,721 ಮತಗಟ್ಟೆಗಳಲ್ಲಿ ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಾರಂಭವಾಗಿದೆ. 5 ಮಹಿಳೆಯರು ಸೇರಿದಂತೆ ಒಟ್ಟು 173 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತದಾನವು ಸಂಜೆ 4 ಗಂಟೆಗೆ ಕೊನೆಗೊಳ್ಳುತ್ತದೆ ಮತ್ತು ಕೋವಿಡ್ ಸೋಂಕಿತರು ಮಧ್ಯಾಹ್ನ 3 ರಿಂದ 4 ಗಂಟೆಗೆ ಮತ ಚಲಾಯಿಸಬಹುದು.ಗವರ್ನರ್ ಲಾ ಗಣೇಶನ್ ಮತ್ತು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಮ್ಮ ತಮ್ಮ ಕ್ಷೇತ್ರಗಳಾದ ಸಗೋಲ್‍ಬಂದ್ ಮತ್ತು ಹೀಂಗಾಂಗ್‍ನಲ್ಲಿ ಮತದಾನ ಮಾಡಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಚುನಾವಣಾ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಚುರಾಚಂದ್‍ಪುರ ಜಿಲ್ಲೆಯಲ್ಲಿ ಎರಡು ಪಕ್ಷಗಳ ನಡುವಿನ ಘರ್ಷಣೆಯಲ್ಲಿ ಕನಿಷ್ಠ ಒಬ್ಬರು ಗಾಯಗೊಂಡಿದ್ದಾರೆ. ಇವಿಎಂಗೆ ಹಾನಿಯಾಗಿದೆ. ನಂತರ ಅದನ್ನು ಬದಲಾಯಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರು ಇಂಫಾಲ್ ಪಶ್ಚಿಮ ಜಿಲ್ಲೆಯ ಲಾಂಗ್‍ತಬಾಲ್ ಕ್ಷೇತ್ರದ ಕಾಕ್ವಾ ಪ್ರದೇಶದಲ್ಲಿ ಮತಗಟ್ಟೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲವಾದರೂ, ಎನ್‍ಪಿಪಿ ಅಭ್ಯರ್ಥಿಯ ವಾಹನವನ್ನು ಪ್ರತಿಸ್ರ್ಪ ಗುಂಪಿನ ಬೆಂಬಲಿಗರು ಹಾನಿಗೊಳಿಸಿದ್ದಾರೆ.
6,884 ಮತಗಟ್ಟೆ ಸಿಬ್ಬಂದಿಯನ್ನು ಚುನಾವಣೆಗೆ ನಿಯೋಜಿಸಲಾಗಿದೆ. ವೆಬ್‍ಕಾಸ್ಟಿಂಗ್‍ಗೆ ವ್ಯವಸ್ಥೆ ಮಾಡಲಾಗಿದ್ದು, ಸೂಕ್ಷ್ಮ ಮತಗಟ್ಟೆಗಳಲ್ಲಿ ಮೈಕ್ರೋ ಅಬ್ಸರ್ವರ್‍ಗಳನ್ನು ನಿಯೋಜಿಸಲಾಗಿದೆ. ಮತದಾರರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಲು ರಾಜ್ಯ ಭದ್ರತಾ ಪಡೆಗಳೊಂದಿಗೆ ಕೇಂದ್ರ ಪಡೆಗಳು ಐದು ಜಿಲ್ಲೆಗಳಲ್ಲಿ ಗಸ್ತು ತಿರುಗುತ್ತಿವೆ.
ಮೊದಲ ಹಂತದ ಚುನಾವಣೆಯ ಕಣದಲ್ಲಿ ಮುಖ್ಯಮಂತ್ರಿ, ಅಸೆಂಬ್ಲಿ ಸ್ಪೀಕರ್ ವೈ ಖೇಮಚಂದ್ ಸಿಂಗ್, ಉಪಮುಖ್ಯಮಂತ್ರಿ ಮತ್ತು ಎನ್‍ಪಿಪಿ ಅಭ್ಯರ್ಥಿ ಯುಮ್ನಮ್ ಜಾಯ್‍ಕುಮಾರ್ ಮತ್ತು ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಎನ್ ಲೋಕೇಶ್ ಸಿಂಗ್ ಕಣದಲ್ಲಿದ್ದಾರೆ.
38 ಸ್ಥಾನಗಳಲ್ಲಿ, 10 ಕ್ಷೇತ್ರಗಳು ಇಂಫಾಲ್ ಪೂರ್ವದಲ್ಲಿ, 13 ಇಂಫಾಲ್ ಪಶ್ಚಿಮದಲ್ಲಿ, ತಲಾ ಆರು ಬಿಷ್ಣುಪುರ್ ಮತ್ತು ಚುರಾಚಂದ್‍ಪುರದಲ್ಲಿ ಮತ್ತು ಮೂರು ಕಾಂಗ್‍ಪೋಕ್ಪಿ ಜಿಲ್ಲೆಯಲ್ಲಿವೆ. ಒಂಬತ್ತು ಸ್ಥಾನಗಳನ್ನು ಪರಿಶಿಷ್ಟ ಪಂಗಡಕ್ಕೆ ಮತ್ತು ಒಂದು ಸ್ಥಾನವನ್ನು ಪರಿಶಿಷ್ಟ ಜಜಾತಿಗೆ ಮೀಸಲಿಡಲಾಗಿದೆ.
ಬಿಜೆಪಿ ಎಲ್ಲಾ 38 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಕಾಂಗ್ರೆಸ್ 35, ಎನ್‍ಪಿಪಿ 27, ಜೆಡಿ (ಯು) 28, ಶಿವಸೇನೆ 7, ಆರ್‍ಪಿಐ (ಅಠವಳೆ) ಆರು, ಎಲ್‍ಜೆಪಿ (ರಾಮ್ ವಿಲಾಸ್) ಮೂರು, ಮತ್ತು ಕುಕಿ ನ್ಯಾಶನಲ್ ಅಸೆಂಬ್ಲಿ ಮತ್ತು ಕುಕಿ ಪೀಪಲ್ಸ್ ಅಲೈಯನ್ಸ್ ತಲಾ ಎರಡು. ಹದಿನೆಂಟು ಮಂದಿ ಸ್ವತಂತ್ರರೂ ಕಣದಲ್ಲಿದ್ದಾರೆ.
ಒಟ್ಟು 173 ಅಭ್ಯರ್ಥಿಗಳ ಪೈಕಿ 39 ಮಂದಿ ಅಪರಾಧ ಹಿನ್ನೆಲೆ ಹೊಂದಿದ್ದಾರೆ ಎಂದು ಮುಖ್ಯ ಚುನಾವಣಾಕಾರಿ ರಾಜೇಶ್ ಅಗರ್ವಾಲ್ ಹೇಳಿದ್ದಾರೆ.ವಿಧಾನಸಭಾ ಚುನಾವಣೆಗೆ ಕೆಲವೇ ಗಂಟೆಗಳ ಮೊದಲು, ವಾಂಗೋಯ್ ಕ್ಷೇತ್ರದ ತನ್ನ ಅಭ್ಯರ್ಥಿ ಸಲಾಂ ಜಾಯ್ ಸಿಂಗ್ ಅವರನ್ನು ಶಿಸ್ತಿನ ಆಧಾರದ ಮೇಲೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಕಾಂಗ್ರೆಸ್ ಭಾನುವಾರ ರಾತ್ರಿ ಉಚ್ಚಾಟಿಸಿದೆ.
ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‍ಪಿಪಿ), ನಾಗಾ ಪೀಪಲ್ಸ್ ಫ್ರಂಟ್ (ಎನ್‍ಪಿಎಫ್) ಮತ್ತು ಲೋಕ ಜನಶಕ್ತಿ ಪಕ್ಷ (ಎಲ್‍ಜೆಪಿ) ಬೆಂಬಲದೊಂದಿಗೆ ಬಿಜೆಪಿ 2017 ರಲ್ಲಿ ಮಣಿಪುರದಲ್ಲಿ ಸರ್ಕಾರ ರಚಿಸಿತ್ತು. ಈ ಬಾರಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ. ಕಾಂಗ್ರೆಸ್ ಸಿಪಿಐ, ಸಿಪಿಐ(ಎಂ), ಫಾರ್ವರ್ಡ್ ಬ್ಲಾಕ್, ಆರ್‍ಎಸ್‍ಪಿ ಮತ್ತು ಜನತಾ ದಳ (ಜÁತ್ಯತೀತ) ಜೊತೆ ಮೈತ್ರಿ ಮಾಡಿಕೊಂಡಿದೆ.

Articles You Might Like

Share This Article