ಹೆಚ್ಚಿದ ಕೊರೋನಾ, ಜುಲೈ 24 ರವರೆಗೆ ಶಾಲೆಗಳು ಬಂದ್

Social Share

ಇಂಫಾಲ, ಜು.13 – ಕೊರೊನಾ ಸೋಂಕು ಉಲ್ಬಣವಾಗುತ್ತಿರುವುದರಿಂದ ಮಣಿಪುರ ಸರ್ಕಾರವು ಮುಂದಿನ ವಾರದವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಲು ಆದೇಶಿಸಿದೆ.

ಶಾಲಾ ಶಿಕ್ಷಣ ಆಯುಕ್ತ ಎಚ್.ಜ್ಞಾನ್ ಪ್ರಕಾಶ ಅವರು ಸರ್ಕಾರಿ ಅಧಿಕೃತ ಆದೇಶದಲ್ಲಿ, ರಾಜ್ಯದಲ್ಲಿ ಕರೋನ ಹೆಚ್ಚಾಗುತ್ತಿದೆ ಸರ್ಕಾರಿ, ರಾಜ್ಯ ಅನುದಾನಿತ, ಇತರ ಮಂಡಳಿಗಳಿಗೆ ಸಂಯೋಜಿತವಾಗಿರುವ ಖಾಸಗಿ ಶಾಲೆಗಳು ಸಾರ್ವಜನಿಕ ಹಿತಾಸಕ್ತಿಯಿಂದ ಜುಲೈ 24 ರವರೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಚ್ಚುವಂತೆ ತಿಳಿಸಿದ್ದಾರೆ.

ಬೇಸಿಗೆ ರಜೆಯ ನಂತರ ಅನೇಕ ಶಾಲೆಗಳು ಜುಲೈ 16 ರಂದು ಮತ್ತೆ ತೆರೆಯಲು ನಿರ್ಧರಿಸಿತ್ತು ಮಣಿಪುರದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಪರಿಣಾಮಕಾರಿ ಲಸಿಕೆ ಇಲ್ಲದಿರುವುದರಿಂದ ಅವರ ಆರೋಗ್ಯದ ಸುರಕ್ಷತೆಯ ಬಗ್ಗೆ ಸರ್ಕಾರ ಚರ್ಚಿಸಲಿದೆ ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಈ ಹಿಂದೆ ಹೇಳಿದ್ದರು.

Articles You Might Like

Share This Article