ಸಿಸೋಡಿಯಾಗೆ ಮುಳುವಾದ ಡಿಜಿಟಲ್ ಸಾಧನ

Social Share

ನವದೆಹಲಿ,ಫೆ.27- ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಲು ಕಾರಣವಾದದ್ದೇ ಅಬಕಾರಿ ಇಲಾಖೆಯಿಂದ ವಶಪಡಿಸಿಕೊಂಡ ಡಿಜಿಟಲ್ ಸಾಧನ ಎನ್ನುವುದು ಇದೀಗ ಬಹಿರಂಗಗೊಂಡಿದೆ.

ಈಗ ರದ್ದುಗೊಂಡಿರುವ ದೆಹಲಿ ಮದ್ಯ ಮಾರಾಟ ನೀತಿ ಜಾರಿಗೆ ತರುವಲ್ಲಿ ಸಿಸೋಡಿಯಾ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪದ ಮೇಲೆ ವಿಚಾರಣೆ ನಡೆಸಿದ ಸಿಬಿಐ ಕೊನೆಗೆ ಅವರನ್ನು ಬಂಧಿಸಿದೆ.

ಕಳೆದ ಆಗಸ್ಟ್ 19 ರಂದು ಅಬಕಾರಿ ಇಲಾಖೆಯಲ್ಲಿ ನಡೆಸಿದ ಶೋಧದ ಸಮಯದಲ್ಲಿ ಡಿಜಿಟಲ್ ಸಾಧನವನ್ನು ವಶಪಡಿಸಿಕೊಳ್ಳಲಾಗಿದೆ. ಅದನ್ನು ಪರಿಶೀಲಿಸುವಾಗ, ಸಂಸ್ಥೆಯು ಅಬಕಾರಿ ನೀತಿಯ ಕರಡು ದಾಖಲೆಗಳಲ್ಲಿ ಗೋಲ್‍ಮಾಲ್ ನಡೆಸಿರುವುದಕ್ಕೆ ದಾಖಲೆ ಸಿಕ್ಕಿದೆ ಎಂದು ಸಿಬಿಐ ಮೂಲಗಳು ಉಲ್ಲೇಖಿಸಿವೆ.

ಸುಟ್ಟು ಕರಕಲಾದವರು ಗೋ ಭಕ್ಷಕರು ಎಂದು ದೃಡ

ಗೋಲ್‍ಮಾಲ್ ಸಂಬಂಧ ಅಬಕಾರಿ ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದಾಗ ಸಿಸೋಡಿಯಾ ಅವರ ಕಚೇರಿಯಲ್ಲಿ ಕಂಪ್ಯೂಟರ್‍ಗೆ ಲೀಡ್ ಸಿಕ್ಕಿತು ಎಂದು ಮೂಲಗಳು ತಿಳಿಸಿದ್ದು, ಜನವರಿ 14 ರಂದು ಉಪಮುಖ್ಯಮಂತ್ರಿ ಕಚೇರಿಯಿಂದ ಸಿಸ್ಟಮ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಸ್ಟಂನಲ್ಲಿನ ಬಹುತೇಕ ಕಡತಗಳನ್ನು ಅಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ, ಆದರೆ ಅವರು ಸಿಬಿಐನ ಫೋರೆನ್ಸಿಕ್ ತಂಡದ ಸಹಾಯದಿಂದ ದಾಖಲೆಗಳನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಫೋರೆನ್ಸಿಕ್ ಪರೀಕ್ಷೆಯಲ್ಲಿ, ಸ್ಕ್ಯಾನರ್ ಅಡಿಯಲ್ಲಿರುವ ದಾಖಲೆಯು ಬಾಹ್ಯವಾಗಿ ಹುಟ್ಟಿಕೊಂಡಿದೆ ಮತ್ತು ವಾಟ್ಸಾಪ್ ಮೂಲಕ ಸ್ವೀಕರಿಸಲ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಸಿಸೋಡಿಯಾ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನೀಡಿದ ದೆಹಲಿ ಮದ್ಯ ನೀತಿಯ ಕರಡು ಪ್ರತಿಯಿಂದಲೇ ಶೇ.12 ಲಾಭಾಂಶದ ಷರತ್ತು ಹುಟ್ಟಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಕಮಿಷನ್ ನಿಗದಿಪಡಿಸಿರುವುದಕ್ಕೆ ಯಾವುದೆ ದಾಖಲೆಗಳು ಸಿಕ್ಕಿಲ್ಲ.

ಮತ್ತೆ ಪರಮಾಣು ಬೆದರಿಕೆ ಹಾಕಿದ ರಷ್ಯಾ ಅಧ್ಯಕ್ಷ ಪುಟಿನ್

ವಿಚಾರಣೆ ಸಮಯದಲ್ಲಿ ಸಿಸೋಡಿಯಾ ಅವರು ಕರಡು ದಾಖಲೆ ಬಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ ಕಾರಣ ಅವರನ್ನು ಬಂಧಿಸಲಾಗಿದೆ. ಈ ಮಧ್ಯೆ, ಸಿಸೋಡಿಯಾ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷ ಇಂದು ದೇಶದಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

ದೆಹಲಿಯಲ್ಲಿರುವ ಸಿಬಿಐ ಕಚೇರಿ ಮುಂದೆ ಜಮಾಯಿಸಿರುವ ಆಪ್ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಸಿಬಿಐ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

Manish Sisodia, arrest, Delhi, liquor policy, case,

Articles You Might Like

Share This Article