ನವದೆಹಲಿ,ಜ.21- ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ವಿ.ಕೆ.ಸಕ್ಸೇನಾ ಶಿಕ್ಷಣ ಇಲಾಖೆಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಿಡಿಕಾರಿದ್ದಾರೆ.
ಸಕ್ಸೆನಾ ಅವರ ಹೇಳಿಕೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ಅವರ ಸುಳ್ಳು ಆರೋಪಗಳು ದೆಹಲಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅವಮಾನ ಮಾಡಿವೆ ಎಂದು ಸಿಸೋಡಿಯಾ ಬರೆದಿರುವ ಪತ್ರದಲ್ಲಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಶಿಕ್ಷಣ ಇಲಾಖೆಯಲ್ಲಿ ಯಾವುದೇ ಕೆಲಸ ನಡೆದಿಲ್ಲ ಎಂದು ಅವರು ಹೇಳಿದ್ದಾರೆ. ನಮ್ಮ ಕೆಲಸವನ್ನು ಅಣಕಿಸಬೇಡಿ ಎಂದು ನಾನು ಲೆಫ್ಟಿನೇಂಟ್ರಿಗೆ ಮಾಡುತ್ತೇನೆ. ಶಿಕ್ಷಣ ಇಲಾಖೆಯಲ್ಲಿ ಕಳೆದ ಏಳು ವರ್ಷಗಳಿಂದ ಶಿಕ್ಷಕರು ಅದ್ಭುತಗಳನ್ನು ಮಾಡಿದ್ದಾರೆ. ಟೆಂಟ್ ವೇಲ್ ಶಾಲೆಗಳನ್ನು ಟ್ಯಾಲೆಂಟ್ ವೇಲ್ಗಳನ್ನಾಗಿ ಪರಿವರ್ತಿಸಿದ್ದಾರೆ. ಶಿಕ್ಷಣ ವ್ಯವಸ್ಥೆಯನ್ನು ಅವಮಾನಿಸುವ ಬದಲು, ಬೆಂಬಲ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ ಮಾಡಿದ ಪೊಲೀಸ್ ಅಧಿಕಾರಿಗಳ ತಲೆದಂಡ
ಸರಕಾರಿ ಶಾಲೆಗಳಲ್ಲಿ ಪ್ರತಿ ವರ್ಷ ಸರಾಸರಿ ಹಾಜರಾತಿ ಕಡಿಮೆಯಾಗುತ್ತಿದ್ದು, 2012-2013ರಲ್ಲಿ ಶೇ.70.73ರಷ್ಟಿದ್ದ ಹಾಜರಾತಿ, 2019-2020ರಲ್ಲಿ ಶೇ.60.65ಕ್ಕೆ ಕುಸಿದಿದೆ ಎಂದು ಸಕ್ಸೆನಾ ದೂರಿದ್ದರು. ಈ ಅಂಕಿಅಂಶಗಳು ತಪ್ಪಾಗಿವೆ, ಲೆಫ್ಟಿನೇಂಟ್ ಗೌರ್ನರ್ ತಮ್ಮ ಹೇಳಿಕೆಯಿಂದ ರಾಷ್ಟ್ರ ರಾಜಧಾನಿಯ ಶಿಕ್ಷಣ ವ್ಯವಸ್ಥೆಯ ಮಾನಹಾನಿ ಮಾಡಿದ್ದಾರೆ.
ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 16 ಲಕ್ಷದಿಂದ 15 ಲಕ್ಷಕ್ಕೆ ಇಳಿದಿದೆ ಎಂದು ಎಲ್ಜಿ ಆರೋಪಿಸಿದ್ದಾರೆ. ವಾಸ್ತವವಾಗಿ ವಿದ್ಯಾರ್ಥಿಗಳ ಸಂಖ್ಯೆ 18 ಲಕ್ಷಕ್ಕೆ ಏರಿದೆ ಎಂದು ಸಿಸೋಡಿಯಾ ಪ್ರತಿಕ್ರಿಯಿಸಿದ್ದಾರೆ.
Manish Sisodia, Delhi, Governor, teachers,