ಜೈಲಿನಲ್ಲಿ ಒಂದು ದಿನ ಕಳೆದ ಸಿಸೋಡಿಯಾ

Social Share

ನವದೆಹಲಿ,ಮಾ.7-ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ತಿಹಾರ್ ಜೈಲಿನಲ್ಲಿ ಒಂದು ದಿನ ಕಳೆದಿದ್ದಾರೆ. ಸಿಸೋಡಿಯಾ ಅವರನ್ನು ಹಿರಿಯ ನಾಗರೀಕರ ಸೆಲ್‍ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದ್ದು ಅವರಿರುವ ಸೆಲ್‍ಗೆ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ಸಿಸೋಡಿಯಾ ಅವರನ್ನು ತಿಹಾರ್ ಜೈಲು ಸಂಖ್ಯೆ 1 ರ ಸಿಸಿಟಿವಿಗಳನ್ನು ಅಳವಡಿಸಲಾಗಿರುವ ವಾರ್ಡ್ ಸಂಖ್ಯೆ 9 ರಲ್ಲಿ ಇರಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ, ಸಿಸೋಡಿಯಾ ಅವರಿರುವ ಅದೇ ವಾರ್ಡ್‍ನಲ್ಲಿ ನೆರೆಹೊರೆಯ ಸೆಲ್‍ಗಳಲ್ಲಿ ಕೆಲವು ಭಯಾನಕ ಅಪರಾಧಿಗಳಿರುವುದು ಇಲ್ಲಿ ಉಲ್ಲೇಖಾರ್ಹವಾಗಿದೆ.

ತಲೆಮರೆಸಿಕೊಂಡ ಶಾಸಕ ಮಾಡಾಳ್ ಬಂಧನಕ್ಕೆ ಲೋಕಾಯುಕ್ತ ವ್ಯಾಪಕ ಶೋಧ

ಎಎಪಿ ನಾಯಕರನ್ನು ನಿನ್ನೆ ಮಧ್ಯಾಹ್ನ ತಿಹಾರ್ ಜೈಲಿಗೆ ಕರೆದೊಯ್ಯಲಾಯಿತು, ನಂತರ ಅವರು ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಲಾಯಿತು ಅವರ ಆರೋಗ್ಯದಲ್ಲಿ ಯಾವುದೇ ಏರುಪೇರು ಕಂಡ ಬಾರದ ಹಿನ್ನಲೆಯಲ್ಲಿ ಅವರನ್ನು ಜೈಲಿಗೆ ಸ್ಥಳಾಂತರಿಸಲಾಗಿದೆ.

ಅವರಿಗೆ ಟೂತ್‍ಪೇಸ್ಟ್, ಸಾಬೂನು, ಟೂತ್ ಬ್ರಷ್ ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳನ್ನು ಒಳಗೊಂಡಿರುವ ‘ಸ್ಪರ್ಶ್ ಕಿಟ್ ಅನ್ನು ಒದಗಿಸಲಾಗಿದೆ. ದೆಹಲಿಯ ಮಾಜಿ ಸಚಿವರ ಜೈಲಿನಲ್ಲಿ ಮೊದಲ ರಾತ್ರಿಯ ಬಗ್ಗೆ ಮಾತನಾಡಿದ ಅಧಿಕಾರಿ, ಭೋಜನದ ಸಮಯದಲ್ಲಿ, ವೇಳಾಪಟ್ಟಿಯ ಪ್ರಕಾರ, ಸಂಜೆ 6-7.30 ರ ಸುಮಾರಿಗೆ, ಸಿಸೋಡಿಯಾಗೆ ಚಪಾತಿ, ಅನ್ನ ಮತ್ತು ಆಲೂ ಮಟರ್ ನೀಡಲಾಯಿತು ಎಂದು ಹೇಳಿದರು.

ಟಿಪ್ಪು ಮೈಸೂರು ಹುಲಿ ಅಲ್ಲ, ಸಂಚುಕೋರ, ಮೋಸಗಾರ : ಸಿ.ಟಿ.ರವಿ

ಜೈಲು ಕೈಪಿಡಿಯ ಪ್ರಕಾರ, ವಿಚಾರಣಾ ಕೈದಿಯಾಗಿರುವ ಸಿಸೋಡಿಯಾ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ವೈಯಕ್ತಿಕ ಬಟ್ಟೆಗಳನ್ನು ಧರಿಸಬಹುದು ಎಂದು ಅಧಿಕಾರಿಗಳು ತಿಳಿಸಿದರು. ಮೊದಲ ರಾತ್ರಿ, ಅವರಿಗೆ ಜೈಲಿನಿಂದ ಹೆಚ್ಚುವರಿ ಬಟ್ಟೆಗಳನ್ನು ಒದಗಿಸಲಾಯಿತು.

ಏತನ್ಮಧ್ಯೆ, ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ಅವರನ್ನು ತಿಹಾರ್ ಜೈಲಿನಲ್ಲಿ ಪ್ರಶ್ನಿಸಲಿದೆ ಎಂದು ಮೂಲಗಳು ತಿಳಿಸಿವೆ.

Manish Sisodia, Tihar, jail,

Articles You Might Like

Share This Article