ಸುಪ್ರೀಂ ಕೋರ್ಟ್ ಕದ ತಟ್ಟಿದ ಸಿಸೋಡಿಯಾ

Social Share

ನವದೆಹಲಿ,ಫೆ.28- ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ತಮ್ಮನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ದೆಹಲಿ ನ್ಯಾಯಾಲಯ ಸಿಸೋಡಿಯಾ ಅವರನ್ನು ಐದು ದಿನಗಳ ಕಾಲ ಸಿಬಿಐ ಕಸ್ಟಡಿಗೆ ವಹಿಸಿರುವ ನಂತರ ಸಿಸೋಡಿಯಾ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿರುವುದರ ಬಗ್ಗೆ ವಿಚಾರಣೆ ನಡೆಸಲು ಹೆಚ್ಚಿನ ಕಾಲವಕಾಶ ಬೇಕಾಗುತ್ತದೆ ಎಂದು ಸಿಬಿಐ ದೆಹಲಿ ನ್ಯಾಯಾಲಯಕ್ಕೆ ಮಾಡಿಕೊಂಡ ಮನವಿಯನ್ನು ಪರಿಗಣಿಸಿ ಸಿಸೋಡಿಯಾ ಅವರಿಗೆ ಜಾಮೀನು ನೀಡಲು ನಿರಾಕರಿಸಲಾಗಿತ್ತು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ತಮ್ಮ ವಿಚಾರವನ್ನು ತುರ್ತು ವಿಚಾರಣೆ ನಡೆಸುವಂತೆ ಸಿಸೋಡಿಯಾ ಅವರು ಮನವಿ ಮಾಡಿಕೊಂಡಿದ್ದಾರೆ.

19 ಲಕ್ಷ ರೈತ ಕುಟುಂಬಗಳಿಗೆ 13ನೇ ಕಂತನ ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ

30 ಕೋಟಿ ರೂ. ಕಿಕ್‍ಬ್ಯಾಕ್‍ಗೆ ಬದಲಾಗಿ ಮದ್ಯದ ಲಾಬಿಯ ಒತ್ತಾಯದ ಮೇರೆಗೆ ಮಧ್ಯವರ್ತಿಗಳು, ವ್ಯಾಪಾರಿಗಳು ಮತ್ತು ಅಧಿಕಾರಶಾಹಿಗಳನ್ನು ಬಳಸಿಕೊಂಡು ಮದ್ಯದ ನೀತಿಯನ್ನು ತಮ್ಮ ಪರವಾಗಿ ತಿರುಗಿಸುವಲ್ಲಿ ಉದ್ಯಮಿಗಳು ಮತ್ತು ರಾಜಕಾರಣಿಗಳು ದಕ್ಷಿಣ ರಾಜ್ಯಗಳಲ್ಲಿ ಲಾಬಿ ನಡೆಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಇತ್ತೀಚೆಗಷ್ಟೇ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ, ಭಾರತ ರಾಷ್ಟ್ರ ಸಮಿತಿಯ ನಾಯಕಿ ಕೆ ಕವಿತಾ ಅವರ ಮಾಜಿ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿಬಾಬು ಗೋರಂಟ್ಲಾ ಅವರನ್ನು ಸಿಬಿಐ ಬಂಧಿಸಿತ್ತು.

ಇಂದು ನನ್ನ ಜೀವನದ ಸಾರ್ಥಕ ದಿನ: ಬಿಎಸ್‍ವೈ

ನಿನ್ನೆ, ಸಿಸೋಡಿಯಾ ಅವರ ಕಂಪ್ಯೂಟರ್‍ನಲ್ಲಿ ಕರಡು ಟಿಪ್ಪಣಿ ಕಂಡುಬಂದಿದೆ ಎಂದು ಸಿಬಿಐ ಹೇಳಿದೆ, ಇದು ಮದ್ಯದ ಕಂಪನಿಗಳಿಗೆ ಲಾಭದ ಮಾರ್ಜಿನ್ ಷರತ್ತುಗಳನ್ನು ಶೇಕಡಾ 5 ರಿಂದ 12 ಕ್ಕೆ ಬದಲಾಯಿಸಲಾಗಿದೆ ಎಂದು ತೋರಿಸುತ್ತಿದೆ ಎಂಬುದು ಬಹಿರಂಗಗೊಂಡಿದೆ ಎನ್ನುವುದು ಸಿಬಿಐ ವಾದವಾಗಿದೆ.

Manish Sisodia, moves, Supreme Court, against, arrest, CBI,

Articles You Might Like

Share This Article