ಸಿಬಿಐಯಿಂದ ಸಿಸೋಡಿಯಾ ತೀವ್ರ ವಿಚಾರಣೆ

Social Share

ನವದೆಹಲಿ,ಅ.17- ದೆಹಲಿಯ ಅಮ್ ಆದ್ಮಿ ಸರ್ಕಾರದ ಉಪಮುಖ್ಯ ಮಂತ್ರಿ ಮನೀಶ್ ಸಿಸೋಡಿಯ ಅವರನ್ನು ಸಿಬಿಐ ಇಂದು ತೀವ್ರ ವಿಚಾರಣೆಗೊಳಪಡಿಸಿದೆ. ದೆಹಲಿ ಸರ್ಕಾರದ ಅಬಕಾರಿ ನೀತಿ ಜಾರಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗೌರ್ನರ್ ವಿನಯ್‍ಕುಮಾರ್ ಸಕ್ಸೇನ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ್ದರು.

ಅದರ ಅನುಸಾರ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೇರಿದಂತೆ ವಿವಿಧ ಸೆಕ್ಷನ್‍ಗಳಡಿ ಸಿಬಿಐ ಪ್ರಕರಣ ದಾಖಲಿಸಿ ಹಲವಾರು ಭಾಗಗಳಲ್ಲಿ ಶೋಧ ಕಾರ್ಯಚರಣೆ ನಡೆಸಿತ್ತು. ಈ ವೇಳೆ ದೊರೆತ ದಾಖಲಾತಿಗಳು ಹಾಗೂ ವಿವಿಧ ಸಾಕ್ಷಿಗಳ ಹೇಳಿಕೆ ಆಧರಿಸಿ ಸಿಶೋಡಿಯಾ ಅವರ ವಿಚಾರಣೆ ನಡೆಸಲಾಗುತ್ತಿದೆ.

ಬೆಳಗ್ಗೆ 11.15ಕ್ಕೆ ಸಿಶೋಡಿಯಾ ಸಿಬಿಐ ಕಚೇರಿಗೆ ಆಗಮಿಸಿದರು. ಇದಕ್ಕೂ ಮುನ್ನ ಅವರು ದೆಹಲಿಯಲ್ಲಿನ ತಮ್ಮ ಪಕ್ಷದ ಕಚೇರಿಗೆ ಭೇಟಿ ನೀಡಿದರು. ನಂತರ ರಾಜಘಾಟ್‍ಗೆ ತೆರಳಿ ಮಹಾತ್ಮ ಗಾಂಧೀಜಿಯವರ ಪುಣ್ಯಭೂಮಿಗೆ ನಮಿಸಿದರು.

ತಮ್ಮ ಮನೆ ಬಳಿ ನೆರೆದಿದ್ದ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಸಿಬಿಐ ಕಚೇರಿಗೆ ಆಗಮಿಸಿದರು. ದಾರಿಯುದ್ದಕ್ಕೂ ವ್ಯಾಪಕ ಬಿಗಿಭದ್ರತೆ ಆಯೋಜಿಸಲಾಗಿತ್ತು. ಮನೀಶ್ ಸಿಶೋಡಿಯಾಗಿಂತಲೂ ಮೊದಲು ಸಿಬಿಐ ಆಂಧ್ರಪ್ರದೇಶದ ವೈಎಸ್‍ಆರ್ ಕಾಂಗ್ರೆಸ್‍ನ ಲೋಕಸಭಾ ಸದಸ್ಯ ಮಗುನಾಥ್ ಶ್ರೀನಿವಾಸಲು ರೆಡ್ಡಿ ಅವರ ಪುತ್ರ ರಾಘವ್ ರೆಡ್ಡಿಯನ್ನು ವಿಚಾರಣೆಗೊಳಪಡಿಸಿತ್ತು.

Articles You Might Like

Share This Article