ಈ ವರ್ಷದ ಕೊನೆಯ ‘ಮನ್ ಕೀ ಬಾತ್‍’, ಇಲ್ಲಿದೆ ಹೈಲೈಟ್ಸ್

Social Share

ನವದೆಹಲಿ,ಡಿ.25- ಪ್ರಧಾನಿ ನರೇಂದ್ರಮೋದಿ ಅವರು ಜನಪ್ರಿಯ ರೇಡಿಯೋ ಸರಣಿ ಮನ್ ಕೀ ಬಾತ್‍ನ ವರ್ಷದ ಕೊನೆ ಹಾಗೂ 96ನೇ ಆವೃತ್ತಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. ಕೋವಿಡ್ ಹಿನ್ನಲೆಯಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ.

ಒಂದು ವರ್ಷದ ದೇಶದ ಸಾಧನೆಗಳು ಮತ್ತು ಪ್ರಮುಖ ಘಟನೆಗಳನ್ನು ಸ್ಮರಿಸಿಕೊಂಡಿರುವ ಪ್ರಧಾನಿಯವರು, ಸ್ವಾವಲಂಬಿ ಭಾರತಕ್ಕೆ ದೇಶದ ಎಲ್ಲರ ಸಹಕಾರ ಮತ್ತು ಸಹಭಾಗಿತ್ವ ಮಹತ್ವದ್ದಾಗಿದೆ ಎಂದು ಪ್ರಸ್ತಾಪಿಸಿದ್ದಾರೆ.

ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಭಾರತೀಯರು ಜಾಗೃತರಾಗಬೇಕು ಮತ್ತು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಕ್ರಿಸ್‍ಮಸ್ ಮತ್ತು ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣ ಶಿಷ್ಟಾಚಾರಗಳನ್ನು ಪಾಲಿಸಬೇಕು, ಮಾಸ್ಕ್ ಧಾರಣೆ, ಸಾಮಾಜಿಕ ಅಂತರವನ್ನು ಪಾಲಿಸಿ ಈ ಮೂಲಕ ಸೋಂಕಿನಿಂದ ದೂರು ಉಳಿದ ಸಂಭ್ರಮಾಚರಣೆ ಮಾಡಿ ಎಂದು ಕರೆ ನೀಡಿದ್ದಾರೆ.

ಪಾಕಿಸ್ತಾನದ ಗಡಿ ಭದ್ರತೆಗೆ ಅಮೆರಿಕ ವಿಶೇಷ ಅನುದಾನ

ಚೀನಾದಲ್ಲಿ ಸೋಂಕು ಹೆಚ್ಚಾಗುತ್ತಿದ್ದಂತೆ ಭಾರತ ಸರ್ಕಾರ ಹಲವು ಕ್ರಮಗಳನ್ನು ಅನುಸರಿಸಿದೆ. ಈಗಾಗಲೇ ವೈದ್ಯಕೀಯ ಸೇವೆಗಳನ್ನು ಉನ್ನತ ದರ್ಜೆಗೇರಿಸಲಾಗಿದೆ. ಸೋಂಕು ನಿಯಂತ್ರಣಕ್ಕೆ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಹಲವಾರು ಪೂರ್ವಭಾವಿ ಸಭೆಗಳು ನಡೆದಿವೆ. ದೇಶದಲ್ಲಿ ಲಸಿಕೀಕರಣ, ಸೋಂಕಿನ ವಿರುದ್ಧದ ಹೋರಾಟಕ್ಕೆ ಪ್ರಬಲ ಅಸ್ತ್ರವಾಗಿದೆ ಎಂದು ಅವರು ಹೇಳಿದ್ದಾರೆ.

ದೇಶದ ಜನರ ಬಲ, ಸಹಕಾರ ನಮಗೆ ಜಯವನ್ನು ವಿಸ್ತರಿಸಲು ಮತ್ತು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗಿದೆ. 2022 ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ ಮತ್ತು ಹಲವಾರು ಸ್ಪೂರ್ತಿಗಳಿಗೆ ಕಾರಣವಾಗಿತ್ತು. ಅಮೃತ ಕಾಲ ಆರಂಭವಾಗಿದ್ದು, ದೇಶ ಹೊಸ ಉತ್ತುಂಗಕ್ಕೆ ಹೆಜ್ಜೆ ಇಟ್ಟಿದೆ. ಜನರು ಒಂದಕ್ಕಿಂತ ಹೆಚ್ಚಿನದ್ದನ್ನು ಪಡೆಯುತ್ತಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ.

ಕ್ರಿಸ್‍ಮಸ್ ಸಂಭ್ರಮಾಚರಣೆಯ ಶುಭಾಷಯ ಕೋರಿರುವ ಪ್ರಧಾನಿಯವರು, ಜೀಸಸ್ ಕ್ರೈಸ್ಟ್ ಜೀವನ ಮತ್ತು ಪ್ರತಿಪಾದನೆಗಳನ್ನು ಮೌಲ್ಯಯುತವಾಗಿವೆ ಎಂದಿದ್ದಾರೆ.

ಇದೇ ವೇಳೆ ಮಾಜಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 98ನೇ ಜನ್ಮ ದಿನದ ಶುಭಾಷಯವನ್ನು ಹಂಚಿಕೊಂಡಿರುವ ಪ್ರಧಾನಿ, ಅಟಲ್ ಜೀ ಅವರು ದೇಶದ ಶಿಕ್ಷಣ, ವಿದೇಶಾಂಗ ನೀತಿ, ಮೂಲಸೌಲಭ್ಯ ಸೇರಿದಂತೆ ಎಲ್ಲ ವಲಯಗಳಲ್ಲೂ ಉನ್ನತ ಸಾಧನೆಗಳನ್ನು ತಲುಪಿದ್ದರು ಎಂದು ಹೇಳಿದ್ದಾರೆ.

ಹಕ್ಕಿಜ್ವರ ಭೀತಿ : ಕೇರಳದಲ್ಲಿ 6 ಸಾವಿರಕ್ಕೂ ಹೆಚ್ಚು ಪಕ್ಷಿಗಳ ಮಾರಣಹೋಮ

ಭಾರತ ಇಂದು ವಿಶ್ವದ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ. 220 ಕೋಟಿ ಕೋವಿಡ್ ಡೋಸ್‍ಗಳನ್ನು ನೀಡಿ ವಿಶ್ವ ದಾಖಲೆ ನಿರ್ಮಿಸಲಾಗಿದೆ. ಸ್ವಾವಲಂಬಿ ಭಾರತದ ಭಾಗವಾಗಿ ಐಎನ್‍ಎಸ್ ವಿಕ್ರಾಂತ್ ಯುದ್ಧ ವಿಮಾನಗಳ ನೆಲೆದಾಣವಾದ ಹಡಗನ್ನು ಹೊಂದಿದೆ. ಬಾಹ್ಯಾಕಾಶ, ಡ್ರೋಣ್ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಯಶಸ್ಸು ಸಿಕ್ಕಿದೆ ಎಂದು ಸ್ಮರಿಸಿಕೊಂಡಿದ್ದಾರೆ.

ಕ್ರೀಡಾ ವಲಯದಲ್ಲೂ ಭಾರತ ಇತಿಹಾಸ ಸೃಷ್ಟಿಸಿದೆ. ಕಾಮನ್ ವೆಲ್ತ್, ಒಲಿಂಪಿಕ್, ಪ್ಯಾರಾಲಿಂಪಿಕ್, ಮಹಿಳಾ ಹಾಕಿಯಲ್ಲಿ ಪದಕಗಳ ಸುರಿಮಳೆಯಾಗಿದೆ ಎಂದಿದ್ದಾರೆ.

#MannkiBaat, #COVID19, #vigilant, #PMModi

Articles You Might Like

Share This Article