ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್

Social Share

ಬೆಂಗಳೂರು, ಆ.21- ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ. ಹಿರಿಯ ಪುತ್ರ ಮನೋರಂಜನ್ ದೂರದ ಸಂಬಂಧಿ ಸಂಗೀತ ಅವರನ್ನು ಕೈ ಹಿಡಿದಿದ್ದಾರೆ. ನಿನ್ನೆ ಸಂಜೆ ಅರಮನೆ ಮೈದಾನದಲ್ಲಿ ಸುಂದರವಾಗಿ ಅಲಂಕೃತಗೊಂಡಿದ್ದ ಅರತಕ್ಷತೆ ವೇದಿಕೆಯಲ್ಲಿ ನವದಂಪತಿ ಕಂಗೊಳಿಸುತ್ತಿದ್ದಿರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಹಂಸಲೇಖ, ರಾಕ್‍ಲೈನ್ ವೆಂಕಟೇಶ್, ಖುಷ್ಬು, ಮಾಸ್ಟರ್ ಆನಂದ್, ಉಮಾಶ್ರೀ, ಸಿ.ಟಿ.ರವಿ ಸೇರಿದಂತೆ ಅನೇಕ ರಂಗಗಳ ಗಣ್ಯರು ಆಗಮಿಸಿ ನವಜೋಡಿಯನ್ನು ಹಾರೈಸಿದರು.
ಇಂದು ಮುಂಜಾನೆ ನಡೆದ ಶುಭ ಮುಹೂರ್ತದಲ್ಲಿ ಮನೋರಂಜನ್ ಮತ್ತು ಸಂಗೀತಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

ರವಿಚಂದ್ರನ್ ಅವರ ಮನೆಯಲ್ಲಿ ಇದು ಎರಡನೆ ಸಂತಸದ ಕಾರ್ಯ. 2019ರಲ್ಲಿ ಪುತ್ರಿ ಗೀತಾಂಜಲಿ ಅವರ ವಿವಾಹವನ್ನು ಅದ್ಧೂರಿಯಾಗಿ ಮಾಡಿದ್ದರು. ಆ ಸಂದರ್ಭದಲ್ಲಿ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ ಸೇರಿದಂತೆ ದಕ್ಷಿಣ ಭಾರತದ ಹೆಸರಾಂತ ನಟ-ನಟಿಯರು ಆಗಮಿಸಿ ಹಾರೈಸಿದ್ದನ್ನು ನಾವು ನೆನಪಿಸಿಕೊಳ್ಳಬಹುದು.

ಆದರೆ ಮಗನ ಮದುವೆಯನ್ನು ಸಿಂಪಲ್ಗಿ ಮಾಡಲು ನಿರ್ಧರಿಸಿ ಹೆಚ್ಚು ಆಡಂಬರವಿಲ್ಲದೆ ಮುಗಿಸಿದ್ದಾರೆ. ತಮ್ಮ ದೂರದ ಸಂಬಂಧದಲ್ಲಿ ಹುಡುಕಿ ಅರೆಂಜ್ ಮ್ಯಾರೇಜ್ ಮಾಡಿದ್ದಾರೆ. ವಧು ಅನ್ವೇಷಣೆಯಲ್ಲಿ ತೊಡಗಿರಬೇಕಾದರೆ ಸಂಗೀತಾ ಅವರ ಮನೆಯ ಕಡೆಯಿಂದ ಪ್ರಪೋಸಲ್ ಬಂದ ಮೇಲೆ ಎರಡು ಕುಟುಂಬಗಳು ಒಪ್ಪಿ ವಿವಾಹಕ್ಕೆ ಸಮ್ಮತಿ ನೀಡಿದ್ದವು.

ಮೊದಲು ಪೋಷಕರು ಭೇಟಿಯಾದರು. ನಂತರ ಸಂಗೀತ ಮತ್ತು ನಾನು ಭೇಟಿಯಾಗಿದ್ದಾವು. ನಾನು ನಟನಾಗಿರುವುದರಿಂದ ನನ್ನ ಬಗ್ಗೆ ತಿಳಿದುಕೊಳ್ಳಲು ಆಕೆಗೆ ಸಮಯ ನೀಡಿದ್ದೆ. ನಂತರ ನಾವಿಬ್ಬರೂ ಒಬ್ಬರನ್ನೊಬ್ಬರು ಅರಿತುಕೊಂಡೆವು ಎಂದು ಮನೋರಂಜನ್ ಹೇಳಿಕೊಂಡಿದ್ದರು.

ತಂದೆಯಂತೆ ಸಿನಿಮಾ ರಂಗದಲ್ಲಿ ತುಂಬಾ ಬಿಜಿ ಇರುವ ನಟ. 2017ರಲ್ಲಿ ಸಾಹೇಬ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬೃಹಸ್ಪತಿ, ಮುಗಿಲ್ ಪೇಟೆ, ಪ್ರಾರಂಭ ಚಿತ್ರಗಳಲ್ಲಿ ಅಭಿನಯಿಸಿ ಗಾಂನಗರದ ಭರವಸೆಯ ನಟ ಎನಿಸಿಕೊಂಡರು. ಸೋದರ ವಿಕ್ರಂ ಕೂಡ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಹೀಗೆ ರವಿಚಂದ್ರನ್ ಫ್ಯಾಮಿಲಿ ಸಂಪೂರ್ಣವಾಗಿ ಕಲಾ ಬದುಕನ್ನಪ್ಪಿಕೊಂಡು ಈಶ್ವರಿ ಸಂಸ್ಥೆಯನ್ನು ಬೆಳೆಸುತ್ತಾ ಕನ್ನಡ ಚಿತ್ರರಂಗಕ್ಕೆ ಆದರ್ಶ ಕುಟುಂಬ ಎನಿಸಿಕೊಂಡಿದೆ.

Articles You Might Like

Share This Article