ಅಹಮದಾಬಾದ್ ಏರ್‌ಪೋರ್ಟ್‌ನ RT-PCR ಕೇಂದ್ರಕ್ಕೆ ಆರೋಗ್ಯ ಸಚಿವರ ಭೇಟಿ

Social Share

ಅಹಮದಾಬಾದ್,ಜ.1- ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಪ್ರಕರಣಗಳ ಹೆಚ್ಚಳದ ನಡುವೆ ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಗುಜರಾತ್‍ನ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆರ್‍ಟಿ ಪಿಸಿಆರ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪ್ರಯಾಣಿಕರು ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಅಪಾಯವಿರುವ ದೇಶಗಳಿಂದ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರಿಗೆ ಪರೀಕ್ಷೆ ನಡೆಸುವುದೂ ಸೇರಿದಂತೆ ಭಾರತವು ಹೆಚ್ಚುವರಿ ಕ್ರಮಗಳನ್ನು ಕಡ್ಡಾಯಗೊಳಿಸಿದೆ.
ಅಪಾಯವಿರುವ ದೇಶಗಳಿಂದ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರಿಗೆ ಪರೀಕ್ಷೆ ನಡೆಸುವುದೂ ಸೇರಿದಂತೆ ಭಾರತವು ಹೆಚ್ಚುವರಿ ಕ್ರಮಗಳನ್ನು ಕಡ್ಡಾಯಗೊಳಿಸಿದೆ.
ಸರ್ದಾರ್ ವಲ್ಲಭ ಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ಕಟ್ಟಡ ಸೌಕರ್ಯವನ್ನು ಸ್ಥಾಪಿಸಲಾಗಿದೆ. ಈ ಕಟ್ಟಡದಲ್ಲಿ 220 ಪ್ರಯಾಣಿಕರಿಗೆ ಸಾಲುವಷ್ಟು ಕಾಯುವ ಪ್ರದೇಶ, 17 ನೋಂದಣಿ ಕೌಂಟರ್‍ಗಳು, ಎಂಟು ಮಾದರಿ ಸಂಗ್ರಹಣಾ ಬೂತ್‍ಗಳು(120 ಆರ್‍ಟಿ-ಪಿಸಿಆರ್ ಯಂತ್ರಗಳು ಸೇರಿದಂತೆ) ಮುಂತಾದ ಅನುಕೂಗಳು ಇವೆ.

Articles You Might Like

Share This Article