ರಾಯಚೂರು,ಜೂನ್.1- ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು,ಇದರ ನಡುವೆ ಇದೇ ಮೊದಲ ಭಾರಿಗೆ ಹುಂಡಿಯಲ್ಲಿ ದಾಖಲೆ ಮಟ್ಟದ ಕಾಣಿಕೆ ಸಂಗ್ರಹವಾಗಿದೆ.
ದೇಶದ ನಾನಾ ರಾಜ್ಯಗಳಿಂದ ಶ್ರಿ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಕಳೆದ ಮೇ ತಿಂಗಳಲ್ಲಿ ಭಕ್ತಸಾಗರವೇ ಹರಿದುಬಂದಿದ್ದು, ಹುಂಡಿಗೆ ಸಮರ್ಪಿಸಿದ ಕಾಣಿಕೆಯನ್ನು ಎಣಿಸಲಾಗಿದ್ದು 3 ಕೋಟಿ 53 ಲಕ್ಷ ರೂ. ಸಂಗ್ರಹವಾಗಿದೆ ಎಂದು ದೇವಸ್ಥಾನ ಮೂಲಗಳು ತಿಳಿಸಿವೆ.
ಶ್ರೀಮಠದ ವತಿಯಿಂದ ಬರುವ ಭಕ್ತರಿಗೆ ಸೌಲಭ್ಯ,ಅನ್ನಸಂತರ್ಪಣೆ ಹಾಗು ಸ್ವಚ್ಚತೆಗೆ ಆದ್ಯತೆ ನೀಡಲಾಗಿದ್ದು ಕಳೆದ 34 ದಿನಗಳಲ್ಲಿ ರಾಯರ ಹುಂಡಿಯಲ್ಲಿ 3.53 ಕೋಟಿ ರೂ. ಕಾಣಿಕೆ ಬಂದಿರುವುದು ದಾಖಲೆಯಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾಂಗ್ರೆಸ್ ಶಾಸಕನ ವಿಚಾರಣೆ
ಶ್ರೀಮಠದ ಸಿಬ್ಬಂದಿ, ಸೇವಕರು, ನೂರಾರು ಭಕ್ತರು ನಡೆಸಿದ ಎಣಿಕೆ ಕಾರ್ಯದಲ್ಲಿ ರು.3,46,20,432 ಮೌಲ್ಯದ ನೋಟುಗಳು, ರು.7,59,420 ಮೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು ರು.3,53,79,852 ರುಪಾಯಿಗಳು ಹುಂಡಿಯಲ್ಲಿ ಸಂಗ್ರಹವಾಗಿದೆ.
ಇದರ ಜೊತೆಗೆ 197 ಗ್ರಾಂ. ಚಿನ್ನ, 1 ಕೆ.ಜಿ. 187 ಗ್ರಾಂ. ಬೆಳ್ಳಿಯನ್ನು ಭಕ್ತರು ಹುಂಡಿಯಲ್ಲಿ ಹಾಕಿದ್ದಾರೆ ಬೇಸಿಗೆ ರಜೆ ಹಿನ್ನೆಲೆ ಕಳೆದ ಎಪ್ರಿಲ್- ಮೇ ತಿಂಗಳಲ್ಲಿ ಕೋಟ್ಯಂತರ ಭಕ್ತರು ರಾಯರ ದರ್ಶನ ಪಡೆದಿದ್ದಾರೆ.
#Mantralaya, #temple, #receives, #record, #hundi, #donation,