ಮುಂಬೈ, ಆ 14 – ಇಲ್ಲಿನ ಮುಂಬೈ-ಪುಣೆ ಎಕ್ಸ್‍ಪ್ರೆಸ್ ವೇನಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಶಿವಸಂಗ್ರಾಮ್ ಪಕ್ಷದ ನಾಯಕ ಮತ್ತು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಮಾಜಿ ಸದಸ್ಯ ವಿನಾಯಕ್ ಮೇಟೆ (52) ಅವರು ಸಾವನ್ನಪ್ಪಿದ್ದಾರೆ .
ರಾಯಗಡ ಜಿಲ್ಲೆಯ ರಸಾಯನಿ ಪೊಲೀಸ್ ಠಾಣೆ ವ್ಯಾಪ್ತಿಯ ಮಡಪ್ ಬಳಿ ಮುಂಜಾನೆ 5 ಗಂಟೆ ವೇಳೆಯಲ್ಲಿ ಪುಣೆಯಿಂದ ಮುಂಬೈಗೆ ತೆರಳುತ್ತಿದ್ದಾಗ ಅವರಿದ್ದ ಕಾರಿಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಕಾರಿನ ಚಾಲಕ, ವಿನಾಯಕ್ ಮೇಟೆ ಮತ್ತೊಬ್ಬರನ್ನು ಪನ್ವೇಲನ್ ಎಂಜಿಎಂ ಆಸ್ಪತ್ರೆಯಲ್ಲಿ ಅವರನ್ನು ಬೆಳಿಗ್ಗೆ 6.20 ಕ್ಕೆ ಕರೆತರಲಾಯಿತು.ಆದರೆ ಆಸ್ಪತ್ರೆಗೆ ಕರೆತರುವ ಮೊದಲು ವಿನಾಯಕ್ ಮೇಟೆ ಅವರು ನಿಧನರಾದರುವೈದ್ಯರು ಹೇಳಿದರು.
ಮರಾಠಾ ಮೀಸಲಾತಿಯ ನಾಯಕರಾಗಿದ್ದ ಅವರು ಹಲವು ಹೊರಾಟ ಮಾಡಿದ್ದಾರು ಮೇಟೆ ಅವರ ಸಾವು ತಮಗೆ ಆಘಾತ ತಂದಿದೆ ಎಂದು ಮಹಾರಾಷ್ಟ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
ಅವರು ಮರಾಠ ಮೀಸಲಾತಿ ವಿಷಯವನ್ನು ಪ್ರಾಮಾಣಿಕವಾಗಿ ಅನುಸರಿಸುತ್ತಿದ್ದರು, ಇದು ನಮಗೆ ಮತ್ತು ಮರಾಠ ಸಮುದಾಯಕ್ಕೆ ದೊಡ್ಡ ನಷ್ಟವಾಗಿದೆ ಎಂದು ಪಾಟೀಲ್ ಹೇಳಿದರು.