ಬೆಂಗಳೂರು,ಡಿ.2- ಬೆಳಗಾವಿಯ ಕೆಲ ಭಾಗಗಳಲ್ಲಿ ಮರಾಠ ಶಾಲೆಗಳ ಸ್ಥಾಪನೆಗೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದನ್ನು ನಾವು ತಡೆದಿದ್ದೇವೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಜತ್ತ, ಅಕ್ಕಲಕೋಟೆಯಲ್ಲಿ ಕನ್ನಡಿಗರ ಭಾವನೆಗಳನ್ನು ಅರ್ಥ ಮಾಡಿಕೊಂಡು ನಮ್ಮ ಪ್ರಾಕಾರ ಕನ್ನಡ ಪ್ರಾಥಮಿಕ ಶಾಲೆಗಳ ಬೆಳವಣಿಗೆಗೆ ಹೆಚ್ಚಿನ ಅನುದಾನವನ್ನು ನೀಡಿದೆ. ಇದಲ್ಲದೆ ಅಲ್ಲಿನ ಕನ್ನಡಿಗರಿಗೆ ಸ್ಪಂದಿಸುವ ಕೆಲಸವನ್ನು ಮಾಡಿದೆ ಎಂದರು.
ಇವೆಲ್ಲ ಕಾರಣದಿಂದಾಗಿ ಮಹಾರಾಷ್ಟ್ರದ ಗಡಿ ಗ್ರಾಮಗಳು ಕರ್ನಾಟಕದ ಪರ ನಿಂತಿವೆ ಎಂದು ಇದೇ ವೇಳೆ ಅವರು ಹೇಳಿದರು. ಡಿ.6ರಂದು ಬೆಳಗಾವಿಗೆ ಕೆಲ ಮಹಾರಾಷ್ಟ್ರ ರಾಜ್ಯದ ಸಚಿವರು ಆಗಮಿಸಿ ಮರಾಠಿ ಸಮುದಾಯದವರ ಜತೆ ಸಭೆ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಕನ್ನಡಿಗರಿಗೆ ಯಾವುದೇ ಅಪಮಾನವಾಗದಂತೆ ಭಾಷೆಗೆ ಕುಂದಾಗದಂತೆ ನೋಡಿಕೊಳ್ಳುತ್ತಾರೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರನ್ನು ಸಿಎಂ ಮಾಡ್ತೀವಿ : ಹೆಚ್ಡಿಕೆ
ಗಡಿಭಾಗದಲ್ಲಿ ಕನ್ನಡ ಅಭಿವೃದ್ಧಿಗಾಗಿ ಸಾಂಸ್ಕøತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ ಆಯೋಜನೆಗೆ ತಲಾ ಒಂದು ಲಕ್ಷ ರೂ.ನಂತೆ 350ಕ್ಕೂ ಹೆಚ್ಚು ಸಂಸ್ಥೆಗಳಿಗೆ ನಾಲ್ಕು ಕೋಟಿ ರೂ. ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದರು.
ಎಲ್ಲ ಗಡಿ ಜೆಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಮಾಡಿ ಚರ್ಚೆ ನಡೆಸಿದ್ದೇನೆ. ಪ್ರತಿ ತಿಂಗಳು ಗಡಿ ಭಾಗದ ಹಳ್ಳಿಗಳಿಗಳಿಗೆ ಜಿಲ್ಲಾಧಿಕಾರಿ ಗಳು ಭೇಟಿ ನೀಡಬೇಕೆಂದು ಸೂಚನೆ ನೀಡಿದ್ದೇನೆ. ಕೇರಳ ಗಡಿಭಾಗದ ಅಲ್ಪ ಸಂಖ್ಯಾತರ ಯೋಗಕ್ಷೇಮಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗಳಿಗೆ ಸೂಚಿದ್ದೇನೆ. ಕಾಸರಗೂಡಿನಲ್ಲಿ ಕೈಯ್ಯಾರ ಕಿಞಣ್ಣ ರೈ ಹಾಗೂ ಬಾಗಲಕೋಟೆಯ ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ ಮತ್ತು ಕನ್ನಡ ಭವನವನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಈಗಾಗಲೇ ಸರ್ಕಾರ ತೀರ್ಮಾನಿಸಿದೆ. ಇದಕ್ಕಾಗಿ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಸದ್ಯದಲ್ಲೇ ಅದು ಚಾಲನೆಗೊಳ್ಳಲಿದೆ ಎಂದರು. ಗಡಿ ಭಾಗದ ಪರಿಶಿಷ್ಟ ಜಾತಿ, ಪಂಗಡದದವರ ಕಲ್ಯಾಣಕ್ಕಾಗಿ ಪ್ರತ್ಯೇಕ ಅನುದಾನವನ್ನು ಪ್ರಾಧಿಕಾರದ ವತಿಯಿಂದ ತೆಗದಿರಿಸಲಾಗಿದೆ.
ಉನ್ನತ ಶಿಕ್ಷಣ ಪರಿಷತ್ತಿಗೆ 10 ಮಂದಿ ನಾಮನಿರ್ದೇಶನ
ಎಂಟು ಭಾಗದ ವಿಶ್ವವಿದ್ಯಾಲಯ ಮೂಲಕ ಗಡಿ ಭಾಗದ ಜನರ ಸಮಗ್ರ ಅಧ್ಯಯನಕ್ಕೆ ಮೂರ್ನಾಲ್ಕು ಸುತ್ತು ಸಭೆ ನಡೆಸಲಾಗಿದೆ. ಗ್ರಾಮ ಪಂಚಾಯತಿಗಳಲ್ಲಿ ಸಾಂಸ್ಕøತಿಕ ನಿ ಸ್ಥಾಪಿಸುವಂತೆ ಕನಿಷ್ಠ ಐದು ಲಕ್ಷ ರೂಪಾಯಿ ಇಡುವಂತೆ ಪತ್ರ ಬರೆಯಲಾಗಿದೆ. 4 ರಂಗಾಯಣಗಳಿಗೆ ಗಡಿ ಭಾಗದ ಕಲೆಯನ್ನು ಪ್ರದರ್ಶಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಆಕಾಶವಾಣಿ ಮೂಲಕ ಅವರ ಕಲೆಯನ್ನು ಪ್ರದರ್ಶನ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಗಡಿ ನಾಡ ಕನ್ನಡಿಗರಿಗೆ ಪ್ರಮಾಣ ಪತ್ರ ಜತೆಗೆ ಗಡಿನಾಡ ಚೇತನ ಪ್ರಶಸ್ತಿಯನ್ನು ಕೂಡ ಕೊಡಲಾಗುವುದು ಎಂದು ಸೋಮಶೇಖರ್ ತಿಳಿಸಿದರು. ಈ ಹಿಂದೆ ಬರಗೂರು ರಾಮಚಂದ್ರಪ್ಪ, ವಾಟಾಳ್ ನಾಗರಾಜ್ ಅವರು ವರದಿ ನೀಡಿದ್ದಾರೆ. ನಾವು ಕೂಡ ಅದನ್ನು ವೈಜ್ಞಾನಿಕ ರೀತಿಯಲ್ಲಿ ಸಿದ್ಧಪಡಿಸಿ ಜಾರಿಗೊಳಿಸಲು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
BIG NEWS : ವಾಣಿಜ್ಯ ಇಲಾಖೆಯ 18 ಅಧಿಕಾರಿಗಳ ಅಮಾನತು..!
ಇದಕ್ಕೂ ಮುನ್ನ ಡಾ.ಸಿ.ಸೋಮಶೇಖರ್ ಅವರ ಅಧ್ಯಕ್ಷ ಅವಯ ಎರಡು ವರ್ಷಗಳ ಪ್ರಾಧಿಕಾರದ ಸಾಧನೆಯ ಸಾಧನಾ ದರ್ಶನ ಕಿರು ಹೊತ್ತಿಗೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಉಪಸ್ಥಿತರಿದ್ದರು.
Marathi, school, Belgaum, Somashekhar,