ಪ್ರೀತಿಸಿ ಮದುವೆಯಾಗಿ ಕಳ್ಳತನಕ್ಕಿಳಿದಿದ್ದ ದಂಪತಿ ಅರೆಸ್ಟ್

Social Share

ಬೆಂಗಳೂರು,ಡಿ.4- ಮನೆಗಳವು ಹಾಗೂ ವಾಹನ ಕದಿಯುತ್ತಿದ್ದ ದಂಪತಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿ, ನಗದು ಸೇರಿದಂತೆ 5.25 ಲಕ್ಷ ಮೊತ್ತದ ಚಿನ್ನ, ಬೆಳ್ಳಿ ಆಭರಣ ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬನಶಂಕರಿ 3ನೇ ಹಂತ ವೀರಭದ್ರ ನಗರದ ನಿವಾಸಿ ನಾಗರಾಜು ಅಲಿಯಾಸ್ ಎಸಿ(24) ಹಾಗೂ ರಮ್ಯಾ(23) ಬಂಧಿತ ದಂಪತಿ. ಇವರು ಪ್ರೀತಿಸಿ ವಿವಾಹವಾಗಿದ್ದಾರೆ. ಆರೋಪಿಗಳಿಂದ 65 ಗ್ರಾಂ ತೂಕದ ಚಿನ್ನದ ಆಭರಣಗಳು, 500 ಗ್ರಾಂ ತೂಕದ ಬೆಳ್ಳಿ ವಸ್ತು, 2 ದ್ವಿಚಕ್ರ ವಾಹನಗಳು, ಒಂದು ಮೊಬೈಲ್ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ ಎರಡು ಕಬ್ಬಿಣದ ರಾಡುಗಳನ್ನು ವಶಪಡಿಸಿಕೊಳ್ಳಿಸಲಾಗಿದೆ.

ಗುಜರಾತ್‍ ಚುನಾವಣೆ : ನಾಳೆ 2ನೇ ಹಂತದ ಮತದಾನ

ಆರೋಪಿಗಳ ಬಂಧನದಿಂದ ಜ್ಞಾನಭಾರತಿ, ಮಾದನಾಯಕನಹಳ್ಳಿ ಹಾಗೂ ರಾಜರಾಜೇಶ್ವರಿ ನಗರದಲ್ಲಿ ನಡೆದಿದ್ದ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದೆ. ಈತ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಈತನ ಮೇಲೆ ಹಲವು ಪ್ರಕರಣಗಳು ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನ್ನಭಾಗ್ಯಕ್ಕೆ ಕನ್ನ : ನಕಲಿ ನ್ಯಾಯಬೆಲೆ ಅಂಗಡಿಗಳಿಂದ ರೇಷನ್ ಎತ್ತುವಳಿ

#MmarriedCouple, #vehiclestheft, #arrested,

Articles You Might Like

Share This Article